ATM ನಲ್ಲಿ ಈ ರೀತಿಯ ವ್ಯವಹಾರ ಮಾಡಿದರೆ ನಿಮಗೆ ಲಾಸ್, ರಿಸರ್ವ್ ಬ್ಯಾಂಕ್ ಹೊಸ ನಿಯಮ

Story Highlights

RBI Guidelines: ಹೆಚ್ಚು ATM ಬಳಕೆ ಮಾಡುವವರಿಗೆ ರಿಸರ್ವ್ ಬ್ಯಾಂಕ್ ನ ಈ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ಮುಖ್ಯವಾಗಿ ಕ್ರೆಡಿಟ್ ಕಾರ್ಡ್ ಇದ್ದವರು ಏಟಿಎಂ ನಲ್ಲಿ ಈ ರೀತಿಯ ವ್ಯವಹಾರ ಮಾಡಬೇಡಿ

ಕೈಯಲ್ಲಿ ದುಡ್ಡಿದರೆ ಈ ಕಾಲದಲ್ಲಿ ಬೆಲೆ. ಹೀಗಾಗಿ ಪ್ರತಿಯೊಬ್ಬರು ಕೂಡ ಅಲ್ಪ ಸ್ವಲ್ಪ ಉಳಿತಾಯ ಹಾಗೂ ಜೀವನ ನಿರ್ವಹಣೆಗಾಗಿ ಒಂದಲ್ಲ ಒಂದು ದುಡಿಮೆಯನ್ನು ಅವಲಂಬಿಸಿಕೊಂಡು ಇರುತ್ತಾರೆ. ಆದರೆ ತಿಂಗಳು ಆರಂಭದಲ್ಲಿ ಖಾತೆ (Account) ಯಲ್ಲಿರುವ ಹಣವು ತಿಂಗಳ ಕೊನೆಯಲ್ಲಿರುವುದಿಲ್ಲ. ಹೀಗಾಗಿ ಅಲ್ಪ ಸಂಬಳಕ್ಕೆ ದುಡಿಯುವ ಜನರು ಹೆಚ್ಚಾಗಿ ಆದಷ್ಟು ಖರ್ಚು ವೆಚ್ಚ (Expensive) ಗಳ ಬಗ್ಗೆ ಗಮನ ಹರಿಸುತ್ತಾರೆ. ಅದಲ್ಲದೇ ಕೆಲವರಂತೂ ಕ್ರೆಡಿಟ್ ಕಾರ್ಡ್ (Credit Card) ಗಳನ್ನು ಹೆಚ್ಚಾಗಿ ಅವಲಂಬಿಸಿಕೊಂಡಿರುತ್ತಾರೆ. ಆದರೆ ಇದೀಗ ಗ್ರಾಹಕರು ಎಟಿಎಂನಲ್ಲಿ ಈ ಕ್ರೆಡಿಟ್ ಕಾರ್ಡ್ ಗಳ ಮೂಲಕ ಮುಂಗಡ ಹಣವನ್ನು ಪಡೆಯುವ ಸೌಲಭ್ಯವು ಲಭ್ಯವಿದೆ.

ಎಚ್ಚರಿಕೆ ಅಗತ್ಯ
ಎಟಿಎಂ (ATM) ಗೆ ಹೋಗಿ ಕ್ರೆಡಿಟ್ ಕಾರ್ಡ್‌ನಿಂದ ಪಡೆಯುವ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸುವುದು ಮುಖ್ಯ. ಯಾಕಂದ್ರೆ ಇಂದು ಮೋಸದ ವಂಚನೆಗಳು ಹೆಚ್ಚಾಗಿವೆ. ಹಾಗಾದ್ರೆ ಈ ರೀತಿಯಾಗಿ ಎಟಿಎಂ ಬಳಸಿ ಕ್ರೆಡಿಟ್ ಕಾರ್ಡ್ ನಿಂದ ಮುಂಗಡ ಹಣ ತೆಗೆದರೆ ಏನಾಗುತ್ತದೆ. ಆರ್ ಬಿಐ ಹೊಸ ನಿಯಮ (RBI New Rules) ದಲ್ಲಿ ಏನಿದೆ ಎನ್ನುವುದರ ಕಂಪ್ಲೀಟ್ ಡೀಟೇಲ್ಸ್ ಅನ್ನು ನೀವಿಲ್ಲಿ ನೋಡಬಹುದು.

ಕ್ರೆಡಿಟ್ ಕಾರ್ಡ್ ನಿಂದ ಹಣ ಹಿಂಪಡೆದಾಗ ಬೀರುವ ಪರಿಣಾಮಗಳು ಇವು?
ಪ್ರತಿಯೊಬ್ಬರು ಕೂಡ ಎಟಿಎಂಯನ್ನು ಹೊಂದಿರುತ್ತಾರೆ. ಎಟಿಎಂ (ATM) ಗೆ ಹೋಗಿ ಕ್ರೆಡಿಟ್ ಕಾರ್ಡ್ ನಿಂದ ಹಣ ಹಿಂಪಡೆದುಕೊಳ್ಳುವ ಆಯ್ಕೆಯಿರುವುದು ಗೊತ್ತೇ ಇದೆ. ಆದರೆ ಎಟಿಎಂ ಗೆ ಹೋಗಿ ಕ್ರೆಡಿಟ್ ಕಾರ್ಡ್ ನಿಂದ ಹಣವನ್ನು ಪಡೆದುಕೊಂಡರೆ, ಈ ಸಾಲದ ಹಣದ ಮೇಲೆ ಹೆಚ್ಚಿನ ಬಡ್ಡಿ ದರ (Interest) ಗಳನ್ನು ವಿಧಿಸಲಾಗುತ್ತದೆ. ಸಾಲವನ್ನು ತೀರಿಸಲು ಸಮಯಾವಕಾಶ ಕೂಡ ಇರುವುದಿಲ್ಲ. ಅದರೊಂದಿಗೆ ಈ ಕ್ರೆಡಿಟ್ ಕಾರ್ಡ್ ನಿಂದ ಹಣವನ್ನು ಹಿಂಪಡೆದುಕೊಂಡಾಗಿನಿಂದ ಬಡ್ಡಿದರಗಳಲ್ಲಿ ಏರಿಕೆಯಾಗುತ್ತವೆ.

ಶುಲ್ಕ ಪಾವತಿ

ಹೀಗೆ ಬಳಕೆ ಮಾಡುವುದರಿಂದ ಕ್ರೆಡಿಟ್ ಕಾರ್ಡ್( Credit Card) ಬಳಕೆದಾರರು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮುಖ್ಯವಾಗಿ ಕ್ರೆಡಿಟ್ ಸ್ಕೋರ್ (Credit Score) ಮೇಲೆ ನೇರವಾಗಿ ಯಾವುದೇ ಪರಿಣಾಮವನ್ನು ಬೀರದು ಎನ್ನುವುದನ್ನು ಗಮನಿಸಬೇಕು. ಆದರೆ ಇಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯ ಅನುಪಾತವು ಹೆಚ್ಚಾಗಿ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಸಾಧ್ಯತೆಯೂ ಅಧಿಕವಾಗಿದೆ.

If you do this kind of transaction at ATM, you will lose, Reserve Bank has a new rule
Image Credit: Original Source

ಕ್ರೆಡಿಟ್ ಕಾರ್ಡ್ ಬಳಕೆ ಹೇಗೆ?

ಇತ್ತೀಚಿಗೆ ಭಾರತ ಸರ್ಕಾರ ಕ್ರೆಡಿಟ್ ಕಾರ್ಡ್  ಮೂಲಕ UPI ಪೇಮೆಂಟ್ ಮಾಡುವ ಅವಕಾಶ ಕೂಡ ಕಲ್ಪಿಸಿದೆ , ಹೀಗಾಗಿ ಇದರ ಮೂಲಕ ನೀವು ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಯಾವುದೇ ತುರ್ತು ಸಂದರ್ಭ ಇದ್ದರೂ ಕೂಡ ಕ್ರೆಡಿಟ್ ಕಾರ್ಡ್ ಬಳಸಿ ATM ನಿಂದ ಹಣ ಡ್ರಾ ಮಾಡಲೇಬೇಡಿ ಇದರಿಂದಾಗಿ ಹೆಚ್ಚಿನ ಬಡ್ಡಿ ಕಟ್ಟುವ ಪ್ರಸಂಗ ಎದುರಾಗುತ್ತದೆ. ಅಷ್ಟೇ ಅಲ್ಲದೆ ಕಟ್ಟದೆ ಹೋದ ಸಮಯದಲ್ಲಿ ಒಂದು ದಿನ Delay ಆದರೂ ಸಹಿತ ಸಿಬಿಲ್ ಸ್ಕೊರ್ ವಿಪರೀತವಾಗಿ ಇಳಿಯುತ್ತದೆ.

Related Stories