ಒಂದೇ ಏಟಿಗೆ 100 ಭಯೋತ್ಪಾದಕರನ್ನು ನಿರ್ನಾಮ ಮಾಡಿದ್ದೇವೆ: ಪ್ರಧಾನಿ ಮೋದಿ

ಭಯೋತ್ಪಾದಕರು ಊಹಿಸಲೂ ಸಾಧ್ಯವಾಗದಷ್ಟು ದೊಡ್ಡ ಹೊಡೆತ ಭಾರತ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆಪರೇಷನ್ ಸಿಂಧೂರ್ ನಂತರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

ನವದೆಹಲಿ: ಭಾರತ ತನ್ನ ಶಕ್ತಿಯನ್ನೆಲ್ಲಾ ಸಮರ್ಪಕವಾಗಿ ಬಳಸಿದಾಗ ಯಾವ ಮಟ್ಟದ ಪ್ರಭಾವ ಮೂಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿದೆ. ಭಯೋತ್ಪಾದಕರು ಊಹಿಸಲೂ ಸಾಧ್ಯವಾಗದಷ್ಟು ದೊಡ್ಡ ಹೊಡೆತ ಭಾರತ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ನಂತರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಉಗ್ರರು ಕನಸಲ್ಲೂ ಊಹಿಸದ ರೀತಿಯಲ್ಲಿ ಭೀತಿ ಸೃಷ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾಗಿ ಗುರಿಯಿಟ್ಟು ದಾಳಿ ನಡೆಸಿದವು. ಬಹಾವಲ್ಪುರ್ ಮತ್ತು ಮುರಿಡ್ಕೆಯಂತಹ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಭಾರತವು ತನ್ನ ಶಕ್ತಿ ತೋರಿಸಿದೆ..

ಜಗತ್ತಿನಾದ್ಯಂತ ಭಯೋತ್ಪಾದಕರು ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವವರಿಗೆ ಭಾರತ ಏನು ಮಾಡುತ್ತದೆ ಎಂಬುದನ್ನು ತೋರಿಸಿದೆ ಎಂದು ಮೋದಿ ಹೇಳಿದರು.

ಪಾಕಿಸ್ತಾನದಲ್ಲಿ ಎರಡೂವರೆ ದಶಕಗಳಿಂದ ಓಡಾಡುತ್ತಿದ್ದ ಭಯೋತ್ಪಾದಕ ಗುಂಪುಗಳನ್ನು ಒಂದೇ ಹೊಡೆತದಿಂದ ನಿರ್ನಾಮ ಮಾಡಿತು. ಇದು ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದ ಭಯೋತ್ಪಾದಕ ಗುಂಪುಗಳನ್ನು ಪಾಕಿಸ್ತಾನದಿಂದ ನಿರ್ಮೂಲನೆ ಮಾಡಿದೆ.

ಇದನ್ನೂ ಓದಿ: ಪಾಕಿಸ್ತಾನದ ಪರಮಾಣು ಬ್ಲಾಕ್​ಮೇಲ್​ಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ

ಭಾರತ 100 ಭಯೋತ್ಪಾದಕರನ್ನು ಕೊಂದಿದೆ. ಭಾರತದ ದಾಳಿಯ ನಂತರ ಪಾಕಿಸ್ತಾನ ಹತಾಶೆಯಲ್ಲಿದೆ. ಭಾರತದ ದಾಳಿಯಿಂದ ಪಾಕಿಸ್ತಾನ ಆಘಾತಕ್ಕೊಳಗಾಗಿದೆ. ದಾಳಿಯಲ್ಲಿ ಯಾವುದೇ ಪಾತ್ರವಿಲ್ಲದ ಭಾರತದ ವಸತಿ ಪ್ರದೇಶಗಳು ಮತ್ತು ಶಾಲೆಗಳ ಮೇಲೆ ದಾಳಿ ಮಾಡಿತ್ತು ಎಂದು ಮೋದಿ ನೆನಪಿಸಿದರು.

ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದಿಂದ ಹಾರಿಸಲಾದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಗಡಿ ದಾಟುವ ಮೊದಲೇ ಹೊಡೆದುರುಳಿಸಿತು. ಭಾರತದ ಕ್ಷಿಪಣಿಗಳು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯನ್ನು ಛಿದ್ರಗೊಳಿಸಿವೆ.

ಪಾಕಿಸ್ತಾನ ಹೆಮ್ಮೆಪಡುವ ಕ್ಷಿಪಣಿಗಳು ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಭಾರತ ತಟಸ್ಥಗೊಳಿಸಿದೆ. ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ವಾಯುನೆಲೆಗಳು ಮತ್ತು ರಾಡಾರ್ ಕೇಂದ್ರಗಳ ಮೇಲೆ ಹಾನಿಯನ್ನುಂಟುಮಾಡಿವೆ. ಪಾಕಿಸ್ತಾನದ ಯುದ್ಧ ವಿಮಾನಗಳು ಗಾಳಿಯಲ್ಲಿ ಹಾರಲು ಸಾಧ್ಯವಾಗದ ಪರಿಸ್ಥಿತಿಯನ್ನು ಭಾರತ ಸೃಷ್ಟಿಸಿದೆ ಎಂದು ಮೋದಿ ಹೇಳಿದರು.

India’s Operation Sindhoor shocks Pakistan

English Summary

Related Stories