ಪ್ರೇಯಸಿಯನ್ನು ಕೊಂದು ಪಾಪ ಪರಿಹಾರಕ್ಕೆ ಗಂಗೆಯಲ್ಲಿ ಸ್ನಾನ ಮಾಡಿದ್ದ
ಉತ್ತರಪ್ರದೇಶ (Uttar Pradesh) ದಲ್ಲಿ ಪ್ರೇಯಸಿಯನ್ನು ಹತ್ಯೆ ಮಾಡಿದ ವ್ಯಕ್ತಿ, ಪಾಪ ಪರಿಹಾರಕ್ಕಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದ. ಸೀಸೀಟಿವಿ (CCTV) ಫುಟೇಜ್‌ನ ನೆರವಿನಿಂದ ಪೊಲೀಸರು 24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
- ಪ್ರೇಯಸಿಯನ್ನು ಹತ್ಯೆ ಮಾಡಿ ಸುಟ್ಕೇಸಿನಲ್ಲಿ ಶವವನ್ನು ಬಿಸಾಕಿದ ಆರೋಪಿ
- ಪಾಪ ಪರಿಹಾರಕ್ಕಾಗಿ ತಲೆ ಬೋಳಿಸಿ ಗಂಗಾ ನದಿಯಲ್ಲಿ ಸ್ನಾನ
- ಸಿಸಿಟಿವಿ ಫುಟೇಜ್‌ನಿಂದ 24 ಗಂಟೆಗಳಲ್ಲಿ ಆರೋಪಿಯ ಬಂಧನ
ಉತ್ತರ ಪ್ರದೇಶದ (Uttar Pradesh) ಜೌನ್‌ಪೂರ್ (Jaunpur) ನಲ್ಲಿ ನಡೆದ ಈ ದಾರುಣ ಘಟನೆ ಎಲ್ಲರಿಗೂ ಶಾಕ್ ನೀಡುವಂತದ್ದಾಗಿದೆ. 25 ವರ್ಷದ ಅನನ್ಯ ಸಹಾ (Ananya Saha) ಎಂಬ ಯುವತಿಯನ್ನು ಆಕೆಯ ಪ್ರೇಮಿ ವಿಶಾಲ್ (Vishal) ಆಕ್ರೋಶದಲ್ಲಿ ಬರ್ಬರವಾಗಿ ಕೊಂದಿದ್ದಾನೆ.
ಫೆಬ್ರವರಿ 28ರಂದು, ಜೌನ್‌ಪೂರ್ ಜೇಸಿ ಕ್ರಾಸ್ ರೋಡ್ ಬಳಿಯ ಕಸದ ತೊಟ್ಟಿ ಬಳಿ ಕೆಂಪು ಬಣ್ಣದ ಸುಟ್ಕೇಸ್ ಪತ್ತೆಯಾಯಿತು. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ, ಅದರಲ್ಲಿ ಯುವತಿಯ ಶವವಿರುವುದು ಬೆಳಕಿಗೆ ಬಂತು.
ತನಿಖೆ ನಡೆಸಿದ ಪೊಲೀಸರು ಶೀಘ್ರವೇ ಮೃತಳ ಗುರುತು ಪತ್ತೆ ಹಚ್ಚಿದರು. ಅನನ್ಯ ಸಹಾ ವಾರಣಾಸಿ (Varanasi) ಮೂಲದವಳಾಗಿದ್ದು, ಜೌನ್‌ಪೂರ್‌ನಲ್ಲಿ ಕೆಲಸ ಮಾಡುತ್ತಿದ್ದಳು.
ಇದನ್ನೂ ಓದಿ: ಸಿನಿಮಾ ಪ್ರಭಾವ: 6 ವರ್ಷದ ಬಾಲಕಿಯನ್ನು ಕೊಂದ 13 ವರ್ಷದ ಬಾಲಕ
ಅನನ್ಯ ಮತ್ತು ವಿಶಾಲ್ 2019ರಿಂದ ಪ್ರೀತಿಸುತ್ತಿದ್ದರು. ಆದರೆ ಕುಟುಂಬದ ಒತ್ತಾಯದಿಂದ, ಅನನ್ಯಾಗೆ ಮತ್ತೊಬ್ಬನ ಜೊತೆ ವಿವಾಹ ನಿಶ್ಚಯವಾಯಿತು. ಮದುವೆಯಾದರೂ, ಅನನ್ಯಾ ಮತ್ತು ವಿಶಾಲ್ ಸಂಪರ್ಕದಲ್ಲೇ ಇದ್ದರು. ಇದರಿಂದಾಗಿ ಅನನ್ಯಾ ಪತಿ ಮೂರು ವರ್ಷಗಳ ಹಿಂದೆಯೇ ಅವಳನ್ನು ಬಿಟ್ಟಿದ್ದು, ಅನನ್ಯಾ ಜೌನ್‌ಪೂರ್‌ನಲ್ಲಿ ಒಬ್ಬಳೇ ವಾಸಿಸುತ್ತಿದ್ದಳು.
ಫೆಬ್ರವರಿ 24ರಂದು ವಿಶಾಲ್ ವಾರಣಾಸಿಯಿಂದ ಜೌನ್‌ಪೂರ್‌ಗೆ ಬಂದು ಅನನ್ಯಳನ್ನು ಭೇಟಿಯಾದ. ಅವರು ಒಂದೇ ಮನೆಯಲ್ಲಿ ಕಳೆದಿದ್ದು, ಮಾರನೇ ದಿನ ಇಬ್ಬರ ನಡುವೆ ವಾಗ್ವಾದ ಶುರುವಾಯಿತು. ಮಾತು ತೀವ್ರಗೊಂಡು ವಿಶಾಲ್, ಆಕ್ರೋಶದಲ್ಲಿ, ಕಬ್ಬಿಣದ ರಾಡ್ (Iron Rod) ನಿಂದ ಅನನ್ಯಳ ತಲೆಗೆ ಹೊಡೆದಿದ್ದ. ತಕ್ಷಣವೇ ಆಕೆ ಮೂರ್ಛೆ ಹೋದಳು, ಕೊನೆಗೆ ಸಾವನ್ನಪ್ಪಿದಳು.
ನಂತರ, ಅನನ್ಯಳ ಶವವನ್ನು ಸುಟ್ಕೇಸಿನಲ್ಲಿ ತುಂಬಿ ಬಿಸಾಡಿದ ವಿಶಾಲ್, ತನ್ನ ಪಾಪ ಪರಿಹಾರಕ್ಕಾಗಿ ತಲೆ ಗೀಳಿಸಿಕೊಂಡು, ವಾರಣಾಸಿಯ ಗಂಗಾ ನದಿಯಲ್ಲಿ (Ganga River) ಸ್ನಾನ ಮಾಡಿದನು.
ಇದನ್ನೂ ಓದಿ: ಹೆಂಡತಿ ಫೋನ್‌ಗೆ ಬಂದ ಕಿಸ್ ಎಮೋಜಿ, ಇಬ್ಬರನ್ನೂ ಕಡಿದು ಕೊಂದ ಪತಿ
ಆದರೆ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಯ ಚಲನವಲನವನ್ನು ಕಣ್ತುಂಬಿಕೊಂಡಿದ್ದು, 24 ಗಂಟೆಗಳ ಒಳಗಾಗಿ ಪೊಲೀಸರು ವಿಶಾಲ್‌ನನ್ನು ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದರು.
ಈ ಪ್ರಕರಣವನ್ನು ವೇಗವಾಗಿ ಭೇದಿಸಿದ ಪೊಲೀಸ್ ತಂಡವನ್ನು ಅಧಿಕಾರಿಗಳು ಶ್ಲಾಘಿಸಿದ್ದಾರೆ. ವಿಶಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
Man Kills Girlfriend, Takes Dip in Ganga for Penance
Our Whatsapp Channel is Live Now 👇