ಗೃಹಲಕ್ಷ್ಮಿ ಯೋಜನೆಗಿಂತ ಹೆಚ್ಚು ಬೇಡಿಕೆ ಸೃಷ್ಟಿಸಿರುವ ಹೊಸ ಯೋಜನೆ! ಈ ಯೋಜನೆಗೆ ಭಾರಿ ಡಿಮ್ಯಾಂಡ್

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ ನೀವು ವರ್ಷಕ್ಕೆ ಕೇವಲ ₹436 ರೂಪಾಯಿ ಪಾವತಿ ಮಾಡಿದರೆ ಸಾಕು, 2 ಲಕ್ಷ ರೂಪಾಯಿಯವರೆಗು ಇನ್ಷುರೆನ್ಸ್ ಸೌಲಭ್ಯವನ್ನು ಪಡೆಯಬಹುದು.

ನಮ್ಮ ದೇಶದ ಜನರು ಹಣಕಾಸಿನ ವಿಷಯದಲ್ಲಿ ಸದೃಢರಾಗಿಲ್ಲ, ಹಾಗಾಗಿ ಅವರಿಗೋಸ್ಕರ ಕೇಂದ್ರ ಸರ್ಕಾರವು ಸಾಕಷ್ಟು ಯೋಜನಗೆಳನ್ನ ಜಾರಿಗೆ ತರುತ್ತಿದೆ. ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ, ಆಸ್ಪತ್ರೆಯಲ್ಲಿ ಹಣ ಕಟ್ಟಲು ಲೈಫ್ ಇನ್ಷುರೆನ್ಸ್ (Life Insurance) ಹೊಂದಿರಬೇಕು ಎನ್ನುವುದು ಸರ್ಕಾರದ ಲಕ್ಷ್ಯವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಜನರ ಆರೋಗ್ಯ ದೃಷ್ಟಿಯಿಂದ ಈಗಾಗಲೇ ಹಲವು ಯೋಜನೆಗಳನ್ನು ಲಾಂಚ್ ಮಾಡಲಾಗುತ್ತಿದೆ.

ಅಂಥ ಯೋಜನೆಗಳಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (Pradanmantri Jeevan Jyoti Bima Yojana) ಕೂಡ ಒಂದು ಯೋಜನೆ ಆಗಿದೆ.

ಇದು ಅತಿ ಕಡಿಮೆ ಬೆಲೆಯಲ್ಲಿ ಜೀವವಿಮೆ (Life Insurance) ಹೊಂದಲು ಬಯಸುವವರಿಗೆ ಇರುವಂಥ ಯೋಜನೆ ಆಗಿದೆ. ಈ ಯೋಜನೆಯ ಸೌಲಭ್ಯವನ್ನು ದೇಶದ ಜನರು ಸುಲಭವಾಗಿ ಅಪ್ಲೈ ಮಾಡಿ ಪಡೆಯಬಹುದು.

ಗೃಹಲಕ್ಷ್ಮಿ ಯೋಜನೆಗಿಂತ ಹೆಚ್ಚು ಬೇಡಿಕೆ ಸೃಷ್ಟಿಸಿರುವ ಹೊಸ ಯೋಜನೆ! ಈ ಯೋಜನೆಗೆ ಭಾರಿ ಡಿಮ್ಯಾಂಡ್ - Kannada News

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ ನೀವು ವರ್ಷಕ್ಕೆ ಕೇವಲ ₹436 ರೂಪಾಯಿ ಪಾವತಿ ಮಾಡಿದರೆ ಸಾಕು, 2 ಲಕ್ಷ ರೂಪಾಯಿಯವರೆಗು ಇನ್ಷುರೆನ್ಸ್ ಸೌಲಭ್ಯವನ್ನು ಪಡೆಯಬಹುದು. 2015ರಲ್ಲಿ ಜಾರಿಗೆ ಬಂದ ಈ ಯೋಜನೆಯಲ್ಲಿ ಸಾಕಷ್ಟು ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಈ ಪಾಲಿಸಿಯ ಮೂಲಕ ಆರೋಗ್ಯ ಸೌಲಭ್ಯ ಪಡೆಯಲು ನೀವು ವರ್ಷಕ್ಕೆ ₹436 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. 2022ಕ್ಕಿಂತ ಮೊದಲು ಈ ಯೋಜನೆಯಲ್ಲಿ ಹಣ ಪಾವತಿ ಮಾಡಲು ₹330 ರೂಪಾಯಿ ಮಾತ್ರ ಕಟ್ಟಬೇಕಿತ್ತು.

ಆದರೆ 2022ರ ನಂತರ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು, ಈಗ ವರ್ಷಕ್ಕೆ ₹436 ರೂಪಾಯಿ ಪಾವತಿ ಮಾಡಬೇಕಿದೆ. ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಪಾಲಿಸಿ (Insurance Policy) ಪಡೆಯಬಹುದು, ಅಥವಾ ಮನೆಯಲ್ಲಿ ನೆಟ್ ಬ್ಯಾಂಕಿಂಗ್ (Net Banking)  ಮೂಲಕ ಪಾಲಿಸಿಗೆ ನೀವು ಅಪ್ಲೈ ಮಾಡಬಹುದು.

Pradanmantri Jeevan Jyoti Bima Yojanaಪಿಎಮ್ ಜೀವನ್ ಜ್ಯೋತಿ ಬಿಮಾ ಯೋಜನೆಯನ್ನು 18 ರಿಂದ 50 ವರ್ಷದ ಒಳಗಿನ ಜನರು ಯಾರೇ ಆದರೂ ಪಡೆಯಬಹುದು. ಒಬ್ಬ ವ್ಯಕ್ತಿಗೆ 55 ವರ್ಷ ತುಂಬಿದ ನಂತರ ಈ ಯೋಜನೆಯನ್ನು ರಿನ್ಯು ಮಾಡಿಸಿಕೊಳ್ಳಬಹುದು.

ಶುರುವಿನಿಂದಲು ಹಣ ಕಟ್ಟಿ, ಯಾವುದಾದರೂ ಒಂದು ವರ್ಷದಲ್ಲಿ ನೀವು ಹಣ ಕಟ್ಟಿಲ್ಲ ಎಂದರು ನಿಮಗೆ ಪಾಲಿಸಿಯ ಮೂಲಕ ಹಣ ಕ್ಲೇಮ್ ಮಾಡಲು ಆಗುವುದಿಲ್ಲ. ಹಾಗೆಯೇ ನಿಮ್ಮ ಪಾಲಿಸಿ ಕೂಡ ಕ್ಲೋಸ್ ಆಗುತ್ತದೆ.

ಈ ಪಾಲಿಸಿ ಮೂಲಕ ಎಷ್ಟು ಹಣ ಸಿಗುತ್ತದೆ ಎಂದು ಚೆಕ್ ಮಾಡುವುದದರೆ, ಪಾಲಿಸಿ ಪಡೆದ ವ್ಯಕ್ತಿ ಮರಣ ಹೊಂದಿದರೆ, ಪಾಲಿಸಿಯ ನಾಮಿನಿ 2 ಲಕ್ಷ ವಿಮೆಯನ್ನು ಕ್ಲೇಮ್ ಮಾಡಬಹುದು. ಪಾಲಿಸಿದಾರರು ಇಹಲೋಕ ತ್ಯಜಿಸಿದ ಬಳಿಕ ನಾಮಿನಿಗೆ ಪೂರ್ತಿ ಹಣ ಸಿಗುತ್ತದೆ.

ಪಾಲಿಸಿ ಅವಧಿ ಮುಗಿದ ಮೇಲು ಪಾಲಿಸಿದಾರರು ಬದುಕಿದ್ದರೆ, ಪ್ರಯೋಜನ ಸಿಗುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರ ಮೇ 9ರಂದು ಈ ಪಾಲಿಸಿ ಯೋಜನೆಯನ್ನು ಜಾರಿಗೆ ತಂದರು.

ಭಾರತ ದೇಶದ ಎಲ್ಲಾ ಪ್ರಜೆಗಳು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ನಿಮ್ಮ ಹತ್ತಿರದ ಬ್ಯಾಂಕ್ ಗೆ (Bank Branch) ಹೋಗಿ, ಈ ಪಾಲಿಸಿಯನ್ನು ಪಡೆದುಕೊಳ್ಳಬಹುದು. ಆನ್ಲೈನ್ ಮೂಲಕ ಕೂಡ ಜೀವನ್ ಜ್ಯೋತಿ ಪಾಲಿಸಿ ಪಡೆಯಬಹುದು.

ಈ ಯೋಜನೆ ಪಡೆಯಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಪಾಸ್ ಬುಕ್, ಫೋನ್ ನಂಬರ್ ಈ ಎಲ್ಲಾ ದಾಖಲೆಗಳು ಬೇಕಾಗುತ್ತದೆ.

Pradanmantri Jeevan Jyoti Bima Yojana Benefits Details

Follow us On

FaceBook Google News

Pradanmantri Jeevan Jyoti Bima Yojana Benefits Details