ಯೂಟ್ಯೂಬ್ ನೋಡಿ ವೈನ್ ತಯಾರಿಸಿದ ಬಾಲಕ.. ಕುಡಿದು ಆಸ್ಪತ್ರೆಗೆ ದಾಖಲಾದ ಆತನ ಸ್ನೇಹಿತ
ಹನ್ನೆರಡು ವರ್ಷದ ಬಾಲಕನೊಬ್ಬ ವೈನ್ ಯೂಟ್ಯೂಬ್ ನಲ್ಲಿ ನೋಡಿ ಹೇಗೆ ಮಾಡಬೇಕೆಂದು ಕಲಿತಿದ್ದಾನೆ
ಕೇರಳ: ಹನ್ನೆರಡು ವರ್ಷದ ಬಾಲಕನೊಬ್ಬ ವೈನ್ ಅನ್ನು ಯೂಟ್ಯೂಬ್ ನಲ್ಲಿ ನೋಡಿ ಹೇಗೆ ಮಾಡಬೇಕೆಂದು ಕಲಿತಿದ್ದಾನೆ. ಅವನು ದ್ರಾಕ್ಷಿ ವೈನ್ ಮಾಡಿ ತನ್ನ ಸ್ನೇಹಿತನಿಗೆ ಕೊಟ್ಟಿದ್ದಾನೆ. ಇದರಿಂದ ಈ ಮದ್ಯ ಸೇವಿಸಿದ ಆತನ ಸ್ನೇಹಿತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಧ್ಯಮಗಳಿಗೆ ವಿವರ ನೀಡಿದ್ದಾರೆ. ಮದ್ಯ ತಯಾರಿಸಿದ ಬಾಲಕನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ತಂದೆ-ತಾಯಿ ತಂದದ್ರಾಕ್ಷಿಯಿಂದ ತಾನು ಯೂಟ್ಯೂಬ್ ನೋಡಿ ವೈನ್ ಮಾಡಿದ್ದೇನೆ ಎಂದು ಬಾಲಕ ಹೇಳಿದ್ದಾನೆ. ಮದ್ಯ ತಯಾರಿಸಿದ ಬಳಿಕ ಬಾಟಲಿಯಲ್ಲಿ ಸುರಿದು ನೆಲದಲ್ಲಿ ಹೂತು ಹಾಕಿರುವುದಾಗಿ ಬಾಲಕ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಅದನ್ನು ಹೇಗೆ ಮಾಡಬೇಕೆಂದು ಕಲಿತಿದ್ದೇನೆ ಎಂದು ಹುಡುಗ ವಿವರಿಸಿದ್ದಾನೆ.
ನಂತರ ಹುಡುಗ ಅದನ್ನು ತನ್ನ ಸ್ನೇಹಿತನಿಗೆ ಕೊಟ್ಟಿದ್ದಾನೆ. ಅದನ್ನು ಕುಡಿದ ಆತನ ಸ್ನೇಹಿತ ವಾಂತಿ ಮಾಡಿಕೊಂಡು ಅಸ್ವಸ್ಥನಾದ. ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸರು ಬಾಟಲಿಯಿಂದ ಮದ್ಯದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Kerala Boy Makes Wine Watching Online Video Friend Ill After Drinking It
ಮಹೇಶ್ ಬಾಬುಗೆ ವಿಲನ್ ಆದ ರಿಯಲ್ ಸ್ಟಾರ್ ಉಪೇಂದ್ರ
ಎಲ್ಲಾ ನಟಿಯರಿಗೂ ವಿಜಯ್ ದೇವರಕೊಂಡ ಬೇಕಂತೆ
ಚಿರಂಜೀವಿ ಸಲ್ಮಾನ್ ಖಾನ್ ಪ್ರಭುದೇವ ಒಂದೇ ಸೆಟ್ಟಲ್ಲಿ
2 ವರ್ಷಗಳ ನಂತರ ನಟಿ ಅನುಷ್ಕಾ ಶೆಟ್ಟಿ ಹೊಸ ಸಿನಿಮಾ
ಸಲ್ಮಾನ್ ಖಾನ್ ಚಿತ್ರಕ್ಕೆ ಕಿಚ್ಚ ಸುದೀಪ್ ಆಕ್ಷನ್ ಕಟ್
Follow us On
Google News |
Advertisement