100 ಕೋಟಿ ಸಚಿವ ಸ್ಥಾನ ಆಫರ್; ಶಾಸಕರ ದೂರಿನ ಮೇರೆಗೆ ನಾಲ್ವರ ಬಂಧನ
ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಶಾಸಕರೊಬ್ಬರಿಗೆ ವಂಚಿಸಲು ಯತ್ನಿಸಿದ ನಾಲ್ವರು ಸದಸ್ಯರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ
ಮುಂಬೈ: ರೂ. 100 ಕೋಟಿ ನೀಡಿದರೆ ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಶಾಸಕರೊಬ್ಬರಿಗೆ ವಂಚಿಸಲು ಯತ್ನಿಸಿದ ನಾಲ್ವರು ಸದಸ್ಯರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಇಲಾಖೆಗಳ ಹಂಚಿಕೆಯಲ್ಲಿ ಬದಲಾವಣೆ ತರಲಿದೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ದೌಂಡ್ ಬಿಜೆಪಿ ಶಾಸಕ ರಾಹುಲ್ ಕುಲ್ ಅವರ ದೂರಿನ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಜುಲೈ 12 ರಂದು ರಿಯಾಜ್ ಶೇಖ್ ಅವರಿಂದ ನನಗೆ ಫೋನ್ ಕರೆ ಬಂದಿತ್ತು ಮತ್ತು ಆಫರ್ ಕುರಿತು ಚರ್ಚಿಸಲು ನಿಮ್ಮನ್ನು ಭೇಟಿಯಾಗಲು ರಿಯಾಜ್ ಎಂಬಾತ ಕೇಳಿಕೊಂಡಿದ್ದಾನೆ ಎಂದು ಶಾಸಕ ರಾಹುಲ್ ಕುಲ್ ಹೇಳಿದ್ದಾರೆ. ಮುಂಬೈನ ಹೊಟೇಲ್ ನಲ್ಲಿ ತಮ್ಮನ್ನು ಭೇಟಿಯಾದ ರಿಯಾಜ್ ಸಚಿವ ಸ್ಥಾನ ನೀಡುವುದಾಗಿ ಹೇಳಿ ಆ ಕೆಲಸಕ್ಕೆ 100 ಕೋಟಿ ಬೇಡಿಕೆ ಇಟ್ಟು, ಶೇ 20ರಷ್ಟು ಹಣವನ್ನು ಮುಂಗಡವಾಗಿ ನೀಡುವಂತೆ ರಿಯಾಜ್ ಬೇಡಿಕೆ ಇಟ್ಟಿದ್ದ ಎಂದು ಅವರು ತಿಳಿಸಿದ್ದಾರೆ. ಮುಂಗಡ ಹಣ ಕೊಡಲು ನಾನು ಸಿದ್ಧನಿದ್ದು, ನಂತರ ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾಗಿ ರಾಹುಲ್ ಕುಲ್ ಹೇಳಿದ್ದಾರೆ.
ಈ ನಡುವೆ ರಿಯಾಜ್ ವಿಷಯವನ್ನು ಪಕ್ಷದ ಮುಖಂಡರ ಗಮನಕ್ಕೆ ತಂದ ರಾಹುಲ್, ನಂತರ ಮರೈನ್ ಡ್ರೈವ್ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫುನಾಸಲ್ಕರ್ ಅವರು ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. ಶಾಸಕರಿಂದ ಮುಂಗಡ ಹಣ ಪಡೆಯಲು ಹೋಟೆಲ್‌ಗೆ ಬರುವಂತೆ ಆರೋಪಿಗಳನ್ನು ಕರೆಹಿಸಿದ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಿಯಾಜ್ ಶೇಖ್, ಯೋಗೀಶ್ ಕುಲಕರ್ಣಿ, ಸಾಗರ್ ಸಾಂಘ್ವಿ ಮತ್ತು ಜಾಫರ್ ಉಸ್ಮಾನಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಮೂರು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಜುಲೈ 26ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
maharashtra mla gets cabinet berth offer for 100 crore
Follow us On
Google News |
Advertisement