ಮಹಾರಾಷ್ಟ್ರದಲ್ಲಿ ಮಳೆ ಅನಾಹುತ, ನಾಗ್ಪುರದಲ್ಲಿ 20 ಸಾವು; 11 ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ನೈಋತ್ಯ ಮಾನ್ಸೂನ್‌ನ (Southwest Monsoon) ಭಾರೀ ಮಳೆಯು (Heavy Rains) ದೇಶದ ಹೆಚ್ಚಿನ ಭಾಗಗಳಲ್ಲಿ ಹಾನಿಯನ್ನುಂಟುಮಾಡಿದೆ.
ಮುಂಬೈ: ನೈಋತ್ಯ ಮಾನ್ಸೂನ್‌ನ (Southwest Monsoon) ಭಾರೀ ಮಳೆಯು (Heavy Rains) ದೇಶದ ಹೆಚ್ಚಿನ ಭಾಗಗಳಲ್ಲಿ ಹಾನಿಯನ್ನುಂಟುಮಾಡಿದೆ. ಕಳೆದ ಒಂದು ವಾರದಲ್ಲಿ ಗುಜರಾತ್ (Gujarat), ಮಹಾರಾಷ್ಟ್ರ (Maharashtra), ಉತ್ತರಾಖಂಡ (Uttarakhand), ಕರ್ನಾಟಕ (Karnataka) ಮತ್ತು ಕೇರಳ (Kerala) ದಲ್ಲಿ ಭಾರಿ ನಾಶವಾಗಿದೆ.
ಮುಂಬೈ ಮತ್ತು ಉಪನಗರಗಳಲ್ಲಿ ಭಾರೀ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ ಮತ್ತು ಕೆಲವೇ ಗಂಟೆಗಳಲ್ಲಿ ನಗರದ ಹಲವು ಭಾಗಗಳು ಜಲಾವೃತಗೊಂಡವು, ಕೆಲವು ಸ್ಥಳಗಳಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಾಜ್ಯದ ಪಾಲ್ಘರ್ ಮತ್ತು ಗಡ್ಚಿರೋಲಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಟ್ಟಿವೆ. ಏತನ್ಮಧ್ಯೆ, ಬುಧವಾರ, ಹವಾಮಾನ ಇಲಾಖೆಯು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ : Weather Updates; ಗುಜರಾತ್-ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ರೆಡ್ ಅಲರ್ಟ್
ಪಾಲ್ಘರ್, ನಾಸಿಕ್, ಪುಣೆಗೆ ರೆಡ್ ಅಲರ್ಟ್
ಮುಂಬೈ, ರಾಯಗಡ, ರತ್ನಗಿರಿ, ಸಿಂಧುದುರ್ಗ, ಕೊಲ್ಲಾಪುರ, ಸತಾರಾ, ಅಮರಾವತಿ ಮತ್ತು ಥಾಣೆಗೆ ಇಂದು IMD ಆರೆಂಜ್ ಅಲರ್ಟ್ ನೀಡಿದೆ. ಪಾಲ್ಘರ್, ನಾಸಿಕ್ ಮತ್ತು ಪುಣೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
IMD issues orange alert for Mumbai, Raigad, Ratnagiri, Sindhudurg, Kolhapur, Satara, Amravati and Thane tomorrow. Palghar, Nashik and Pune have meanwhile been issued a red alert for tomorrow's forecast. pic.twitter.com/KeaAX20dPq
— ANI (@ANI) July 13, 2022
ಪುಣೆಯ ಪ್ರವಾಸಿ ಸ್ಥಳಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ
IMD ಯ ಭಾರೀ ಮಳೆಯ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಪುಣೆ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿದೆ. ಜುಲೈ 14 ರಿಂದ 17 ರವರೆಗೆ 1 ಕಿಮೀ ವ್ಯಾಪ್ತಿಯಲ್ಲಿರುವ ಈ ಸ್ಥಳಗಳಿಗೆ ಪ್ರವೇಶವನ್ನು ಆಡಳಿತ ನಿಷೇಧಿಸಿದೆ. ಆದೇಶ ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು.
ನಾಗ್ಪುರದಲ್ಲಿ 24 ಗಂಟೆಗಳಲ್ಲಿ 10 ಮಂದಿ ಸಾವು
Nagpur, Maharashtra | 10 people died in last 24 hours. IMD forecast more torrential rains next 3 days. 20 died, 19 injured in various incidents from June 1 to July 13 due to the rains. 88 animals were also killed & 293 houses were damaged: Dist Administration
— ANI (@ANI) July 13, 2022
ಮತ್ತೊಂದೆಡೆ, ನಾಗ್ಪುರ ಜಿಲ್ಲಾಡಳಿತದ ಪ್ರಕಾರ, ಉಪ ರಾಜಧಾನಿ ನಾಗ್ಪುರದಲ್ಲಿ ಕಳೆದ 24 ಗಂಟೆಗಳಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಮುಂದಿನ 3 ದಿನಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಜೂನ್ 1 ರಿಂದ ಜುಲೈ 13 ರವರೆಗಿನ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 20 ಜನರು ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ. 88 ಪ್ರಾಣಿಗಳು ಸಹ ಸಾವನ್ನಪ್ಪಿವೆ ಮತ್ತು 293 ಮನೆಗಳಿಗೆ ಹಾನಿಯಾಗಿದೆ.
ಆಡಳಿತದ ಪ್ರಕಾರ ಜಿಲ್ಲಾಧಿಕಾರಿ ಸಮೀಕ್ಷೆಗೆ ಆದೇಶಿಸಿದ್ದಾರೆ. ಅಗತ್ಯ ಬಿದ್ದರೆ ಪ್ರವಾಹ ಪೀಡಿತ ಗ್ರಾಮಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ. ಆರೋಗ್ಯ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
Maharashtra Rains Rain wreaks havoc in Maharashtra
ಇದನ್ನೂ ಓದಿ : WhatsApp ವಾಯ್ಸ್ ನೋಟ್ಸ್ ಸ್ಟೇಟಸ್ ಹೊಸ ಫೀಚರ್
Follow us On
Google News |