ಮನೆಗೆ ನುಗ್ಗಿದ ಚಿರತೆ ಸಾಕು ನಾಯಿ ಮೇಲೆ ದಾಳಿ, ಮುಂದೇನಾಯ್ತು?

Story Highlights

ಚಿರತೆ ಮನೆ ಕಾಂಪೌಂಡ್ ಗೋಡೆ ಹಾರಿ ಅಲ್ಲಿಗೆ ಬಂದಿತ್ತು. ಸಾಕು ನಾಯಿ ಲ್ಯಾಬ್ರಡಾರ್ ರಿಟ್ರೈವರ್ ಮೇಲೆ ದಾಳಿ ಮಾಡಿತ್ತು, ಈ ವೇಳೆ ನಾಯಿ ಚಿರತೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿತ್ತು.

ಜೈಪುರ: ಚಿರತೆಯೊಂದು ಮನೆಯ ಆವರಣಕ್ಕೆ ನುಗ್ಗಿ, ಅಲ್ಲಿದ್ದ ಸಾಕು ನಾಯಿ ಮೇಲೆ ದಾಳಿ ಮಾಡಿದೆ. (Leopard Attacks Pet Dog) ಅದರ ಕುತ್ತಿಗೆಯನ್ನು ಕಚ್ಚಿ ಹಿಡಿದು ಎಳೆದೊಯ್ಯಲು ಯತ್ನಿಸಿದೆ. ಆದರೆ ನಾಯಿಯ ಕಿರುಚಾಟ ಕೇಳಿ ಮಾಲೀಕರು ಮನೆಯಿಂದ ಹೊರ ಬಂದ ಕೂಡಲೇ ಚಿರತೆ ಅಲ್ಲಿಂದ ಓಡಿಹೋಗಿದೆ.

ಆ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಮೌಂಟ್ ಅಬು ಎಂಬಲ್ಲಿ ಈ ಘಟನೆ ನಡೆದಿದೆ.

ಹೆದ್ದಾರಿ ಬದಿಯಲ್ಲಿ ಇದ್ದ ಕೆಂಪು ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ

ಚಿರತೆ ಮನೆ ಕಾಂಪೌಂಡ್ ಗೋಡೆ ಹಾರಿ ಅಲ್ಲಿಗೆ ಬಂದಿತ್ತು. ಸಾಕು ನಾಯಿ ಲ್ಯಾಬ್ರಡಾರ್ ರಿಟ್ರೈವರ್ ಮೇಲೆ ದಾಳಿ ಮಾಡಿತ್ತು, ಈ ವೇಳೆ ನಾಯಿ ಚಿರತೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿತ್ತು.

ಅಷ್ಟರಲ್ಲಿ ಸಾಕು ನಾಯಿಯ ಕಿರುಚಾಟ ಕೇಳಿ ಮಾಲೀಕರು ಕಿರುಚಿಕೊಂಡು ಹೊರ ಬಂದಿದ್ದಾರೆ. ಮನೆಯ ಆವರಣದ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leopard Enters House Attacks On Pet Dog In Rajasthan Mount Abu

Related Stories