ಟ್ರಾಕ್ಟರ್ ಖರೀದಿಗೆ ಹೊಸ ಸಬ್ಸಿಡಿ ಯೋಜನೆ! ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಸರ್ಕಾರವು ಕೃಷಿಕರಿಗೆ ಕಡಿಮೆ ಬೆಲೆಯಲ್ಲಿ ಟ್ರಾಕ್ಟರ್ ಖರೀದಿ ಮಾಡುವ ಅವಕಾಶ ನೀಡುತ್ತಿದೆ. ಹಾಗಾಗಿ ನೀವು ರೈತರಾಗಿದ್ದರೆ, ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.

ನಮ್ಮ ದೇಶದ ಮೂಲ ಉದ್ಯಮ ಕೃಷಿ, ನಮ್ಮಲ್ಲಿ ಕೋಟಿಗಟ್ಟಲೇ ಜನರು ಕೃಷಿಯನ್ನೇ (Agriculture) ನಂಬಿ ಬದುಕುವವರಿದ್ದಾರೆ, ಕೃಷಿಯಲ್ಲಿ ಹಲವು ವಿಧವಾದ ಬೆಳೆಗಳನ್ನು ನಮ್ಮ ದೇಶದ ಹಲವು ಪ್ರದೇಶಗಳಲ್ಲಿ ಬೆಳೆಯುತ್ತಾರೆ.

ರೈತರಿಗೆ (Farmers) ಕೃಷಿ ವಿಷಯಕ್ಕೆ ಸರ್ಕಾರದಿಂದ ಸಹಾಯವು ಸಿಗುತ್ತದೆ. ಕೃಷಿ ವಿಷಯದಲ್ಲಿ ರೈತರು ಎಷ್ಟು ಮುಖ್ಯವೋ ಅದೇ ರೀತಿ ಕೆಲವು ಯಂತ್ರಗಳು ಕೂಡ ಅಷ್ಟೇ ಮುಖ್ಯ, ಅವುಗಳಲ್ಲಿ ಮುಖ್ಯವಾದ ಯಂತ್ರಗಳಲ್ಲಿ ಒಂದು ಟ್ರಾಕ್ಟರ್ (Tractor Subsidy) ಎಂದು ಹೇಳಬಹುದು. ರೈತರ ಸಾಕಷ್ಟು ಕಷ್ಟಗಳನ್ನು ಕಡಿಮೆ ಮಾಡಲು ಟ್ರಾಕ್ಟರ್ ಸಹಾಯ ಮಾಡುತ್ತದೆ.

ಈ ಟ್ರಾಕ್ಟರ್ ನ ಬೆಲೆ ದುಬಾರಿ ಆಗಿರುವುದರಿಂದ, ಜನರಿಗೆ ಇದನ್ನು ಕೊಂಡುಕೊಳ್ಳುವುದು ಕಷ್ಟ ಆಗಬಹುದು. ಹಾಗಾಗಿ ಜನರು ಟ್ರಾಕ್ಟರ್ ಅನ್ನು ಒಂದೇ ಸಾರಿ ಕೊಂಡುಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಸರ್ಕಾರವು ಕೃಷಿಕರಿಗೆ ಕಡಿಮೆ ಬೆಲೆಯಲ್ಲಿ ಟ್ರಾಕ್ಟರ್ ಖರೀದಿ ಮಾಡುವ ಅವಕಾಶ ನೀಡುತ್ತಿದೆ. ಹಾಗಾಗಿ ನೀವು ರೈತರಾಗಿದ್ದರೆ, ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.

ಟ್ರಾಕ್ಟರ್ ಖರೀದಿಗೆ ಹೊಸ ಸಬ್ಸಿಡಿ ಯೋಜನೆ! ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ - Kannada News

ಇದು ಕೇಂದ್ರ ಸರ್ಕಾರ ತಂದಿರುವ ಹೊಸ ಸಬ್ಸಿಡಿ ಯೋಜನೆ (Subsidy Scheme) ಆಗಿದ್ದು, ರೈತರು ಇದಕ್ಕೆ ಅರ್ಜಿ ಹಾಕಬೇಕು. ಅರ್ಜಿ ಹಾಕಿ ಅಪ್ರೂವ್ ಆದವರಿಗೆ ಸರ್ಕಾರ ಟ್ರಾಕ್ಟರ್ ಖರೀದಿ ಮೇಲೆ ಸಬ್ಸಿಡಿ ನೀಡುತ್ತದೆ.

Tractor Subsidyಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರಿಗೆ ಅರ್ಹತೆ ಇದೆಯೇ ಎಂದು ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆಯಲು ಕೆಲವು ನಿಯಮಗಳನ್ನು ಮತ್ತು ಅರ್ಹತೆಗಳು ಇದ್ದು, ಅದೆಲ್ಲವನ್ನು ಪೂರೈಸಿರುವವರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ.

ಈ ಯೋಜನೆಗೆ ಅಪ್ಲೈ ಆಗುವ ಮುಖ್ಯ ಕಂಡೀಷನ್ ಗಳು ಯಾವುವು ಎಂದರೆ, ರೈತರು ಈ ಹಿಂದೆ ಟ್ರಾಕ್ಟರ್ ಖರೀದಿ ಮಾಡಿರಬಾರದು, ಅಂಥವರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ. ಆ ರೈತ ಭಾರತದ ಸದಸ್ಯರೇ ಆಗಿರಬೇಕು, ಈ ಯೋಜನೆಯ ಮೂಲಕ ಒಂದು ಟ್ರಾಕ್ಟಾರ್ ಮಾತ್ರ ಖರೀದಿ ಮಾಡಬಹುದು. ಈ ಕಂಡೀಷನ್ ಗಳನ್ನು ಪೂರ್ತಿ ಮಾಡಿದರೆ, ಈ ಯೋಜನೆಯ ಸೌಲಭ್ಯ ಸಿಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರಿಗೆ ಬೇಕಾಗುವ ದಾಖಲೆಗಳ ಪಟ್ಟಿ ಹೀಗಿದೆ.. *ಆಧಾರ್ ಕಾರ್ಡ್ ಫೋಟೋಕಾಪಿ *ಬ್ಯಾಂಕ್ ಪಾಸ್ ಬುಕ್ *ನಿಮ್ಮ ಜಮೀನಿನ ದಾಖಲೆ *ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ *ರೈತರ ರಿಜಿಸ್ಟ್ರೇಶನ್ ನಂಬರ್ ಇದಿಷ್ಟು ದಾಖಲೆಗಳು ಬೇಕಾಗುತ್ತದೆ.

ನಮ್ಮ ಸರ್ಕಾರವು ದೇಶದ ರೈತರಿಗೆ ಬೆಂಬಲ ಕೊಡುವ ಸಲುವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ಸಬ್ಸಿಡಿ ಸಾಲ ಕೊಡುವುದು, ಬಡ್ಡಿ ಇಲ್ಲದೆ ಸಾಲ (Loan) ಕೊಡುವುದು, ಹೀಗೆ ಸರ್ಕಾರದಿಂದ ರೈತರಿಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತಿದ್ದು, ಎಲ್ಲಾ ರೈತರು ಅದನ್ನು ಉಪಯೋಗಿಸಿಕೊಳ್ಳಬೇಕು.

New subsidy scheme for farmers for purchase of tractors

Follow us On

FaceBook Google News

New subsidy scheme for farmers for purchase of tractors