ರೈತರೇ, ಪಿಎಂ ಕಿಸಾನ್ ಹೊಸ ಪಟ್ಟಿ ಬಿಡುಗಡೆ; ಈ ಪಟ್ಟಿಯಲ್ಲಿ ಇದ್ದರೆ ಮಾತ್ರ ಸಿಗುತ್ತೆ ಹಣ

PM Kisan: ಪಿಎಂ ಕಿಸಾನ್ ಹೊಸ ಫಲಾನುಭವಿಗಳ ಪಟ್ಟಿಯನ್ನು ರೈತರು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು, ಆದರೆ ಕಂತಿನ ಹಣ ಪಡೆಯಲು ಇಕೆವೈಸಿ ಪೂರ್ಣಗೊಳಿಸಿರುವುದು ಸೇರಿದಂತೆ ಅಗತ್ಯ ನಿಯಮಗಳನ್ನು ಪಾಲಿಸಿರುವುದು ಮುಖ್ಯವಾಗಿದೆ.

PM Kisan New Beneficiary List: ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯುತ್ತಿರುವ ರೈತರಿಗೆ ಹೊಸ ಫಲಾನುಭವಿಗಳ ಪಟ್ಟಿ ಪರಿಶೀಲಿಸುವುದು ಮುಖ್ಯವಾಗಿದೆ. 24ನೇ ಕಂತಿನ ಹಣದ ಕುರಿತು ನಿರೀಕ್ಷೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ನಿಮ್ಮ ಗ್ರಾಮದ ಪರಿಷ್ಕೃತ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಮನೆಯಲ್ಲೇ ಕುಳಿತು ಪರಿಶೀಲಿಸಬಹುದು.

ಪಿಎಂ ಕಿಸಾನ್ ಹೊಸ ಪಟ್ಟಿಯನ್ನು (PM Kisan Beneficiary List) ನೋಡಲು ಮೊದಲು ಅಧಿಕೃತ ವೆಬ್‌ಸೈಟ್ ತೆರೆಯಬೇಕು (https://pmkisan.gov.in/Rpt_BeneficiaryStatus_pub.aspx). ಅಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿದ ಬಳಿಕ ನಿಮ್ಮ ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಬೇಕು. ನಂತರ Get Report ಆಯ್ಕೆ ಮಾಡಿದರೆ ಸಂಬಂಧಪಟ್ಟ ಗ್ರಾಮದ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.

ಪಟ್ಟಿಯಲ್ಲಿ ಹೆಸರುಗಳು ಇಂಗ್ಲಿಷ್ ಅಕ್ಷರಮಾಲೆಯ ಕ್ರಮದಲ್ಲಿ ಕಾಣಿಸಿಕೊಳ್ಳುತ್ತವೆ. ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ ಪುಟಗಳನ್ನು ಪರಿಶೀಲಿಸುವ ಮೂಲಕ ಸುಲಭವಾಗಿ ಹೆಸರು ಹುಡುಕಬಹುದು. ಹಲವು ಪುಟಗಳಿದ್ದರೆ ಕೆಳಭಾಗದಲ್ಲಿರುವ ಮುಂದಿನ ಪುಟದ ಆಯ್ಕೆಯನ್ನು ಬಳಸಿಕೊಂಡು ಪರಿಶೀಲನೆ ಮುಂದುವರಿಸಬಹುದು.

PM Kisan

ಇದನ್ನೂ ಓದಿ: ಪಿಎಂ ಕಿಸಾನ್ 24ನೇ ಕಂತು: ರೈತರು ಈ 3 ಕೆಲಸ ಮಾಡಲೇಬೇಕು! ಕೇಂದ್ರದಿಂದ ಖಡಕ್ ಸೂಚನೆ

ಆದರೆ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಮಾತ್ರ ಕಂತಿನ ಹಣ ಖಚಿತವಾಗಿ ಜಮೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಫಲಾನುಭವಿಗಳು ಅಗತ್ಯವಿರುವ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದೂ ಮುಖ್ಯವಾಗಿದೆ.

ಇನ್ನೂ ಇಕೆವೈಸಿ ಮಾಡಿಸದ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಿಎಸ್‌ಸಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಇಕೆವೈಸಿ ಮಾಡಿಸಿಕೊಳ್ಳಬಹುದು. ಇಕೆವೈಸಿ ಪೂರ್ಣಗೊಳಿಸದಿದ್ದರೆ ಪಟ್ಟಿಯಲ್ಲಿ ಹೆಸರು ಇದ್ದರೂ ಪಿಎಂ ಕಿಸಾನ್ ಹಣದ ಜಮಾ ಪ್ರಕ್ರಿಯೆಗೆ ತಡೆ ಉಂಟಾಗುವ ಸಾಧ್ಯತೆ ಇದೆ.

ಪಿಎಂ ಕಿಸಾನ್ ಯೋಜನೆಯ 24ನೇ ಕಂತು ಅಕ್ಟೋಬರ್‌ನಲ್ಲಿ ಜಮೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಹರಿದಾಡುತ್ತಿದೆ. ಹಿಂದಿನ 23ನೇ ಕಂತು ಜೂನ್‌ನಲ್ಲಿ ಜಮೆಯಾಗಿದ್ದು, ಯೋಜನೆಯಡಿ ಸಾಮಾನ್ಯವಾಗಿ ನಾಲ್ಕು ತಿಂಗಳ ಅಂತರದಲ್ಲಿ ಕಂತು ನೀಡಲಾಗುತ್ತದೆ.

ಇಕೆವೈಸಿ ಬಾಕಿ ಇರುವ ರೈತರ ಪಟ್ಟಿಯನ್ನು ಕೆಲವೆಡೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗುತ್ತಿದೆ. ಆದ್ದರಿಂದ ತಮ್ಮ ಹೆಸರು ಮತ್ತು ಇಕೆವೈಸಿ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳುವುದು ರೈತರಿಗೆ ಉಪಯುಕ್ತವಾಗಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories