ಮೈಸೂರು-ದರ್ಭಾಂಗ್ ಎಕ್ಸ್‌ಪ್ರೆಸ್ ಗೂಡ್ಸ್ ರೈಲು ನಡುವೆ ಡಿಕ್ಕಿ, ಹಳಿತಪ್ಪಿದ 13 ಬೋಗಿಗಳು

Story Highlights

Mysore-Darbhanga Express : ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ರೈಲನ್ನು ಮೈಸೂರು-ದರ್ಭಾಂಗ್ ಎಕ್ಸ್‌ಪ್ರೆಸ್ ರೈಲು (Mysore-Darbhanga Express) ಎಂದು ಗುರುತಿಸಲಾಗಿದೆ.

Mysore-Darbhanga Express (ಮೈಸೂರು -ದರ್ಭಾಂಗ್ ಎಕ್ಸ್ ಪ್ರೆಸ್ ರೈಲು ಅಪಘಾತ) : ತಮಿಳುನಾಡಿನ ಚೆನ್ನೈ ಹೊರವಲಯದಲ್ಲಿ ಶುಕ್ರವಾರ ರಾತ್ರಿ ರೈಲು ಅಪಘಾತ ಸಂಭವಿಸಿದೆ. ತಿರುವಳ್ಳೂರು ಸಮೀಪದ ಕವರಿಪೆಟ್ಟೈ ಎಂಬಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಸುಟ್ಟು ಕರಕಲಾಗಿವೆ. ಬೆಂಕಿ ಅವಘಡದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ರೈಲನ್ನು ಮೈಸೂರು-ದರ್ಭಾಂಗ್ ಎಕ್ಸ್‌ಪ್ರೆಸ್ ರೈಲು (Mysore-Darbhanga Express) ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಎಕ್ಸ್‌ಪ್ರೆಸ್ ರೈಲು ಹಳಿಗಳ ಮೇಲೆ ನಿಂತಿದ್ದ ಗೂಡ್ಸ್ ರೈಲಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಈ ಅಪಘಾತದಲ್ಲಿ ಹಲವು ಬೋಗಿಗಳು ಹಳಿತಪ್ಪಿವೆ. ಘಟನಾ ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ರಕ್ಷಣಾ ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತರನ್ನು ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಮೈಸೂರು-ದರ್ಭಾಂಗ್ ಎಕ್ಸ್‌ಪ್ರೆಸ್ಚೆನ್ನೈ ಸಮೀಪದ ಕವರೈಪಟ್ಟೈ ಎಂಬಲ್ಲಿ ಶುಕ್ರವಾರ ರಾತ್ರಿ ರೈಲು ಅಪಘಾತ ಸಂಭವಿಸಿದೆ. ಮೈಸೂರು-ದರ್ಭಾಂಗಾ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಸರಕು ಗೂಡ್ಸ್ ಗೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಎರಡು ಎಕ್ಸ್‌ಪ್ರೆಸ್ ಬೋಗಿಗಳು ಸುಟ್ಟು ಕರಕಲಾಗಿವೆ.

ರೈಲ್ವೆ ಅಪಘಾತದಲ್ಲಿ (Mysore Darbhanga Express Collides With Goods Train) 19 ಜನರು ಗಾಯಗೊಂಡಿದ್ದಾರೆ. ರೈಲು ಅಪಘಾತದಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.

Mysore-Darbhanga Express Train Collides With Goods Train In Tamil Nadu 2 Coaches On Fire

Related Stories