India Coronavirus; ದೇಶದಲ್ಲಿ 20,528 ಹೊಸ ಕೊರೊನಾ ಪ್ರಕರಣಗಳು ದೃಢ
India Corona Update: ಕಳೆದ 24 ಗಂಟೆಗಳಲ್ಲಿ 20,528 ಹೊಸ ಕೊರೊನಾ ಪ್ರಕರಣಗಳು, 49 ಮಂದಿ ಸಾವು
Corona Cases in India: ದೇಶದಲ್ಲಿ ಕೊರೊನಾ ಪ್ರಕರಣಗಳು (Covid-19 Cases) ಕೊಂಚ ಹೆಚ್ಚಿದೆ. ಹೊಸದಾಗಿ 20,528 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ, ಹೌದು 20,528 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,37,50,599 ಕ್ಕೆ ತಲುಪಿದೆ. ಈ ಪೈಕಿ 4,30,81,441 ಸಂತ್ರಸ್ತರು ಚೇತರಿಸಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 20,528 ಹೊಸ ಕೊರೊನಾ ಪ್ರಕರಣಗಳು, 49 ಮಂದಿ ಸಾವು
ಇಲ್ಲಿಯವರೆಗೆ 5,25,709 ಜನರು ಸಾವನ್ನಪ್ಪಿದ್ದಾರೆ. ಇನ್ನೂ 1,43,449 ಪ್ರಕರಣಗಳು ಸಕ್ರಿಯವಾಗಿವೆ. ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ, 49 ಜನರು ಕೊರೊನಾಗೆ ಬಲಿಯಾಗಿದ್ದಾರೆ ಮತ್ತು 17,790 ಜನರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.
ಕೊರೊನಾ ಲಸಿಕೆ ಹೊಸ ಮೈಲಿಗಲ್ಲನ್ನು ತಲುಪಿದೆ
ಒಟ್ಟು ಪ್ರಕರಣಗಳಲ್ಲಿ 0.33 ಪ್ರತಿಶತದಷ್ಟು ಸಕ್ರಿಯವಾಗಿದೆ, ಚೇತರಿಕೆಯ ಪ್ರಮಾಣವು 98.47 ಪ್ರತಿಶತ ಮತ್ತು ಸಾವಿನ ಪ್ರಮಾಣವು 1.20 ಪ್ರತಿಶತ ಎಂದು ಅದು ಬಹಿರಂಗಪಡಿಸಿದೆ. ಏತನ್ಮಧ್ಯೆ, ದೇಶದಲ್ಲಿ ಕೊರೊನಾ ಲಸಿಕೆ ಹೊಸ ಮೈಲಿಗಲ್ಲನ್ನು ತಲುಪಿದೆ. ಇದುವರೆಗೆ ದೇಶಾದ್ಯಂತ 199.98 ಕೋಟಿ ಕರೋನಾ ಲಸಿಕೆಗಳನ್ನು ವಿತರಿಸಲಾಗಿದೆ. ಶನಿವಾರ 25,59,840 ಜನರಿಗೆ ಲಸಿಕೆ ಹಾಕಲಾಗಿದೆ.
India Reports today 20,528 New Corona Cases
COVID19 | India records 20,528 new cases & 49 deaths in the last 24 hours; Active caseload at 1,43,449
199.98 cr total vaccine doses administered so far under the nationwide vaccination drive. pic.twitter.com/gHFyDoOGAd
— ANI (@ANI) July 17, 2022
ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾ ಅಪ್ಡೇಟ್ಸ್
Follow us On
Google News |
Advertisement