Mobile Phone Blast: ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ, ಸ್ವಲ್ಪದರಲ್ಲೇ ಪಾರಾದ 76 ವರ್ಷದ ವೃದ್ಧ.. ವೈರಲ್ ವಿಡಿಯೋ

Story Highlights

Mobile Phone Blast: ಶರ್ಟ್ ಜೇಬಿನಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡಿದ್ದು ಸ್ವಲ್ಪದರಲ್ಲೇ ವೃದ್ಧರೊಬ್ಬರು ಪಾರಾಗಿದ್ದಾರೆ. ಕೇರಳದ ತ್ರಿಶೂರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Mobile Phone Blast: ಶರ್ಟ್ ಜೇಬಿನಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡಿದ್ದು (mobile phone explodes) ಸ್ವಲ್ಪದರಲ್ಲೇ ವೃದ್ಧರೊಬ್ಬರು ಪಾರಾಗಿದ್ದಾರೆ. ಕೇರಳದ (Kerala) ತ್ರಿಶೂರ್‌ನಲ್ಲಿ (Thrissur) ಈ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ತ್ರಿಶೂರ್‌ನ ಮರೋಟಿಚಲ್ ಪ್ರದೇಶದಲ್ಲಿ 76 ವರ್ಷದ ವ್ಯಕ್ತಿಯೊಬ್ಬರ ಶರ್ಟ್ ಜೇಬಿನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ವೃದ್ಧ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದಾಗ ಈ ಘಟನೆ ನಡೆದಿದೆ.

ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದರಿಂದ ಎಚ್ಚೆತ್ತುಕೊಂಡು ಸ್ವತಃ ಮೊಬೈಲ್ ಫೋನ್ ಬಿಸಾಡಿ ಬೆಂಕಿ ನಂದಿಸಿದ್ದಾರೆ, ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಇದು ಮೂರನೇ ಘಟನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಇದೆಲ್ಲವೂ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ನಡುವೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ಆಧರಿಸಿ ಢಾಬಾದಲ್ಲಿ ಟೀ ಕುಡಿಯಲು ಹೋದ ವೃದ್ಧ ಆರಾಮವಾಗಿ ಕುಳಿತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಸಮೀಪದಲ್ಲಿ ಒಬ್ಬ ಯುವಕ ಅವರಿಗಾಗಿ ಚಹಾ ಮಾಡುತ್ತಿದ್ದನು.

Mobile Phone Blast in Kerala

ಅಷ್ಟರಲ್ಲಿ ವೃದ್ಧನ ಜೇಬಿನಲ್ಲಿದ್ದ ಫೋನ್ ಸ್ಫೋಟಗೊಂಡಿತು. ಕೂಡಲೇ ಜೇಬಿನಿಂದ ಫೋನ್ ಬಿಸಾಡಿ ಬಟ್ಟೆಗೆ ಅಂಟಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ತ್ರಿಶೂರ್ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಅಂಗಡಿಯೊಂದರಿಂದ ವರ್ಷದ ಹಿಂದೆ ಒಂದು ಸಾವಿರ ರೂಪಾಯಿಗೆ ಈ ಫೋನ್ ಖರೀದಿಸಿದ್ದೆ ಎಂದು ವೃದ್ಧ ಹೇಳಿದರು. ಸ್ಫೋಟಗೊಂಡಿದ್ದು ಸರಳ ಕೀಪ್ಯಾಡ್ ಫೋನ್ ಎನ್ನಲಾಗಿದೆ. ಬ್ಯಾಟರಿ ದೋಷದಿಂದ (Phone Battery) ಫೋನ್ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆದರೆ, ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿರುವುದು ಸಾಮಾನ್ಯ ಸಂಗತಿಯಲ್ಲ ಎನ್ನುತ್ತಾರೆ ಪೊಲೀಸರು. ಈ ಹಿಂದೆಯೂ ಹಲವೆಡೆ ಇಂತಹ ಘಟನೆಗಳು ನಡೆದಿದ್ದವು. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಒಂದು ತಿಂಗಳಲ್ಲಿ ಮೂರು ಬಾರಿ ಫೋನ್‌ಗಳು ಸ್ಫೋಟಗೊಂಡಿವೆ. ಕಳೆದ ತಿಂಗಳು ಕೇರಳದಲ್ಲಿ ಮೂರು ಫೋನ್ ಸ್ಫೋಟಗಳು ನಡೆದಿವೆ. ಕೋಝಿಕ್ಕೋಡ್ ನಗರದಲ್ಲಿಯೂ ವ್ಯಕ್ತಿಯೊಬ್ಬನ ಪ್ಯಾಂಟ್ ಜೇಬಿನಲ್ಲಿದ್ದ ಫೋನ್ ಸ್ಫೋಟಗೊಂಡಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಮೊನ್ನೆ ಏಪ್ರಿಲ್ 24 ರಂದು ತ್ರಿಶೂರ್‌ನಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ 8 ವರ್ಷದ ವಿದ್ಯಾರ್ಥಿನಿ ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಆಕೆಯ ಕೈಯಲ್ಲಿದ್ದ ಫೋನ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬಾಲಕಿ ಗಾಯಗೊಂಡಿದ್ದಳು. ನಂತರ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

mobile phone explodes in shirt pocket in Kerala Thrissur Video Goes Viral

Related Stories