Leopard Cub: ಮುಂಬೈನ ಫಿಲ್ಮ್ ಸಿಟಿಯಲ್ಲಿ ಚಿರತೆ ಮರಿ ಪ್ರತ್ಯಕ್ಷ
Leopard Cub: ಮುಂಬೈನ ಫಿಲ್ಮ್‌ಸಿಟಿಯಲ್ಲಿ ಚಿರತೆ ಮರಿ ಏಕಾಂಗಿಯಾಗಿ ಕಾಣಿಸಿಕೊಂಡಿದೆ. ನಾಯಿಗಳು ಅಟ್ಟಿಸಿಕೊಂಡು ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
Leopard Cub: ಮುಂಬೈನ ಫಿಲ್ಮ್‌ಸಿಟಿಯಲ್ಲಿ ನಾಲ್ಕು ವಾರಗಳ ಚಿರತೆ ಮರಿ ಕಾಣಿಸಿಕೊಂಡಿದೆ. ಇದು ಎಲ್ಲಿಂದ ಬಂತು ಎಂಬುದು ತಿಳಿದಿಲ್ಲ, ಆದರೆ ಫಿಲಿಮ್ ನಗರದ ಆರೆ ಕಾಲೋನಿ ಬಳಿ ಚಿರತೆಯ ಮರಿ ಪತ್ತೆಯಾಗಿದೆ. ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಚಿರತೆಯ ಮರಿಯನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿವೆ.
ಕಾಂತಾರ ಸಿನಿಮಾಗೆ ಸಪ್ತಮಿ ಗೌಡ ಸಂಭಾವನೆ ಎಷ್ಟು ಗೊತ್ತ
ಚಿರತೆಯ ಮರಿಯನ್ನು ನಾಯಿಗಳು ಹಿಂಬಾಲಿಸುತ್ತಿದ್ದಂತೆ ಸ್ಥಳೀಯ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯರು ನೋಡಿದ್ದಾರೆ. ಕೂಡಲೇ ಚಿರತೆಯನ್ನು ವಶಕ್ಕೆ ಪಡೆದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆಯನ್ನು ಸ್ಥಳೀಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಚಿರತೆಯ ಮರಿಯನ್ನು ತೆಗೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದರು.
ಶೀಘ್ರದಲ್ಲೇ ಚಿರತೆ ಮರಿಯನ್ನು ತಾಯಿಯ ಬಳಿಗೆ ಸೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅಧಿಕಾರಿಗಳು ಚಿರತೆ ಮರಿಯ ಆರೈಕೆ ಮಾಡುತ್ತಿದ್ದಾರೆ.
Leopard Cub spotted in Film City
A four week old Leopard cub was found at Film City on Monday morning. The cub was handed over to SGNP. Medical examination of the cub was done and the process to reunite it with its mother is underway. @MahaForest @mid_day @nikit_surve @gallopingeye @LotSatish @athaniya_vasim pic.twitter.com/mWus5HnlZc
— Ranjeet Jadhav (@ranjeetnature) October 11, 2022
Follow us On
Google News |
Advertisement