ಬಂಪರ್ ಆಫರ್, ಒಂದು ಸಲ ದುಡ್ಡು ಕಟ್ಟಿದ್ರೆ ಜೀವನಪರ್ಯಂತ ಉಚಿತ ಪಾನಿಪುರಿ
ನಾಗ್ಪುರದ ಪಾನಿಪುರಿ ಮಾರಾಟಗಾರರೊಬ್ಬರು ವಿಶಿಷ್ಟ ಆಫರ್ ನೀಡಿದ್ದಾರೆ. ₹99,000 ಕೊಟ್ಟರೆ ಜೀವನಪೂರ್ತಿ ಉಚಿತ ಪಾನಿಪುರಿ ಸಿಗಲಿದೆ. ಈ ಸುದ್ದಿ ವೈರಲ್ ಆಗಿದ್ದು, ಜನರು ಈ ಮಾರ್ಕೆಟಿಂಗ್ ತಂತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
- ₹99,000 ಪಾವತಿಸಿದರೆ ಜೀವನಪರ್ಯಂತ ಉಚಿತ ಪಾನಿಪುರಿ
- ನಾಗ್ಪುರದ ಪಾನಿಪುರಿ ವ್ಯಾಪಾರಿಯ ವಿನೂತನ ಆಫರ್
- ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ವೈರಲ್
Unlimited PaniPuri : ನಾಗ್ಪುರದಲ್ಲಿ ಪಾನಿಪುರಿ ಮಾರಾಟ ಮಾಡುತ್ತಿರುವ ವ್ಯಾಪಾರಿಯೊಬ್ಬರು ಗ್ರಾಹಕರಿಗೆ ವಿಶೇಷ ಆಫರ್ (Special Offer) ಘೋಷಿಸಿದ್ದಾರೆ. ಒಂದು ಸಲ ₹99,000 ಪಾವತಿಸಿದರೆ ಜೀವನಪೂರ್ತಿ ಉಚಿತ ಪಾನಿಪುರಿ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ಆಫರ್‌ಗೆ ಯಾವುದೇ ಮಿತಿಯಿಲ್ಲ, ಎಷ್ಟೇ ತಿಂದರೂ ಉಚಿತವಾಗಿಯೇ ಸಿಗಲಿದೆ ಎನ್ನಲಾಗಿದೆ.
ಈ ಹೊಸ ಆಫರ್ ಸಾಮಾಜಿಕ ಮಾಧ್ಯಮದಲ್ಲಿ ಹವಾ ಸೃಷ್ಟಿಸಿದ್ದು, ಜನರಿಂದ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವು ಜನರು ಇದನ್ನು ಬಿಸಿನೆಸ್ ತಂತ್ರ ಎಂದು ಪ್ರಶಂಸಿಸುತ್ತಿದ್ದರೆ, ಮತ್ತವರು ಈ ಯೋಜನೆಯ ಪ್ರಾಯೋಗಿಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಗ್ರಾಹಕರು ಬಹಳಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದು, ಈಗಾಗಲೇ ಇಬ್ಬರು ಈ ಆಫರ್‌ನ್ನು ಖರೀದಿಸಿದ ಮಾಹಿತಿಯಿದೆ.
ಈ ಆಫರ್ ಬಗ್ಗೆ @marketing.growmatics ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ವೈರಲ್ ಆಗಿದೆ. 47,000ಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, ಸಾವಿರಾರು ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕೆಲವರು ಈ ಆಫರ್ ನಿಜಕ್ಕೂ ಜೀವನಪೂರ್ತಿ ಮುಂದುವರಿಯುತ್ತದಾ ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದಾರೆ. ವ್ಯಾಪಾರ ಮುಚ್ಚಿಬಿಟ್ಟರೆ ಗ್ರಾಹಕರ ಪರಿಸ್ಥಿತಿ ಏನಾಗಲಿದೆ ಎಂಬುದರ ಬಗ್ಗೆ ಜನ ಚರ್ಚೆ ನಡೆಸುತ್ತಿದ್ದಾರೆ.
Lifetime Free Panipuri Offer in Nagpur
Our Whatsapp Channel is Live Now 👇