ಸಿನಿಮಾ ಪ್ರಭಾವ: 6 ವರ್ಷದ ಬಾಲಕಿಯನ್ನು ಕೊಂದ 13 ವರ್ಷದ ಬಾಲಕ
ಮಹಾರಾಷ್ಟ್ರದಲ್ಲಿ (Maharashtra) 13 ವರ್ಷದ ಬಾಲಕನೊಬ್ಬ ಸಿನಿಮಾದ ಸೀರಿಯಲ್ ಕಿಲ್ಲರ್‌ನ ಪ್ರಭಾವಕ್ಕೆ ಒಳಗಾಗಿ ತನ್ನ 6 ವರ್ಷದ ಸಹೋದರಿಯನ್ನೇ ಕೊಂದ ಘಟನೆಯು ಆತಂಕ ಮೂಡಿಸಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- ಸಿನಿಮಾದ ಪ್ರಭಾವಕ್ಕೆ ಒಳಗಾಗಿ ಬಾಲಕನಿಂದ ಹತ್ಯೆ
- 6 ವರ್ಷದ ಬಾಲಕಿಯನ್ನು ಕೊಂದ 13 ವರ್ಷದ ಬಾಲಕ
- ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು
ಒಂದು ಸಿನಿಮಾ (Cinema) ಬಾಲಕನ ಭಾವನೆಗೇ ವಿನಾಶ ತಂದಿದೆ. ಮಹಾರಾಷ್ಟ್ರದ ಪಾಲ್ಘರ್ (Palghar) ಜಿಲ್ಲೆಯಲ್ಲಿ 13 ವರ್ಷದ ಬಾಲಕನೊಬ್ಬ, ತನ್ನದೇ ಕುಟುಂಬದ 6 ವರ್ಷದ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಆತನ ಈ ಕ್ರೂರ ಕೃತ್ಯದ ಹಿಂದಿನ ಕಾರಣವೊಂದು ಕೇಳಿದರೆ ನಂಬಲಸಾಧ್ಯ!
ಈ ದಾರುಣ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಕುಟುಂಬದವರು 6 ವರ್ಷದ ಬಾಲಕಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ (CCTV) ಕ್ಯಾಮೆರಾದ ದೃಶ್ಯವನ್ನು ಪರಿಶೀಲಿಸಿದಾಗ ಆ ಬಾಲಕ, ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.
ಇದನ್ನೂ ಓದಿ: ಹೆಂಡತಿ ಫೋನ್‌ಗೆ ಬಂದ ಕಿಸ್ ಎಮೋಜಿ, ಇಬ್ಬರನ್ನೂ ಕಡಿದು ಕೊಂದ ಪತಿ
ಪೊಲೀಸರು ತನಿಖೆಯನ್ನು ಆಳವಾಗಿ ಮುಂದುವರಿಸಿದಾಗ ಒಂದು ಭಯಾನಕ ಸತ್ಯ ಹೊರಬಿತ್ತು. ಆ ಬಾಲಕ ತನ್ನ ಸೋದರ ಸಂಬಂಧಿ (Cousin) 6 ವರ್ಷದ ಬಾಲಕಿಯನ್ನು ಸಿನಿಮಾದಲ್ಲಿನ ಸೀರಿಯಲ್ ಕಿಲ್ಲರ್‌ನಂತೆ ಕೊಲ್ಲಲು ನಿರ್ಧರಿಸಿದ್ದ. ಆಕೆಯ ತಲೆ ಹಿಡಿದು, ಕತ್ತು ಹಿಸುಕಿದ ನಂತರ, ಅವಳ ಮುಖವನ್ನು ಕಲ್ಲಿನಿಂದ (Stone) ಜಜ್ಜಿ ಗುರುತು ಪತ್ತೆಯಾಗದಂತೆ ಮಾಡಿದ್ದ.
ಇದನ್ನೂ ಓದಿ: ಆಸ್ತಿಗಾಗಿ ತಾಯಿಯನ್ನೇ 15 ಬಾರಿ ಚಾಕುವಿನಿಂದ ಇರಿದು ಕೊಂದ ಕಿರಾತಕ ಮಗ
ತನಿಖೆಯ ವೇಳೆ ಬಾಲಕ ತಪ್ಪೊಪ್ಪಿಕೊಂಡಿದ್ದು, ‘ನಾನು ಒಂದು ಸಿನಿಮಾ ನೋಡಿದ್ದೆ. ಅದರಲ್ಲಿ ಸೀರಿಯಲ್ ಕಿಲ್ಲರ್ (Serial Killer) ಆಗಿದ್ದ ಪಾತ್ರದಿಂದ ಪ್ರಭಾವಿತನಾಗಿ ಈ ಹತ್ಯೆ ಮಾಡಿದ್ದೇನೆ’ ಎಂದು ಹೇಳಿದ್ದಾನೆ. ಪೇಲ್ಹಾರ್ (Pelhar) ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ಅವರ ಮಾಹಿತಿ ಪ್ರಕಾರ, ಬಾಲಕನ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಲಾಗಿದೆ.
Maharashtra Teen Kills Cousin Inspired by Movie



