ತಂದೆಯನ್ನೇ ಕೊಂದು ತಲೆ ಸಮೇತ ಪೊಲೀಸರಿಗೆ ಶರಣಾದ ಮಗ! ಕಾರಣ ಗೊತ್ತಾ
ಓಡಿಶಾದಲ್ಲಿ ಭೀಕರ ಘಟನೆ, ಕೇವಲ 10 ರೂಪಾಯಿಗಾಗಿ ಕ್ರೂರ ಕೃತ್ಯ! ತಂದೆಯ ತಲೆ ಸಮೇತ ನೇರವಾಗಿ ಪೊಲೀಸರಿಗೆ ಶರಣಾದ ಮಗ
- 10 ರೂಪಾಯಿ ನೀಡದ ಕಾರಣ ಮಗನೇ ತಂದೆಯ ತಲೆ ಕತ್ತರಿಸಿ ಬರ್ಬರ ಹತ್ಯೆ
- ನೇರವಾಗಿ ಪೊಲೀಸರಿಗೆ ಶರಣಾದ ಆರೋಪಿ
- ಗ್ರಾಮದಲ್ಲಿ ಭಯದ ವಾತಾವರಣ
ಓಡಿಶಾದ ಮಯೂರ್‌ಭಂಜ್ (Mayurbhanj) ಜಿಲ್ಲೆಯ ಬರಿಪಾದ (Baripada) ಗ್ರಾಮದಲ್ಲಿ ನಡೆದ ಈ ಭೀಕರ ಘಟನೆಯು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಕೇವಲ ₹10 ರೂಪಾಯಿ ನೀಡಲು ನಿರಾಕರಿಸಿದ ತಂದೆಯನ್ನು ಮಗನೇ ಕ್ರೂರವಾಗಿ ಕೊಂದಿದ್ದಾನೆ. ನಂತರ ತಂದೆಯ ತಲೆಯನ್ನು ಹಿಡಿದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಪೊಲೀಸರು ನೀಡಿದ ಮಾಹಿತಿಯಂತೆ, 40 ವರ್ಷದ ಆರೋಪಿ ಗುತ್ತ್ಕಾ (Gutka) ಹಾಗೂ ತಂಬಾಕು ಸೇವನೆ ಚಟಕ್ಕೆ ಅಂಟಿಕೊಂಡಿದ್ದ. ಈ ಚಟಕ್ಕೆ ಹಣ ಬೇಕಾಗಿ ತಂದೆಯ ಬಳಿ ₹10 ಕೇಳಿದಾಗ, ಅವರು ಕೊಡಲು ನಿರಾಕಸಿದರು.
ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಪಾಪ ಪರಿಹಾರಕ್ಕೆ ಗಂಗೆಯಲ್ಲಿ ಸ್ನಾನ ಮಾಡಿದ್ದ
ಕೋಪಕ್ಕೆ ಒಳಗಾದ ಪುತ್ರ, ಕತ್ತಿಯನ್ನು ತೆಗೆದುಕೊಂಡು ತಂದೆಯನ್ನೇ ಹತ್ಯೆ (Murder) ಮಾಡಿದ್ದಾನೆ. ಸ್ಥಳೀಯರು ಈ ಘಟನೆಯನ್ನು ನೋಡಿ ಬೆಚ್ಚಿಬಿದ್ದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ತಕ್ಷಣ, ಆರೋಪಿ ತಂದೆಯ ತಲೆಯನ್ನು (Severed Head) ಹಿಡಿದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಾನು ಕೊಲೆ ಮಾಡಿದ್ದೇನೆ (Confession) ಎಂದು ಹೇಳಿದ್ದಾನೆ. ಇದರಿಂದ ಅಲ್ಲಿದ್ದ ಪೊಲೀಸರಿಗೂ ಶಾಕ್ ಆಗಿದ್ದು, ಕೂಡಲೇ ದಸ್ತಗಿರಿ ಮಾಡಲಾಗಿದೆ. ಕೂಡಲೇ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಹೆಂಡತಿ ಫೋನ್‌ಗೆ ಬಂದ ಕಿಸ್ ಎಮೋಜಿ, ಇಬ್ಬರನ್ನೂ ಕಡಿದು ಕೊಂದ ಪತಿ
ಇದೀಗ, ಈ ಘಟನೆ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಗ್ರಾಮಸ್ಥರು ಹೇಳುವಂತೆ, ಆರೋಪಿ ಪೋಷಕರಿಗೆ ಹಲವು ವರ್ಷಗಳಿಂದ ತೊಂದರೆ ನೀಡುತ್ತಿದ್ದ. ಆದರೆ, ಹತ್ಯೆ ಮಾಡುವ ಮಟ್ಟಕ್ಕೆ ಹೋಗುತ್ತಾನೆ ಎಂದು ಯಾರೂ ಊಹಿಸಲೂ ಸಾಧ್ಯವಾಗಿರಲಿಲ್ಲ.
Odisha Man Beheads Father, Surrenders
Our Whatsapp Channel is Live Now 👇