India Covid-19: ಭಾರತ ದೇಶದಲ್ಲಿ 2124 ಹೊಸ ಕೊರೊನಾ ಪ್ರಕರಣಗಳು
Corona Update in India: ಮಂಗಳವಾರ 1,675 ಇದ್ದ ಪ್ರಕಾರಗಳು ಕಳೆದ 24 ಘಂಟೆಗಳಲ್ಲಿ 2124 ಕ್ಕೆ ತಲುಪಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,31,42,192ಕ್ಕೆ ಏರಿಕೆಯಾಗಿದೆ.
Corona Cases in India – ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ಕೊರೊನಾ ಪ್ರಕರಣಗಳ (Covid Cases) ಸಂಖ್ಯೆ 2,000 ದಾಟಿದೆ. ಮಂಗಳವಾರ 1,675 ಇದ್ದ ಪ್ರಕಾರಗಳು ಕಳೆದ 24 ಘಂಟೆಗಳಲ್ಲಿ 2124 ಕ್ಕೆ ತಲುಪಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,31,42,192ಕ್ಕೆ ಏರಿಕೆಯಾಗಿದೆ.
ಈ ಪೈಕಿ 4,26,02,714 ಚೇತರಿಸಿಕೊಂಡಿದ್ದು, 14,971 ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೆ 5,24,507 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 1977 ಜನರು ಕೊರೊನಾದಿಂದ (Corona Discharge Cases) ಚೇತರಿಸಿಕೊಂಡಿದ್ದು 17 ಮಂದಿ ಸಾವನ್ನಪ್ಪಿದ್ದಾರೆ (Corona Death).
ಒಟ್ಟು ಪ್ರಕರಣಗಳಲ್ಲಿ ಶೇ.0.03 ಮಾತ್ರ ಸಕ್ರಿಯವಾಗಿವೆ. ಅಂತೆಯೇ, 98.75 ರಷ್ಟು ಸೋಂಕಿತರು ಬಿಡುಗಡೆಯಾದರು ಮತ್ತು 1.22 ರಷ್ಟು ಸಾವನ್ನಪ್ಪಿದರು. ಮುಂದೆ ದೈನಂದಿನ ಧನಾತ್ಮಕತೆಯು ಶೇಕಡಾ 0.46 ಆಗಿತ್ತು. ಮಂಗಳವಾರ, 13,27,544 ಜನರಿಗೆ ಲಸಿಕೆ ನೀಡಲಾಗಿದ್ದು, ಇದುವರೆಗೆ ವಿತರಿಸಲಾದ ಕರೋನಾ ಲಸಿಕೆ (Corona Vaccine) ಪ್ರಮಾಣವನ್ನು 1,92,67,44,769 ಕ್ಕೆ ತಲುಪಿಸಲಾಗಿದೆ.
India Reports 2124 News Corona Cases
#COVID19 | India reports 2,124 fresh cases, 1,977 recoveries, and 17 deaths in the last 24 hours.
Total active cases are 14,971. Daily positivity rate 0.46% pic.twitter.com/IRvqOnniBt
— ANI (@ANI) May 25, 2022