ಬಾವಿಗೆ ಬಿದ್ದ ಚಿರತೆ, ಅಗ್ನಿಶಾಮಕ ಸಿಬ್ಬಂದಿಯಿಂದ ಚಿರತೆ ರಕ್ಷಣೆ.. ವಿಡಿಯೋ

ಒಡಿಶಾದ ಸಂಬಲ್‌ಪುರ ಜಿಲ್ಲೆಯ ಹಿಂಡಾಲ್‌ ಘಾಟ್‌ನ ಹೊರವಲಯದಲ್ಲಿರುವ ಜಮೀನಿಗೆ ಚಿರತೆಯೊಂದು ಆಹಾರ ಅರಸಿ ಬಂದಿದೆ. ಆಕಸ್ಮಿಕವಾಗಿ ಅಲ್ಲಿದ್ದ ಬಾವಿಗೆ ಬಿದ್ದಿದೆ.

ಭುವನೇಶ್ವರ: ಒಡಿಶಾದ ಸಂಬಲ್‌ಪುರ ಜಿಲ್ಲೆಯ ಹಿಂಡಾಲ್‌ ಘಾಟ್‌ನ ಹೊರವಲಯದಲ್ಲಿರುವ ಜಮೀನಿಗೆ ಚಿರತೆಯೊಂದು ಆಹಾರ ಅರಸಿ ಬಂದಿದೆ. ಆಕಸ್ಮಿಕವಾಗಿ ಅಲ್ಲಿದ್ದ ಬಾವಿಗೆ ಬಿದ್ದಿದೆ. ಬಾವಿ ಅರ್ಧದಷ್ಟು ತುಂಬಿತ್ತು. ಹೇಗಾದರೂ ಮಾಡಿ ಹೊರಬರಲು ಪ್ರಯತ್ನಿಸಿದೆ. ಆದರೆ, ಆಗಲಿಲ್ಲ. ಅಷ್ಟರಲ್ಲಿ ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವಿಷಯವನ್ನು ಅಗ್ನಿಶಾಮಕ ಸಿಬ್ಬಂದಿಯ ಗಮನಕ್ಕೆ ತರಲಾಯಿತು.

ಚಿರತೆ ಇರುವ ಜಾಗಕ್ಕೆ ಕಟ್ಟಿದ ಹಗ್ಗವನ್ನು ಬಾವಿಯಲ್ಲಿ ಬಿಡಲಾಗಿದೆ. ಇದರೊಂದಿಗೆ ನಂತರ ಉದ್ದನೆಯ ಏಣಿಯನ್ನು ಬಾವಿಗೆ ಇಳಿಸಲಾಯಿತು. ಅದರ ಸಹಾಯದಿಂದ ಮೇಲೆ ಬಂದ ಚಿರತೆ ಹಿಂತಿರುಗಿ ನೋಡದೆ ಓಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Leopard Rescued From Well In Sambalpur In Odisha

Follow us On

FaceBook Google News