India NewsBusiness News

ರೈತರಿಗೆ ಭಾರೀ ಸಿಹಿ ಸುದ್ದಿ, ಕೇಂದ್ರದ ಮೋದಿಜಿ ಸರ್ಕಾರ ಪ್ರಮುಖ ಘೋಷಣೆ

ಪಿಎಂ ಕಿಸಾನ್ ಯೋಜನೆ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ ₹6,000 ನೀಡುವ ಪ್ರಕ್ರಿಯೆ ಸುಗಮಗೊಳ್ಳಲಿದೆ.

  • ಯೋಜನೆಯ ಫಲಾನುಭವಿಗಳಿಗೆ ಪ್ರಮುಖ ಬದಲಾವಣೆ
  • ಅರ್ಹ ರೈತರು PM-Kisan ನಲ್ಲಿ ತಕ್ಷಣ ನೋಂದಾಯಿಸಿಕೊಳ್ಳಬೇಕು
  • ನೋಂದಾಯಿಸಿಕೊಂಡರೆ ಮಾತ್ರ 6,000 ನೇರ ಬ್ಯಾಂಕ್ ಖಾತೆಗೆ ಜಮಾ

ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ! ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆ ಸಂಬಂಧ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಎಲ್ಲ ಅರ್ಹ ರೈತರು ಈ ಯೋಜನೆಯಡಿ ಸೌಲಭ್ಯ ಪಡೆಯುವಂತೆ ನೋಡಿಕೊಳ್ಳಲಾಗುತ್ತಿದೆ.

ಇದರಡಿ, ಇನ್ನೂ ನೋಂದಾಯಿಸಿಕೊಳ್ಳದ ಅರ್ಹ ರೈತರನ್ನು ತಕ್ಷಣ ಯೋಜನೆಗೆ ಸೇರಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯ ಸರ್ಕಾರಗಳಿಗೆ ವಿನಂತಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ರೈತರಿಗಾಗಿ ಈ ಯೋಜನೆಯನ್ನು ಸುಗಮಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ರೈತರಿಗೆ ಭಾರೀ ಸಿಹಿ ಸುದ್ದಿ, ಕೇಂದ್ರದ ಮೋದಿಜಿ ಸರ್ಕಾರ ಪ್ರಮುಖ ಘೋಷಣೆ

ಇದನ್ನೂ ಓದಿ: ನಿಮ್ಮ ಆಧಾರ್‌ಗೆ ಲಿಂಕ್ ಆಗಿರೋ ಮೊಬೈಲ್‌ ನಂಬರ್‌ ಚೆಕ್ ಮಾಡೋ ವಿಧಾನ

₹6,000 ಲಾಭಕ್ಕಾಗಿ ನೋಂದಣಿ ಅವಶ್ಯಕ!

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷದ ₹6,000 ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ (Bank Account) ವರ್ಗಾಯಿಸಲಾಗುತ್ತದೆ. ಈ ಮೊತ್ತವನ್ನು ಮೂರು ಸಮಾನ ಹಂತಗಳಲ್ಲಿ ₹2,000 ಕಂತಿನ ರೂಪದಲ್ಲಿ ಒದಗಿಸಲಾಗುತ್ತದೆ. ನೋಂದಣಿ ಪ್ರಕ್ರಿಯೆಯು PM-Kisan ಪೋರ್ಟಲ್‌ನಲ್ಲಿ ಅನುಮೋದಿತವಾಗಿರಬೇಕು, ಜೊತೆಗೆ eKYC ಮಾಡಿಸಿಕೊಂಡಿರಬೇಕು.

Farmer Scheme

ಯಾರು ಅರ್ಹರು?

ಈ ಯೋಜನೆಯಡಿ ಲಾಭ ಪಡೆಯಲು, ರೈತರು ತಮ್ಮ ಹೆಸರಿನಲ್ಲಿರುವ ಕೃಷಿ ಭೂಮಿಯ ದಾಖಲೆಗಳನ್ನು (Agriculture Land Documents) ಸಲ್ಲಿಸಬೇಕು. PM-Kisan ಪೋರ್ಟಲ್‌ನಲ್ಲಿ ಮಾಹಿತಿ ಪರಿಶೀಲಿಸಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: ದುಬೈಯಿಂದ ನೀವು ನಮ್ಮ ದೇಶಕ್ಕೆ ಎಷ್ಟು ಚಿನ್ನ ತರಬಹುದು ಗೋತ್ತಾ!

ಪಾವತಿ ಪ್ರಕ್ರಿಯೆ ಸುಗಮಗೊಳಿಸಲು ಹೊಸ ಕ್ರಮ!

“ಯಾವುದೇ ಅರ್ಹ ರೈತ ಈ ಯೋಜನೆಯ ಲಾಭದಿಂದ ವಂಚಿತರಾಗಬಾರದು. ನೋಂದಣಿ ಪೂರ್ಣಗೊಂಡ ರೈತರಿಗೆ ಈ ಮೊದಲು ಬಾಕಿಯಿದ್ದ ಮೊತ್ತವನ್ನೂ ಜಮಾ ಮಾಡಲಾಗುತ್ತದೆ,” ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದರು. ತಾವು ಯಾವುದೇ ರಾಜ್ಯಕ್ಕೆ ಕಡೆಗಣನೆ ಮಾಡುವುದಿಲ್ಲ, ರೈತರ ಹಿತಕ್ಕಾಗಿ ಸದಾ ಬದ್ಧರಾಗಿರುವುದಾಗಿ ಅವರು ತಿಳಿಸಿದರು.

Farmer Scheme

ಇದನ್ನೂ ಓದಿ: ಬರೀ 100 ರೂಪಾಯಿ ಕಟ್ಟಿ 2.14 ಲಕ್ಷ ತಗೊಂಡು ಹೋಗಿ! ಬಂಪರ್ ಸ್ಕೀಮ್

ತಕ್ಷಣ ನೋಂದಾಯಿಸಿಕೊಳ್ಳಿ!

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇತ್ತೀಚಿನ ಹಂತದಲ್ಲಿ ಫೆಬ್ರವರಿ 24ರಂದು ₹22,000 ಕೋಟಿ ಹಣವನ್ನು 9.8 ಕೋಟಿ ರೈತರ ಖಾತೆಗೆ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್‌ಫರ್ (DBT) ಮೂಲಕ ಜಮಾ ಮಾಡಲಾಗಿದೆ. ಇದರಲ್ಲಿ 2.41 ಕೋಟಿ ಮಹಿಳಾ ರೈತರು ಸೇರಿದ್ದಾರೆ. ಅರ್ಹ ರೈತರು (Farmers Scheme) ತಕ್ಷಣವೇ ತಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಈ ಸೌಲಭ್ಯ ಪಡೆಯಲು ಮುಂದಾಗಲು ಸೂಚನೆ ನೀಡಲಾಗಿದೆ.

PM-Kisan Scheme Update, Big Benefit for Farmers

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories