ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು, ಇಲ್ಲವಾದರೆ ಕಾರ್ಡ್ ಅಮಾನ್ಯವಾಗಬಹುದು
ನಮ್ಮ ರಾಜ್ಯದಲ್ಲಿ ಬಹಳಷ್ಟು ಬಿಪಿಎಲ್ ಕಾರ್ಡ್ ದಾರರು ಇದ್ದಾರೆ. ಅವರೆಲ್ಲರು ಬಡತನದ ರೇಖೆಗಿಂತ ಕೆಳಗೆ ಇರುವುದಾಗಿ ತಿಳಿಸಿ, ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಆದರೆ ಈಗ ಸುಮಾರು 9500 ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲಾಗಿದೆ.
ಸರ್ಕಾರವು ಆಗಾಗ ಜನರಿಗಾಗಿ ಹೊಸ ನಿಯಮಗಳನ್ನು (New Rules) ಜಾರಿಗೆ ತರುತ್ತಲೇ ಇರುತ್ತದೆ. ಹಲವು ಸಾರಿ ನಿಯಮಗಳಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತದೆ. ಅದೆಲ್ಲವನ್ನು ನೀವು ತಿಳಿದುಕೊಂಡು ಪಾಲಿಸುತ್ತಾ ಬಂದರೆ, ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ.
ಇದೀಗ ಸರ್ಕಾರವು ರೇಷನ್ ಕಾರ್ಡ್ ಗೆ (Ration Card) ಸಂಬಂಧಿಸಿದ ಹಾಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಆ ನಿಯಮಗಳ ನವೀಕರಣದ ಬಗ್ಗೆ ತಿಳಿಸುತ್ತೇವೆ ನೋಡಿ..
ನಮ್ಮ ರಾಜ್ಯದಲ್ಲಿ ಬಹಳಷ್ಟು ಬಿಪಿಎಲ್ ಕಾರ್ಡ್ ದಾರರು (BPL Ration Card) ಇದ್ದಾರೆ. ಅವರೆಲ್ಲರು ಬಡತನದ ರೇಖೆಗಿಂತ ಕೆಳಗೆ ಇರುವುದಾಗಿ ತಿಳಿಸಿ, ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಆದರೆ ಈಗ ಸುಮಾರು 9500 ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಹಲವು ಜನರು ಬಹಳ ಸಮಯದಿಂದ ಸರ್ಕಾರದ ಸೌಲಭ್ಯ (Govt Benefits) ಪಡೆದು ರೇಶನ್ ಪಡೆಯುತ್ತಿದ್ದಾರೆ. ಆದರೆ ಇದರಲ್ಲಿ ಎಲ್ಲರೂ ನ್ಯಾಯಯುತವಾಗಿ ರೇಷನ್ ಪಡೆಯುತ್ತಿಲ್ಲ.
ಈ ವಿಚಾರ ಬೆಳಕಿಗೆ ಬಂದಿರುವುದು ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ತಿಳಿಸಿದ ಮೇಲೆ.. ಆಗ ವಂಚನೆಗಳು ಬೆಳಕಿಗೆ ಬಂದಿದ್ದು, ಆ ರೀತಿ ಮೋಸ ಮಾಡುವ ವ್ಯಕ್ತಿಗಳ ರೇಷನ್ ಕಾರ್ಡ್ ಅನ್ನು ತಕ್ಷಣವೇ ಕ್ಯಾನ್ಸಲ್ ಮಾಡಲು ಸರ್ಕಾರ ಸೂಚನೆ ನೀಡಿದೆ.
ಈ ವಿಚಾರದ ಬಗ್ಗೆ SDM ಇಂದ ಮಾಹಿತಿ ಸಿಕ್ಕಿದ್ದು, ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಮಾಡಿಸಿಕೊಳ್ಳುವ ಪ್ರಕ್ರಿಯೆ ಆಫ್ಲೈನ್ ಮಾಡಿಸಬಹುದಾಗಿದ್ದ ಕಾರಣ ಉತ್ತರ ಪ್ರದೇಶ ಮತ್ತು ಬಿಹಾರ ಎರಡು ಕಡೆ ವಾಸಸ್ಥಳ ಪ್ರಮಾಣ ಪತ್ರ ಮಾಡಿಸಿಕೊಂಡು, ಎರಡು ಕಡೆ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಸೂಚನೆ ಬಂದ ನಂತರ ಈ ವಿಚಾರಗಳೆಲ್ಲಾ ಬೆಳಕಿಗೆ ಬಂದಿದೆ.
ಹಾಗಾಗಿ ಈಗ ಎಲ್ಲಾ ಜನರು ಕೂಡ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಈ ಪ್ರಕ್ರಿಯೆ ಹೇಗೆ ಎಂದು ತಿಳಿಸುತ್ತೇವೆ ನೋಡಿ..
1. ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
2. ಈಗ ಪ್ರಾರಂಭಿಸಿ ಎನ್ನುವ ಅಯ್ಕೆಯನ್ನು ಸೆಲೆಕ್ಟ್ ಮಾಡಿ
3. ಈ ಆಯ್ಕೆಯಲ್ಲಿ ಜಿಲ್ಲೆ, ರಾಜ್ಯದ ಮಾಹಿತಿ ಜೊತೆಗೆ ಅಡ್ರೆಸ್ ನಮೂದಿಸಿ
4. ಬಳಿಕ ರೇಷನ್ ಕಾರ್ಡ್ ಬೆನಿಫಿಟ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ
5. ಇಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್, ಆಧಾರ್ ನಂಬರ್, ಇಮೇಲ್ ಐಡಿ, ಫೋನ್ ನಂಬರ್ ಎಲ್ಲವನ್ನು ಕೇಳುತ್ತದೆ. ಅದನ್ನು ನಮೂದಿಸಿ
6. ಈಗ ನಿಮ್ಮ ಫೋನ್ ನಂಬರ್ ಗೆ OTP ಬರುತ್ತದೆ
7. OTP ಹಾಕಿದ ಮೇಲೆ ಲಿಂಕಿಂಗ್ ಪ್ರಕ್ರಿಯೆ ಪೂರ್ತಿಯಾಗಿದೆ ಎಂದು ಸ್ಕೀನ್ ಮೇಲೆ ತೋರಿಸುತ್ತದೆ
8. ಇದೆಲ್ಲವೂ ಮುಗಿದ ನಂತರ ಆಧಾರ್ ಕಾರ್ಡ್ ಅನ್ನು ಚೆಕ್ ಮಾಡಿ, ನಂತರ ರೇಷನ್ ಕಾರ್ಡ್ ಜೊತೆಗೆ ಲಿಂಕ್ ಮಾಡಲಾಗುತ್ತದೆ.
ಬೇರೆ ಎಲ್ಲಾ ರಾಜ್ಯದವರಿಗಿಂತ ಹೆಚ್ಚಾಗಿ ಬಿಹಾರ ಮತ್ತು ಯುಪಿ ಜನರು ಈ ಮಾಹಿತಿ ತಿಳಿಯುವುದು ಅವಶ್ಯಕವಾಗಿದೆ.
If you have a ration card then Must Link With Aadhaar
Follow us On
Google News |