India Covid-19 Update; ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 8,586 ಹೊಸ ಕೊರೊನಾ ಪ್ರಕರಣಗಳು
India COVID-19 Update: ದೇಶದಲ್ಲಿ 8,586 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ
India COVID-19 Update: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 8,586 ಹೊಸ ಕೊರೊನಾ ಪ್ರಕರಣಗಳು (Corona Cases) ದಾಖಲಾಗಿವೆ ಎಂದು ಕೇಂದ್ರ ಕುಟುಂಬ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. 9,650 ಸೋಂಕಿತರು ಇತ್ತೀಚೆಗೆ ಚೇತರಿಸಿಕೊಂಡಿದ್ದರೆ, ಸಾಂಕ್ರಾಮಿಕ ರೋಗದಿಂದಾಗಿ 48 ಮಂದಿ ಸಾವನ್ನಪ್ಪಿದ್ದಾರೆ.
ಹೊಸ ಪ್ರಕರಣಗಳೊಂದಿಗೆ, ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 4,43,57,546 ಕ್ಕೆ ತಲುಪಿದೆ. ಈ ಪೈಕಿ 4,37,33,624 ಸಂತ್ರಸ್ತರು ಚೇತರಿಸಿಕೊಂಡಿದ್ದಾರೆ. ವೈರಸ್‌ನಿಂದ ಇದುವರೆಗೆ 527,416 ಜನರು ಸಾವನ್ನಪ್ಪಿದ್ದಾರೆ.
ಮತ್ತೊಂದೆಡೆ, ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಯುತ್ತಿದೆ. ಈವರೆಗೆ 210.31 ಕೋಟಿ ಡೋಸ್ ವಿತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
India Reports 8,586 New Covid-19 Cases
#COVID19 | India reports 8,586 fresh cases and 9,680 recoveries, in the last 24 hours; Active cases 96,506 pic.twitter.com/NBW9FBjr3J
— ANI (@ANI) August 23, 2022
Follow us On
Google News |