ಸೇನಾ ವಾಹನ ಪಲ್ಟಿ, ಏಳು ಯೋಧರ ಸಾವು

ಶ್ರೀನಗರ: ಲಡಾಖ್ನಲ್ಲಿ ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಾಹನವೊಂದು ನಿಯಂತ್ರಣ ತಪ್ಪಿ ಶ್ಯೋಕ್ ನದಿಗೆ ಬಿದ್ದಿದೆ. ಅಪಘಾತದಲ್ಲಿ ಏಳು ಯೋಧರು ಹುತಾತ್ಮರಾಗಿದ್ದಾರೆ. ಉಳಿದ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
26 ಯೋಧರು ವಾಹನದಲ್ಲಿ ಪರ್ತಾಪುರ ಶಿಬಿರದಿಂದ ಹೊರಟಿದ್ದರು. ಶ್ಯೋಕ್ ನದಿಯ ಬಳಿ ವಾಹನ ಸ್ಕಿಡ್ ಆಗಿ ನದಿಗೆ ಬಿದ್ದಿದೆ. ಏಳು ಯೋಧರು ಪ್ರಾಣ ಕಳೆದುಕೊಂಡರು. ಉಳಿದ ಯೋಧರು ಗಾಯಗೊಂಡಿದ್ದಾರೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಗಾಯಗೊಂಡ ಯೋಧರನ್ನು ಆರ್ಮಿ ಫೀಲ್ಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸೇನೆ ತಿಳಿಸಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನೆ ಹೇಳಿದೆ. ಗಂಭೀರವಾಗಿ ಗಾಯಗೊಂಡವರು ಮತ್ತು ತೊಂದರೆಯಲ್ಲಿರುವವರನ್ನು ಏರ್ ಆಂಬುಲೆನ್ಸ್ ಮೂಲಕ ವೆಸ್ಟರ್ನ್ ಕಮಾಂಡ್ಗೆ ರವಾನಿಸಲಾಗುವುದು ಎಂದು ಸೇನೆ ತಿಳಿಸಿದೆ.
7 Soldiers Killed After Army Vehicle Falls Into Shyok River
TRENDING ARTICLES1 / 5
ಇಂದಿನ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



