ಮಹಾರಾಷ್ಟ್ರದಲ್ಲಿ ಲಕ್ಷ ಲಕ್ಷ ಲವ್ ಜಿಹಾದ್ ಪ್ರಕರಣಗಳು

ಲವ್ ಜಿಹಾದ್: ಮಹಾರಾಷ್ಟ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲವ್ ಜಿಹಾದ್ ಪ್ರಕರಣಗಳಿವೆ ಎಂದು ರಾಜ್ಯ ಸಚಿವರು ಹೇಳಿದರು. ಮಂಗಲ್ ಪ್ರಭಾತ್ ವಿಧಾನಸಭೆಯಲ್ಲಿ ಮಾತನಾಡುತ್ತಾ ಈ ವಿಷಯವನ್ನು ಬಹಿರಂಗಪಡಿಸಿದರು.

Bengaluru, Karnataka, India
Edited By: Satish Raj Goravigere

ಮುಂಬೈ: ಮಹಾರಾಷ್ಟ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲವ್ ಜಿಹಾದ್ ಪ್ರಕರಣಗಳಿವೆ ಎಂದು ಆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಶ್ರದ್ಧಾ ವಾಕರ್‌ನಂತಹ ಪ್ರಕರಣಗಳು ನಡೆಯದಂತೆ ತಡೆಯಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಶ್ರದ್ಧಾ ವಾಕರ್‌ನಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

Over 1 Lakh Love Jihad Cases In Maharashtra Claims Minister Mangal Prabhat

ಅಂತರ್‌ಧರ್ಮೀಯ ವಿವಾಹಗಳ ಕುರಿತು ಸಮಿತಿ ರಚಿಸಲಾಗಿದ್ದು, ಸಮಿತಿಯು ಈ ಸಮಸ್ಯೆಗಳನ್ನು ಪರಿಶೀಲಿಸಲಿದೆ ಎಂದರು. ವಿಧಾನಸಭೆಯಲ್ಲಿ ಮಾಡಿದ ಭಾಷಣದ ವಿಡಿಯೋವನ್ನು ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬಜೆಟ್ ಅಧಿವೇಶನದಲ್ಲಿಯೇ ಹೊಸ ಮಹಿಳಾ ನೀತಿ ಜಾರಿಗೆ ತರಲಾಗುವುದು ಎಂದರು.

Over 1 Lakh Love Jihad Cases In Maharashtra Claims Minister Mangal Prabhat