ಸಂಸತ್ತಿನ ಸಭೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ (government women employee) ನೀಡಬಹುದಾದ ಒಂದು ವಿಶೇಷ ರಜೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಇದೀಗ ಈ ವಿಚಾರದಲ್ಲಿ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಲಭ್ಯವಾಗಿದ್ದು, ವಿಶೇಷ ಋತುಚಕ್ರ ರಜೆಯನ್ನು (special holiday for government employee) ಮಹಿಳೆಯರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ
ಮಹಿಳೆಯರಿಗೆ ಸಂಬಂಧಪಟ್ಟ ಹಾಗೆ ಅದರಲ್ಲೂ ಮಹಿಳಾ ಉದ್ಯೋಗಿಗಳಿಗೆ (female employee) ರಜೆಯ ವಿಚಾರದಲ್ಲಿ ಕೆಲವು ಪ್ರಮುಖ ಬೆನಿಫಿಟ್ ಗಳನ್ನು ನೀಡಲಾಗಿದೆ, ಯಾವುದೇ ವ್ಯಕ್ತಿ ವೈಯಕ್ತಿಕ ಕಾರಣಗಳಿಗೆ ವರ್ಷದಲ್ಲಿ 30 ದಿನಗಳ ಗಳಿಕೆ ರಜೆಯನ್ನು ಪಡೆದುಕೊಳ್ಳಲು ಅವಕಾಶವಿದೆ
ಈ ಹಿನ್ನೆಲೆಯಲ್ಲಿ ಮಹಿಳೆಯರ ತಿಂಗಳ ಪಿರಿಯಡ್ಸ್ (periods time) ಅವಧಿಯನ್ನು ಅನಾರೋಗ್ಯದ ಸಂದರ್ಭ ಎಂದು ಗುರುತಿಸಿ ಅಂತಹ ಸಮಯದಲ್ಲಿ ಮಹಿಳೆಯರಿಗೆ ವಿಶೇಷ ರಜೆ ನೀಡಲು ಚರ್ಚೆ ನಡೆಸಲಾಗಿದೆ.
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ರಜೆ! (Periods leave for female employee)
ಸಾಮಾನ್ಯವಾಗಿ ಮಹಿಳೆಯರು ಪ್ರತಿ ತಿಂಗಳು ಮುಟ್ಟಾದ ಸಮಯದಲ್ಲಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ನೋವನ್ನು ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಕೆಲಸ ಮಾಡುವಷ್ಟು ಚೈತನ್ಯ ಅವರಲ್ಲಿ ಉಳಿದಿರುವುದಿಲ್ಲ ಈ ಹಿನ್ನೆಲೆಯಲ್ಲಿ ಅಂತಹ ಮಹಿಳೆಯರು ಕೆಲಸಕ್ಕೆ ಬರುವುದಕ್ಕಿಂತಲೂ ಮನೆಯಲ್ಲಿ ಅನಾರೋಗ್ಯದ ನಿಮಿತ್ತ ವಿಶ್ರಾಂತಿ ಪಡೆದುಕೊಳ್ಳುವುದು ಅಗತ್ಯ ಎಂಬುದನ್ನು ಸರ್ಕಾರ ಗಮನಿಸಿದೆ.
ಈ ಹಿಂದೆಯೂ ಮುಟ್ಟಿನ ರಜೆ ಕುರಿತು ಸಾಕಷ್ಟು ಚರ್ಚೆಗಳನ್ನು ನಡೆಸಲಾಗಿತ್ತು. ಇದೀಗ ಸಂಪುಟ ಸಭೆಯಲ್ಲಿ ಮುಟ್ಟಿನ ರಜೆ ಕುರಿತಂತೆ ಮಹಿಳೆಯರಿಗೆ ಗುಡ್ ನ್ಯೂಸ್ ಸಿಗಲಿದೆ.
ಮುಟ್ಟಿನ ರಜೆ ವಿತರಣೆ ಹೇಗೆ!
ಮಹಿಳೆಯರು ಋತುಚಕ್ರದ ಕಾರಣದಿಂದಾಗಿ ಅನಾರೋಗ್ಯ (illness) ಅನುಭವಿಸುತ್ತಿದ್ದರೆ ಆ ಸಮಯದಲ್ಲಿ ಕಚೇರಿಗೆ ಬಂದು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ಪ್ರಾಡಕ್ಟಿವಿಟಿ (productivity) ಕೂಡ ಕಡಿಮೆ ಆಗುತ್ತಿದೆ. ವಾರ್ಷಿಕವಾಗಿ ಅಥವಾ ಮಾಸಿಕವಾಗಿ ಮುಟ್ಟಿನ ರಜೆಯನ್ನು, ಆರೋಗ್ಯ ರಜೆ ಅಥವಾ ಅರ್ಧ ಗಳಿಕೆ ರಜೆ ಎಂದು ಘೋಷಣೆ ಮಾಡಬೇಕು ಎಂಬುದಾಗಿ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ.
ರಜೆಯ ನಿಯಮಗಳು ಹೀಗಿವೆ!
ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮಗಳು, 1972 ಅಡಿಯಲ್ಲಿ ಸರ್ಕಾರಿ ನೌಕರಿಯಲ್ಲಿ ಇರುವ ಮಹಿಳೆಯರಿಗೆ ವೇತನ ಸಹಿತ ವಿವಿಧ ರಜೆಗಳನ್ನು ನೀಡುವ ಮೂಲಕ ಮಹಿಳೆಯರ ಕೆಲಸ ಮಾಡುವ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಅದಕ್ಕೆ ಮಹಿಳೆಯರಿಗೆ ಮಾತೃತ್ವ ರಜೆ, ಮಕ್ಕಳ ಆರೈಕೆ ರಜೆ, ಮೊದಲಾದ ವಿಶೇಷ ರಜೆಗಳನ್ನು ನೀಡಲಾಗುವುದು.
ಯಾವುದೇ ಸರ್ಕಾರಿ ನೌಕರ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ವರ್ಷದಲ್ಲಿ 30 ದಿನಗಳ ಅವಧಿಗೆ ಗಳಿಗೆ ರಜೆ ಹಾಗೂ ಎಂಟು ದಿನಗಳ ಅವಧಿಗೆ ಕ್ಯಾಜುವಲ್ ರಜೆಯನ್ನು ಪಡೆಯಬಹುದು.
Periods leave for female employee
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.