ಉಚಿತ ಬಸ್ ಓಡಾಟಕ್ಕೆ ಹೊಸ ರೂಲ್ಸ್, ನಿಯಮ ಪಾಲಿಸದೆ ಇದ್ರೆ 500 ರೂ. ದಂಡ!

ಶೂನ್ಯ ಟಿಕೆಟ್ ಪಡೆದುಕೊಂಡೆ ಪ್ರಯಾಣಿಸಬೇಕು ಯಾವುದೇ ಕಾರಣಕ್ಕೂ ಮಹಿಳೆಯರು ಉಚಿತ ಎನ್ನುವ ಕಾರಣಕ್ಕೆ ಟಿಕೆಟ್ (bus ticket) ತೆಗೆದುಕೊಳ್ಳದೆ ಪ್ರಯಾಣಿಸುವಂತಿಲ್ಲ

ರಾಜ್ಯ ಕಾಂಗ್ರೆಸ್ ಸರ್ಕಾರ (Congress government) ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆ (guarantee schemes) ಗಳನ್ನು ಘೋಷಿಸಿತ್ತು, ಅದರಲ್ಲಿ ಮೊಟ್ಟಮೊದಲು ಜಾರಿಯಾಗಿದ್ದು ಶಕ್ತಿ ಯೋಜನೆ (Shakti scheme) , ಈ ಯೋಜನೆಯ ಅಡಿಯಲ್ಲಿ ಇಂದು ಲಕ್ಷಾಂತರ ಮಹಿಳೆಯರು ಕರ್ನಾಟಕದ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ

ಕಳೆದ ನಾಲ್ಕು ತಿಂಗಳಿನಿಂದ ಒಂದೇ ಒಂದು ರೂಪಾಯಿಗಳನ್ನು ಕೂಡ ಕೊಡದೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ, ಇದಕ್ಕಾಗಿ ಮಹಿಳೆಯರು ಸರ್ಕಾರವನ್ನು ಅಭಿನಂದಿಸಿದ್ದಾರೆ.

ರದ್ದಾಗುತ್ತ 10 ವರ್ಷದ ಹಳೆಯ ಆಧಾರ್ ಕಾರ್ಡ್! ರಾತ್ರೋ-ರಾತ್ರಿ ಏನಿದು ಹೊಸ ಆದೇಶ

ಉಚಿತ ಬಸ್ ಓಡಾಟಕ್ಕೆ ಹೊಸ ರೂಲ್ಸ್, ನಿಯಮ ಪಾಲಿಸದೆ ಇದ್ರೆ 500 ರೂ. ದಂಡ! - Kannada News

ಉಚಿತ ಬಸ್ ಯೋಜನೆ ಆರಂಭಿಸಿದ ನಂತರ ಮಹಿಳೆಯರಿಗೆ ಟಿಕೆಟ್ ಪಡೆದುಕೊಳ್ಳಲು ಆಧಾರ್ ಕಾರ್ಡ್ (Aadhaar Aadhar Card) ಗುರುತಿನ ಚೀಟಿಯನ್ನು ತೋರಿಸಬೇಕು ಎನ್ನಾಲಾಯಿತು, ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದುಕೊಳ್ಳುವುದರ ಬದಲು ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಿಗೆ ಮೊದಲಾದ ಯಾವುದೇ ಗುರುತಿನ ಚೀಟಿ ಇದ್ದರೂ ಕೂಡ ಅದನ್ನು ತೋರಿಸಿ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಕರ್ನಾಟಕವನ್ನು ಅನುಸರಿಸಿದ ತೆಲಂಗಾಣ! (Same scheme in Telangana)

ಇತ್ತೀಚಿಗೆ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಆಗಿ ರೇವಂತ್ ರೆಡ್ಡಿ (Telangana CM Revanth Reddy) ಆಯ್ಕೆಯಾಗಿದ್ದು, ಅವರ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವಂತೆ ಮಹಾಲಕ್ಷ್ಮಿ ಯೋಜನೆಯ (Mahalaxmi scheme) ಮೂಲಕ ಮಹಿಳೆಯರಿಗೆ ಉಚಿತ ಬಸ್ಸು (free bus) ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ರೇವಂತ್ ರೆಡ್ಡಿ ಪ್ರಮಾಣವಚನಕ್ಕೆ ಸಹಿ ಮಾಡುತ್ತಿದ್ದಂತೆ ಮಹಾಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ ಇದು ಮಹಿಳೆಯರಲ್ಲಿ ಸಾಕಷ್ಟು ಸಂತಸ ಮೂಡಿಸಿದೆ.

Free Busಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ರೂಲ್ಸ್! (New rules for women who travel in free buses)

ಸರ್ಕಾರ ಈಗಾಗಲೇ ತಿಳಿಸಿರುವಂತೆ ಡಿಸೆಂಬರ್ 9 ರಿಂದ ಮಹಾಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದ್ದು ಮಹಿಳೆಯರು ಇನ್ನು ಮುಂದೆ ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಬಹುದು. ಆದರೆ ತೆಲಂಗಾಣ ಹೇರಿಕೆ ಮಾಡಿರುವ ಏಕೈಕ ರೂಲ್ಸ್ ಅಂದ್ರೆ ಈ ಯೋಜನೆ ತೆಲಂಗಾಣದ ಮೂಲ ನಿವಾಸಿಗಳಿಗೆ ಅಥವಾ ತೆಲಂಗಾಣದ ಜನರಿಗೆ ಮಾತ್ರ ಲಭ್ಯವಾಗುತ್ತದೆ, ಇತರ ಪ್ರದೇಶಗಳಿಂದ ತೆಲಂಗಾಣಕ್ಕೆ ಬಂದು ವಾಸಿಸುವ ಮಹಿಳೆಯರಿಗೆ ಲಭ್ಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ಟಿಕೆಟ್ ಪಡೆಯುವುದು ಕಡ್ಡಾಯ!

ತೆಲಂಗಾಣ ಸಾರಿಗೆ ಇಲಾಖೆ ಉಚಿತ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮತ್ತೊಂದು ಸೂಚನೆ ನೀಡಿದ್ದು, ಶೂನ್ಯ ಟಿಕೆಟ್ ಪಡೆದುಕೊಂಡೆ ಪ್ರಯಾಣಿಸಬೇಕು ಯಾವುದೇ ಕಾರಣಕ್ಕೂ ಮಹಿಳೆಯರು ಉಚಿತ ಎನ್ನುವ ಕಾರಣಕ್ಕೆ ಟಿಕೆಟ್ (bus ticket) ತೆಗೆದುಕೊಳ್ಳದೆ ಪ್ರಯಾಣಿಸುವಂತಿಲ್ಲ

ಕಂಡಕ್ಟರ್ (conductor) ಗೆ ಸರಿಯಾದ ಗುರುತಿನ ಚೀಟಿಯನ್ನು ತೋರಿಸಿ ಅವರಿಂದ ಶೂನ್ಯ ಶುಲ್ಕದ ಟಿಕೆಟ್ ಅನ್ನು ಪಡೆದುಕೊಳ್ಳಬೇಕು. ಟಿಕೆಟ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ವೋಟರ್ ಐಡಿ ರೇಷನ್ ಕಾರ್ಡ್ ಪಾಸ್ಪೋರ್ಟ್ ಹೀಗೆ ಯಾವುದೇ ದಾಖಲೆಯನ್ನು ತೋರಿಸಿದರು ಆಗುತ್ತೆ. ಆದರೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ಅಂತಹ ಮಹಿಳೆಯರಿಗೆ 500 ರೂಪಾಯಿಗಳ ದಂಡ (penalty) ವಿಧಿಸಲು ಸರ್ಕಾರ ನಿರ್ಧರಿಸಿದೆ.

ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮೆಟ್ರೋ ಎಕ್ಸ್ಪ್ರೆಸ್ (metro express bus), ಎಕ್ಸ್ಪ್ರೆಸ್, ಹಾಗೂ ಸಿಟಿ ಆರ್ಡಿನರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಬಹುದು.

ಇನ್ನು ಉಚಿತವಾಗಿ ಬಸ್ ಟಿಕೆಟ್ ಪಡೆದುಕೊಳ್ಳಲು ಪ್ರತಿಯೊಬ್ಬ ಮಹಿಳೆಯರು ಕಂಡಕ್ಟರ್ ಗೆ ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಅದೇ ರೀತಿ ಬಸ್ಗಳಲ್ಲಿ ತೆಗೆದುಕೊಳ್ಳುವ ಟಿಕೆಟ್ ಮೇಲೆ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ ಎನ್ನುವುದನ್ನು ಅಷ್ಟೇ ಬರೆದಿರಲಾಗುತ್ತೆ ಇಲ್ಲಿ ಯಾವುದೇ ರೀತಿಯ ಶುಲ್ಕ ಮುದ್ರಣ ಗೊಳ್ಳುವುದಿಲ್ಲ. ಒಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಚುನಾವಣಾ ಟ್ರಿಕ್ಸ್ ತೆಲಂಗಾಣದಲ್ಲಿಯೂ ವರ್ಕೌಟ್ ಆಗಿದೆ ಎನ್ನುಬಹುದು!

New rules for free bus travel, 500 fine if you don’t follow the rules

Follow us On

FaceBook Google News

New rules for free bus travel, 500 fine if you don't follow the rules