ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಜೆಡಿಯು ನಾಯಕ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ
ಪಾಟ್ನಾ: ಜೆಡಿಯು ನಾಯಕ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ (Nitish Kumar Resigns). ಪಾಟ್ನಾದ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು. ನಿತೀಶ್ ಕುಮಾರ್ ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜೊತೆಗೂಡಿ ಹೊಸ ಸರ್ಕಾರ ರಚಿಸುವ ಸಾಧ್ಯತೆ ಇದೆ. ಎಲ್ಲಾ ಪಕ್ಷದ ಸದಸ್ಯರ ಒಮ್ಮತದ ಮೇರೆಗೆ ರಾಜೀನಾಮೆ ನೀಡಿರುವುದಾಗಿ ನಿತೀಶ್ ಕುಮಾರ್ ಘೋಷಿಸಿದರು.
ಬಿಜೆಪಿ ಜೊತೆ ನಿತೀಶ್ ಕುಮಾರ್ ಭಿನ್ನಾಭಿಪ್ರಾಯ ಎಲ್ಲರಿಗೂ ಗೊತ್ತಿದೆ. ಬಿಹಾರದ ಎನ್ ಡಿಎ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ನಿತೀಶ್ ಕುಮಾರ್ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದು ಗೊತ್ತೇ ಇದೆ. ಆದರೆ ಕೆಲ ವರ್ಷಗಳಿಂದ ಬಿಜೆಪಿ ಜೊತೆಗಿನ ಕೆಟ್ಟ ಸಂಬಂಧದಿಂದಾಗಿ ನಿತೀಶ್ ಇಂದು ಆ ಮೈತ್ರಿಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ. ಬಿಹಾರದಲ್ಲಿ ಬಿಜೆಪಿ (77) ಜೆಡಿಯು (45) ಸಮ್ಮಿಶ್ರ ಆಡಳಿತ ಕೊನೆಗೊಂಡಿದೆ.
jdu chief nitish kumar resigns to cm post
#WATCH | Nitish Kumar confirms that he has resigned as Bihar CM pic.twitter.com/Av04rUXojx
— ANI (@ANI) August 9, 2022
Follow us On
Google News |
Advertisement