ಗಂಡ ಇದ್ರೂ ವಿಧವಾ ಪಿಂಚಣಿ ಪಡೆಯುತ್ತಿದ್ದ 40000 ಮಹಿಳೆಯರ ಪಿಂಚಣಿ ರದ್ದು
ಎರಡನೇ ಮದುವೆ ಮಾಡಿಕೊಂಡಿದ್ದ ಮಹಿಳೆಯರು ಸಹ ವಿದವಾ ಪಿಂಚಣಿಯನ್ನು ಪಡೆಯುತ್ತಿದ್ದು, ಅಂತಹ 40,000ಕ್ಕೂ ಹೆಚ್ಚು ಜನರನ್ನು ಪತ್ತೆಹಚ್ಚಿ ಯೋಜನೆಯಿಂದ ಹೊರಗಿಡಲಾಗಿದೆ.
Publisher: Kannada News Today (Digital Media)
- ಮರುಮದುವೆಯಾದ ಮಹಿಳೆಯರನ್ನು ಪತ್ತೆಹಚ್ಚಿ ಪಿಂಚಣಿ ಸ್ಥಗಿತ
- ದಾಖಲೆಗಳ ತಪ್ಪು, ಮರಣಪಟ್ಟಿಗಳ ಕುರಿತು ಪರಿಶೀಲನೆ
- ಈಗ 34.90 ಲಕ್ಷ ಮಾತ್ರ ಅರ್ಹ ಫಲಾನುಭವಿಗಳು
ಉತ್ತರ ಪ್ರದೇಶದಲ್ಲಿ ವಿಧವಾ ಪಿಂಚಣಿ ಯೋಜನೆಯ (Widow Pension Scheme) ಪರಿಶೀಲನೆಯಲ್ಲಿ 40 ಸಾವಿರ ಅನರ್ಹ ಮಹಿಳೆಯರು ಪತ್ತೆಯಾಗಿದ್ದಾರೆ. ವಿಧವೆಯಾದ ನಂತರ ಮರುಮದುವೆಯಾದ ಮಹಿಳೆಯರು, ಮೃತ ಮಹಿಳೆಯರು ಮತ್ತು ದಾಖಲೆಗಳು ಸರಿಯಾಗಿಲ್ಲದ ಮಹಿಳೆಯರನ್ನು ಒಳಗೊಂಡ ಸಮೀಕ್ಷೆಯಲ್ಲಿ ಈ ವಾಸ್ತವ ಬೆಳಕಿಗೆ ಬಂದಿದೆ.
ಹೌದು, ವಿಧವಾ ಪಿಂಚಣಿ ಯೋಜನೆಯ ಪರಿಶೀಲನೆ ವೇಳೆ ದೊಡ್ಡ ಮಟ್ಟದ ಅಕ್ರಮ ಬೆಳಕಿಗೆ ಬಂದಿದೆ. ಸಮೀಕ್ಷೆಯಲ್ಲಿ 40,000ಕ್ಕೂ ಹೆಚ್ಚು ಮಹಿಳೆಯರು ಅನರ್ಹರು ಎಂದು ದೃಢಪಟ್ಟಿದೆ. ಇವರಲ್ಲಿ ಮರು ಮದುವೆಯಾದವರೂ, ಸತ್ತವರ ಹೆಸರು ಪಟ್ಟಿಯಲ್ಲಿ ಇದ್ದವು. ಅಲ್ಲದೇ ಕೆಲವರ ದಾಖಲೆಗಳಲ್ಲಿ ಕೂಡಾ ತೊಂದರೆ ಕಂಡುಬಂದಿದೆ.
ಇದನ್ನೂ ಓದಿ: PhonePe ನಲ್ಲಿ ಹಣ ಕಳಿಸೋಕೆ ಯಾವುದೇ ಶುಲ್ಕವಿಲ್ಲ! ಹಾಗಾದ್ರೆ ಕಂಪನಿಗೆ ಏನು ಲಾಭ
ಪ್ರತಿಯೊಬ್ಬ ಅರ್ಹ ವಿದವೆಗೆ ತಿಂಗಳಿಗೆ ₹1000 ಪಿಂಚಣಿಯನ್ನು (Direct Benefit Transfer) ನೀಡಲಾಗುತ್ತದೆ. ಇದನ್ನು ಮೂರು ತಿಂಗಳಿಗೊಮ್ಮೆ ₹3000 ರೂಪಾಯಿಯಾಗಿ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಆದರೆ ದಾಖಲೆಗಳಲ್ಲಿನ ತಪ್ಪು ಹಾಗೂ ಮರುಮದುವೆ ಮಾಡಿಕೊಂಡ ಹಲವು ಮಹಿಳೆಯರು ಈ ಯೋಜನೆಯಿಂದ ಹೊರಗುಳಿಯಲಿದ್ದಾರೆ.
ಈ ಹಿಂದೆ ಯೋಜನೆ ಮೂಲಕ ಪಿಂಚಣಿ ಪಡೆಯುತ್ತಿದ್ದ ಫಲಾನುಭವಿಗಳ ಸಂಖ್ಯೆ 35.40 ಲಕ್ಷ ಇದ್ದು, ಇದೀಗ ಇದನ್ನು ಶುದ್ಧೀಕರಿಸಿ 34.90 ಲಕ್ಷಕ್ಕಷ್ಟೇ ಇಳಿಸಲಾಗಿದೆ. ಈ ಕ್ರಮದ ಮೂಲಕ ನಿಜವಾದ ಫಲಾನುಭವಿಗಳಿಗೆ ಯೋಜನೆಯ ಬೆನಿಫಿಟ್ ನೀಡಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಮನೆ, ಅಸ್ತಿ ಖರೀದಿ ಮುನ್ನ ಅದರ ನಿಜವಾದ ಮಾಲೀಕ ಯಾರೆಂದು ಈ ರೀತಿ ಚೆಕ್ ಮಾಡಿ
ಜಿಲ್ಲಾವಾರು ಸಮೀಕ್ಷೆಯು ಡೋರ್ ಟು ಡೋರ್ ಆಗಿ ನಡೆಯಿತು. ಇದರಲ್ಲಿ ಮರುಮದುವೆ ಮಾಡಿಕೊಂಡ ವಿದವೆಯರು ಹೆಚ್ಚಾಗಿ ಪತ್ತೆಯಾದರು. ಮದುವೆ ಆದ ಬಳಿಕ ಅವರು ಈ ಪಿಂಚಣೆಗೆ ಅರ್ಹರಾಗಿಲ್ಲ. ಇನ್ನು ಕೆಲ ಮಹಿಳೆಯರು ಇನ್ನೆಲ್ಲಾ ಪಿಂಚಣಿ ಯೋಜನೆಗಳನ್ನು ಪಡೆಯುತ್ತಿದ್ದರೂ ವಿದವಾ ಪಿಂಚಣಿಗೆ ಸಹ ಅರ್ಜಿ ಸಲ್ಲಿಸಿದ್ದ ಕಾರಣದಿಂದ ಅವರನ್ನು ಹೊರಗಿಡಲಾಗಿದೆ.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ 5 ಲಕ್ಷ ವಿಮೆ, ಮೋದಿಜಿ ಘೋಷಣೆ! ಅಷ್ಟಕ್ಕೂ ಏನಿದು ಯೋಜನೆ
ವಿಧವೆಯರು ಈ ಯೋಜನೆಗೆ ಅರ್ಜಿ ಹಾಕಬೇಕಾದರೆ ಕೆಲವು ನಿಯಮಗಳು ಅನಿವಾರ್ಯವಾಗಿವೆ. ಮಹಿಳೆಯು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು, ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು. ಪತಿ ಮೃತರಾದ ಪ್ರಮಾಣಪತ್ರ, ಆಧಾರ್ ಕಾರ್ಡ್ (Aadhaar card), ಬ್ಯಾಂಕ್ ಪಾಸ್‌ಬುಕ್ (linked with NPCI), ಆದಾಯ ಪ್ರಮಾಣಪತ್ರ ಮೊದಲಾದ ದಾಖಲೆಗಳು ಅಗತ್ಯ.
ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ [ssp-up.gov.in] ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಫಾರ್ಮ್ ತುಂಬಬಹುದು. ಅಥವಾ ಜಿಲ್ಲೆಯ ಪ್ರೊಬೆಷನ್ ಕಚೇರಿಗೆ ಅಥವಾ ಜನಸೇವಾ ಕೇಂದ್ರಕ್ಕೆ ಹೋಗಿ ಫಾರ್ಮ್ ಸಲ್ಲಿಸಬಹುದು.
ಇದನ್ನೂ ಓದಿ: ಎಸ್‌ಬಿಐ ಕ್ರೆಡಿಟ್ ಕಾರ್ಡ್ ನ್ಯೂ ರೂಲ್ಸ್: ಜುಲೈ 15ರಿಂದ ಭಾರೀ ಬದಲಾವಣೆ
ಈ ವರ್ಷ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ಪಿಂಚಣಿ ಮೊತ್ತವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಸರ್ಕಾರದ ಹೆಜ್ಜೆಗೆ ಸಾರ್ವಜನಿಕರಿಂದ ಪ್ರಶಂಸೆಯೂ ವ್ಯಕ್ತವಾಗಿದೆ.
Married Women Removed from Widow Pension Scheme in UP