India NewsCrime News

ಹಣ, ಒಡವೆ ಕಿತ್ಕೊಂಡು ಪ್ರಿಯಕರನಿಗೆ ಬಲವಂತವಾಗಿ ವಿಷ ಕುಡಿಸಿದ ಪ್ರಿಯತಮೆ!

ಆಕೆ ಸ್ನೇಹಿತರ ಜೊತೆ ಸೇರಿಕೊಂಡು ಅವನ ಮೇಲೆ ಹಲ್ಲೆ ನಡೆಸಿದ್ದಾಳೆ (Assaulted) ಹಾಗೂ ಬಲವಂತವಾಗಿ ವಿಷ (Poison) ಕುಡಿಸಿದ್ದಾಳೆ.

ಉತ್ತರ ಪ್ರದೇಶದ ಮಹೋಬಾ (Mahoba) ಜಿಲ್ಲೆಯಲ್ಲಿ ನಡೆದ ಈ ಘಟನೆ ಇದೀಗ ದೊಡ್ಡ ಚರ್ಚೆಯಾಗುತ್ತಿದೆ. ಹಮೀರ್‌ಪುರ ಮೂಲದ ಶೈಲೆಂದ್ರ ಗುಪ್ತಾ (Shailendra Gupta) ಮಹೋಬಾದ ಒಂದು ಖಾಸಗಿ ಕಂಪನಿಯಲ್ಲಿ ಮೆಡಿಕಲ್ ರಿಪ್ರಜೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದರು.

ನಾಲ್ಕು ವರ್ಷಗಳ ಹಿಂದೆ ಕಾಲಿಪಹರಿ (Kalipahari) ಗ್ರಾಮದ ಮಹಿಳೆಯೊಬ್ಬರೊಂದಿಗೆ ಪರಿಚಯವಾಗಿ, ಅವರು ಒಟ್ಟಿಗೆ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಸಂಬಂಧದ ನಡುವೆ ಶೈಲೆಂದ್ರ ಆಕೆಗೆ ಕಾಣಿಕೆಯಾಗಿ ನಗದು ₹4 ಲಕ್ಷ ಹಾಗೂ ಹಲವು ಚಿನ್ನಾಭರಣ (Jewellery) ನೀಡಿದ್ದನು.

ಹಣ, ಒಡವೆ ಕಿತ್ಕೊಂಡು ಪ್ರಿಯಕರನಿಗೆ ಬಲವಂತವಾಗಿ ವಿಷ ಕುಡಿಸಿದ ಪ್ರಿಯತಮೆ!

ಇದನ್ನೂ ಓದಿ: ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮೇಲೆ ಕಾನ್‌ಸ್ಟೆಬಲ್ ಅತ್ಯಾಚಾರ

ಬದಲಾದ ಪ್ರಿಯತಮೆ!

ಆದರೆ, ಕೆಲವು ವರ್ಷಗಳ ಬಳಿಕ ಆ ಆಕೆಗೆ ಮತ್ತೊಬ್ಬ ವ್ಯಕ್ತಿಯ ಪರಿಚಯವಾಯಿತು. ಇದರಿಂದಾಗಿ ಅವಳು ಶೈಲೆಂದ್ರನನ್ನು ದೂರ ಮಾಡಿದ್ದಳು. ಈತ ಈ ನೋವಿನಿಂದ ನರಳಿ ನರಳಿ ಕೊನೆಗೆ ತಾನು ನೀಡಿದ ಹಣ-ನಗದು ವಾಪಸ್ ಕೊಡುವಂತೆ ಆಕೆಯನ್ನು ಕೇಳಿದ್ದ. ಇದರಿಂದ ಸಿಟ್ಟಿಗೆದ್ದ ಆಕೆ, ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಅವನಿಗೆ ಹಲ್ಲೆ ನಡೆಸಿದ್ದಾಳೆ (Assaulted) ಹಾಗೂ ಬಲವಂತವಾಗಿ ವಿಷ (Poison) ಕುಡಿಸಿದ್ದಾಳೆ.

ಆಸ್ಪತ್ರೆ ಸೇರಿದ ಪ್ರಿಯಕರ!

ವಿಷ ಸೇವನೆಯಿಂದ ಶೈಲೆಂದ್ರ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬಗ್ಗೆ ಪೊಲೀಸರು (Police) ತನಿಖೆ ಆರಂಭಿಸಿದ್ದು, ಆರೋಪಿಗಳಾದ ಸದಾಬ್ ಬೇಗ್, ದೀಪಕ್, ಹ್ಯಾಪಿ ಎಂಬ ಮೂವರು ಪರಾರಿಯಾಗಿದ್ದಾರೆ.

ಶೈಲೆಂದ್ರ ನೀಡಿದ ದೂರಿನ ಪ್ರಕಾರ, ಆ ಮಹಿಳೆ ಮತ್ತು ಅವಳ ಸ್ನೇಹಿತರು “ನೀನು ಮತ್ತೆ ಹಣ ಕೇಳಿದರೆ ಕೊಲ್ಲುವುದಾಗಿ” ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Man Forced To Drink Poison By Girlfriend In UP

English Summary

Our Whatsapp Channel is Live Now 👇

Whatsapp Channel

Related Stories