ದೇಶದ ಜನತೆಗೆ ಗುಡ್ ನ್ಯೂಸ್ ಕೊಟ್ಟ ಪಿಎಮ್ ಮೋದಿ, ಹೊಸ ಯೋಜನೆ ಆರಂಭ! ಸೆಪ್ಟೆಂಬರ್ 17ರಂದು ಚಾಲನೆ
ಈ ಯೋಜನೆಯ ಹೆಸರು ವಿಶ್ವಕರ್ಮ ಯೋಜನೆ (Vishwakarma Yojane) ಆಗಿದೆ. ನಮ್ಮ ದೇಶದಲ್ಲಿ ಕೆಲಸ ಮಾಡುವ, ದಿನಗೂಲಿ ಕೆಲಸಗಾರರು (Daily Wage Workers) ಮತ್ತು ಹೆಚ್ಚು ಶ್ರಮ ಹಾಕುವ ಹಿಂದುಳಿದ ವರ್ಗದವರಿಗೆ ವಿಶ್ವಕರ್ಮ ಯೋಜನೆಯ ಫಲ ಸಿಗಲಿದೆ
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ನಮ್ಮ ದೇಶದ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದೀಗ ಸಾಮಾನ್ಯ ಜನರಿಗೆ ಅನುಕೂಲ ಆಗುವ ಹಾಗೆ ನರೇಂದ್ರ ಮೋದಿ ಅವರು ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ದೇಶದ ಎಲ್ಲಾ ಜನರಿಗೆ ಈ ಯೋಜನೆಯಿಂದ ಹಣ ಸಿಗುತ್ತದೆ.
ದೆಹಲಿಯ ಕೆಂಪುಕೋಟೆಯಲ್ಲಿ ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ (Indian Independence Day) ಧ್ವಜಾರೋಹಣ ನಡೆದ ಬಳಿಕ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ.
ಈ ಯೋಜನೆಯ ಹೆಸರು ವಿಶ್ವಕರ್ಮ ಯೋಜನೆ (Vishwakarma Yojane) ಆಗಿದೆ. ನಮ್ಮ ದೇಶದಲ್ಲಿ ಕೆಲಸ ಮಾಡುವ, ದಿನಗೂಲಿ ಕೆಲಸಗಾರರು (Daily Wage Workers) ಮತ್ತು ಹೆಚ್ಚು ಶ್ರಮ ಹಾಕುವ ಹಿಂದುಳಿದ ವರ್ಗದವರಿಗೆ ವಿಶ್ವಕರ್ಮ ಯೋಜನೆಯ ಫಲ ಸಿಗಲಿದ್ದು, ಈ ಯೋಜನೆಯನ್ನು ವಿಶ್ವಕರ್ಮ ಪೂಜೆಯ (Vishwakarma Pooja) ದಿನವೇ ಈ ಯೋಜನೆಗೆ ಚಾಲನೆ ಸಿಗುತ್ತದೆ ಎಂದು ತಿಳಿಸಿದ್ದಾರೆ. ಯೋಜನೆಯ ಬಗ್ಗೆ ನರೇಂದ್ರ ಮೋದಿ ಅವರೇ ಮಾಹಿತಿಯನ್ನು ನೀಡಿದ್ದಾರೆ.
ರೆಡ್ ಪೋರ್ಟ್ (Red Fort) ನಲ್ಲಿ ಮಾತನಾಡಿದ ಪಿಎಮ್ ಮೋದಿ (PM Modi) ಅವರು, ಓಬಿಸಿ (OBC) ಕ್ಯಾಟಗರಿಗೆ ಬರುವ ಕಲಾವಿದರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು 14,000 ಕೋಟಿ ಹೂಡಿಕೆ ಮಾಡುವುದಕ್ಕೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇದೀಗ ಕೇಂದ್ರ ಸರ್ಕಾರವು, ಗುಡಿಸಲು, ಬಾಡಿಗೆ ಮನೆ, ಕಾಲೋನಿಯಲ್ಲಿ ವಾಸ ಮಾಡುವ ಜನರಿಗೆ ಕಡಿಮೆ ಬಡ್ಡಿಯ ಸಾಲ ನೀಡಲಿದೆ. ಇಲ್ಲಿ ಕಾರ್ಮಿಕ ವರ್ಗದವರಿಗೆ ಹೆಚ್ಚುವರಿ ಕಂಡೀಷನ್ ಗಳು ಇಲ್ಲದೆ, ಸುಲಭವಾಗಿ ಸಾಲ ಕೊಡಲಾಗುತ್ತಿದೆ..
77ನೇ ಸ್ವಾತಂತ್ರ್ಯ ದಿನಾಚರಣೆಯ ದಿವಸ ಇನ್ನಷ್ಟು ವಿಚಾರ ಮಾತನಾಡಿರುವ ಮೋದಿ ಅವರು, ಮಣಿಪುರಕ್ಕೆ ಸಪೋರ್ಟ್ ಮಾಡಬೇಕು ಎಂದು ಹೇಳಿದ್ದಾರೆ. ರೆಡ್ ಪೋರ್ಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಅದ್ಧೂರಿಯಾಗಿ ಮಾಡಲಾಯಿತು.
ಸರ್ಕಾರವು ಧ್ವಜಕ್ಕೆ ಗೌರವ ಸಲ್ಲಿಸಿತು. ಹಾಗೆಯೇ ಮೋದಿ ಅವರು ಇಷ್ಟು ವರ್ಷಗಳ ಅಧಿಕಾರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡಿದರು.
PM Modi Announced News Scheme in The Name Vishwakarma Yojane
Follow us On
Google News |