ಕಾಣೆಯಾಗಿದ್ದ 15 ವರ್ಷದ ಬಾಲಕಿ ನೆರೆಮನೆಯ ವ್ಯಕ್ತಿಯೊಂದಿಗೆ ಶವವಾಗಿ ಪತ್ತೆ
ಕೇರಳದ ಕಾಸರಗೋಡ್‌ನಲ್ಲಿ ಮೂರು ವಾರಗಳ ಹಿಂದೆ ಕಾಣೆಯಾದ 15 ವರ್ಷದ ಬಾಲಕಿ ಮತ್ತು 42 ವರ್ಷದ ವ್ಯಕ್ತಿ ಕೊನೆಗೆ ಮಾವಿನ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
- ಮೂರು ವಾರಗಳ ಹಿಂದೆ ಬಾಲಕಿ ಮತ್ತು ನೆರೆಮನೆಯ ವ್ಯಕ್ತಿ ಕಾಣೆ
- ಡ್ರೋನ್ ಬಳಸಿ ತೀವ್ರ ಹುಡುಕಾಟ ನಡೆಸಿದ ಪೊಲೀಸರು
- ಕೊನೆಗೆ ಮನೆಯ ಸಮೀಪದ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಶವಗಳು ಪತ್ತೆ
Kerala: ಕೇರಳದ ಕಾಸರಗೋಡ್‌ನಲ್ಲಿ (Kasaragod) ಒಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಮೂರು ವಾರಗಳ ಹಿಂದೆ ಕಾಣೆಯಾಗಿದ್ದ 15 ವರ್ಷದ ಬಾಲಕಿ ಹಾಗೂ 42 ವರ್ಷದ ನೆರೆಮನೆಯ ವ್ಯಕ್ತಿ ಕೊನೆಗೆ ಶವವಾಗಿ ಪತ್ತೆಯಾಗಿದ್ದಾರೆ.
ತೀವ್ರ ಹುಡುಕಾಟ ನಡೆಸಿದ ಪೊಲೀಸರು ಅವರ ಶವಗಳನ್ನು ಮನೆಯ ಸಮೀಪದ ಮಾವಿನ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ.
ಫೆಬ್ರವರಿ 11ರಂದು ಬಾಲಕಿ ಕಾಣೆಯಾಗಿದ್ದಳು. ಅದೇ ದಿನ ನೆರೆಮನೆಯ 42 ವರ್ಷದ ಪ್ರದೀಪ್ ಕೂಡ ಕಾಣೆಯಾಗಿದ್ದ. ಇದರಿಂದ ಬಾಲಕಿಯ ಕುಟುಂಬದಲ್ಲಿ ಆತಂಕ ಉಂಟಾಯಿತು. ಫೆಬ್ರವರಿ 12ರಂದು ಕುಟುಂಬದವರು ಪೊಲೀಸರ ಬಳಿ ದೂರು ನೀಡಿದರು. ಪ್ರದೀಪ್ ಮೇಲೂ ಅವರಿಗೆ ಅನುಮಾನ ಇದ್ದುದರಿಂದ ಪೊಲೀಸರು ತೀವ್ರ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೈಕ್‌ನಲ್ಲಿ ಹೋಗುತ್ತಿದ್ದ ಪತ್ರಕರ್ತನ ಗುಂಡಿಕ್ಕಿ ಹತ್ಯೆ! ಭೀಕರ ಘಟನೆ
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು 52 ಮಂದಿಯ ವಿಶೇಷ ತಂಡ ರಚಿಸಿದರು. ವಿವಿಧ ತಂತ್ರಜ್ಞಾನಗಳ ಸಹಾಯದಿಂದ ಶೋಧ ನಡೆಸಿದರೂ ಬಾಲಕಿ ಮತ್ತು ಪ್ರದೀಪ್ ಬಗ್ಗೆ ಸುಳಿವು ಸಿಗಲಿಲ್ಲ. ಅವರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು. ಕೊನೆಗೆ ಡ್ರೋನ್ ಸಹಾಯದಿಂದ (Drone Camera) ಹುಡುಕಿದಾಗ, ಮನೆಯ ಹತ್ತಿರದ ಕಾಡಿನಲ್ಲಿ ಮಾವಿನ ಮರಕ್ಕೆ ನೇತು ಹಾಕಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾದವು.
ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ ಪೊಲೀಸರು, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶವನ್ನು ಬಹಿರಂಗಪಡಿಸಲಿದ್ದಾರೆ. ಬಾಲಕಿ ಮತ್ತು ಪ್ರದೀಪ್ ಸಂಬಂಧದ ಬಗ್ಗೆ ಈಗಾಗಲೇ ಸ್ಥಳೀಯರು ಹಲವು ಊಹಾಪೋಹಗಳನ್ನು ಮಾಡುತ್ತಿದ್ದಾರೆ. ಈ ಘಟನೆಯ ಹಿಂದಿರುವ ನಿಜವನ್ನು ತಿಳಿಯಲು ಪೊಲೀಸರು ಮುಂದಿನ ಹಂತದ ತನಿಖೆ ಕೈಗೊಂಡಿದ್ದಾರೆ.
Missing Girl and Neighbour Found Dead
Our Whatsapp Channel is Live Now 👇