ರೈತರಿಗೆ ಸಿಹಿಸುದ್ದಿ! ಎಕರೆಗೆ 10 ಟನ್ ಇಳುವರಿ, ಹೊಸ ಭತ್ತದ ತಳಿ ಅಭಿವೃದ್ಧಿ

ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಹೊಸ ಭತ್ತ ತಳಿಯ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು, ಒಂದು ತೆನೆಗೆ 1000 ಕಾಳುಗಳ ಮೂಲಕ ಎಕರೆಗೆ 10 ಟನ್ ಇಳುವರಿ ಸಿಗಲಿದೆ ಎಂದು ಭರವಸೆ ನೀಡಿದೆ.

  • ಹೊಸ ಭತ್ತದ ತಳಿ 1000 ಕಾಳುಗಳ ಮೂಲಕ ಎಕರೆಗೆ 10 ಟನ್‌ಗಳಷ್ಟು ಇಳುವರಿ
  • ಕೀಟ ನಿರೋಧಕ ತಳಿ, ಗ್ಲೂಕೋಸ್ ಅಂಶ ಕಡಿಮೆ – ಆರೋಗ್ಯಕ್ಕೂ ಉಪಯುಕ್ತ
  • 2027ರ ವೇಳೆಗೆ ಈ ತಳಿ ರೈತರಿಗೆ ಲಭ್ಯ, ಪ್ರಾಥಮಿಕ ಪ್ರಯೋಗಗಳಲ್ಲಿ ಯಶಸ್ಸು

New Paddy Variety : ರೈತರ ಮಡಿಲಿಗೆ ಬಂಗಾರ ಬೀಜ ಬೀಳುವ ದಿನಗಳು ಬಹುಕಾಲ ದೂರವಿಲ್ಲ. ಭಾರತೀಯ ಭತ್ತ ಸಂಶೋಧನಾ ಸಂಸ್ಥೆ (IIRR) ಅಭಿವೃದ್ಧಿಪಡಿಸುತ್ತಿರುವ ಹೊಸ ತಳಿ, 🌾 ಭತ್ತ ಬೆಳೆಯುವ ಕ್ಷೇತ್ರದಲ್ಲಿ ನೂತನ ಅಧ್ಯಾಯ ಬರೆಯಲಿದೆ.

🌾ಈ ಭತ್ತದ ತಳಿಯ ವಿಶೇಷತೆ ಏನೆಂದರೆ, ಪ್ರತಿ ತೆನೆಗೆ 1000 ಕಾಳುಗಳು ಬೆಳೆಯಲಿದ್ದು, ಒಂದು ಎಕರೆ ಜಮೀನಿಗೆ ಸುಮಾರು 10 ಟನ್‌ಗಳಷ್ಟು ಇಳುವರಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಸಿಹಿಸುದ್ದಿ! ಜುಲೈ 25ಕ್ಕೆ ರೈತರ ಬ್ಯಾಂಕ್ ಖಾತೆಗೆ ₹2,000 ಪಿಎಂ ಕಿಸಾನ್ ಹಣ ಜಮಾ

ಇದೊಂದು ಹೈಬ್ರಿಡ್ (hybrid) ತಳಿ ಅಲ್ಲ. ಇದು ಸಂಪ್ರದಾಯಿಕ ತಳಿಗಳ ಸಂಯೋಜನೆಯಿಂದ ರೂಪುಗೊಳ್ಳುತ್ತಿರುವ ತಳಿಯಾಗಿದ್ದು, ಕೀಟ-ರೋಗ ತಡೆಯುವ ಶಕ್ತಿ ಹೊಂದಿರುವುದಲ್ಲದೆ, ಗ್ಲೂಕೋಸ್ (glucose) ಅಂಶವೂ ಕಡಿಮೆ ಇದೆ. ಇದು ಆರೋಗ್ಯ ಕಾಳಜಿಯಿಂದಲೂ ಉತ್ತಮವಾಗಿದೆ. ಈ ತಳಿ ರೈತರಿಗೆ 2027ರ ಡಿಸೆಂಬರ್ ವೇಳೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಹೊಸ ತಳಿಗೆ ಸಂಬಂಧಿಸಿದ ಪ್ರಾಥಮಿಕ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಅಂತಿಮ ಪರೀಕ್ಷೆಗಳಲ್ಲಿ ಸಹ ಮಿಕ್ಕ ಉಳಿದ ಫಲಿತಾಂಶಗಳು ತೃಪ್ತಿಕರವಾದರೆ, ಮುಂದಿನ ಎರಡು ವರ್ಷಗಳಲ್ಲಿ ಬೀಜ ಉತ್ಪಾದನೆ ಆರಂಭವಾಗಲಿದೆ.

Paddy Variety

ದೇಶದ ಆಹಾರ ಭದ್ರತೆ (food security) ಉನ್ನತ ಮಟ್ಟಕ್ಕೇರಿಸಬಹುದಾದ ಭತ್ತದ ಈ ಹೊಸ ತಳಿ, ಚೀನಾದ (China) ಇಂದಿನ ಹೈಬ್ರಿಡ್ ತಳಿಗಿಂತಲೂ ಉತ್ತಮ ಇಳುವರಿಯ ಭರವಸೆ ನೀಡುತ್ತಿದೆ.

ಪ್ರಸ್ತುತ ಭತ್ತದ ತಳಿಗಳಿಂದ ಎಕರೆಗೆ 2 ರಿಂದ 4 ಟನ್ ವರೆಗೆ ಮಾತ್ರ ಇಳುವರಿ ಸಿಗುತ್ತಿದ್ದರೆ, 2023ರ ಅಕ್ಟೋಬರ್‌ನಲ್ಲಿ ಬಿಡುಗಡೆಗೊಂಡ ಡಿಆರ್‌ಆರ್ ಧಾನ್ 75 ಮತ್ತು 76 ತಳಿಗಳಿಂದ ಪ್ರತಿ ತೆನೆಗೆ 450-500 ಕಾಳುಗಳು ಮತ್ತು 3.5-4.5 ಟನ್ ಇಳುವರಿ ಸಿಕ್ಕಿತ್ತು. ಆದರೆ ಹೊಸ ತಳಿ ಈ ಎಲ್ಲ ಸಂಖ್ಯೆಗಳನ್ನೂ ದಾಟಲಿದೆ.

ಇದನ್ನೂ ಓದಿ: ಪ್ರತಿ ತಿಂಗಳು ₹5000 ಪಿಂಚಣಿ! ಈ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಬಂಪರ್

ವಿಜ್ಞಾನಿಗಳ ಪ್ರಕಾರ, “ಭಾರತೀಯ ರೈತರ ಭವಿಷ್ಯ ಸುಸ್ಥಿರವಾಗಬೇಕು ಎಂಬ ಉದ್ದೇಶದಿಂದ ಈ ತಳಿಯನ್ನು ರೂಪಿಸಲಾಗುತ್ತಿದೆ. ಇದು ಬೀಜ ಉತ್ಪಾದನೆಗೂ (seed production) ಸೂಕ್ತವಾಗಿರುತ್ತದೆ. ಇಳುವರಿ ಹೆಚ್ಚಿದರೆ, ನಾಟಿ ಕ್ಷೇತ್ರಗಳಲ್ಲಿ ರೈತರ ಆದಾಯವೂ ಏರಿಕೆ ಆಗುವುದು ಖಚಿತ.” ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

New Paddy Variety to Yield 10 Tonnes per Acre by 2027

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories