500 ರೂಪಾಯಿ ನೋಟಿನ ಮೇಲೆ ನಕ್ಷತ್ರ ಚಿಹ್ನೆ ಇದ್ರೆ, ಅದು ನಕಲಿನಾ! RBI ಸ್ಪಷ್ಟನೆ
₹500 ನೋಟಿನ ಮೇಲೆ ನಕ್ಷತ್ರ ಗುರುತು ಇದ್ದರೆ, ಅದು ನಕಲಿ ಎಂದು ಭಯಪಡುವ ಅಗತ್ಯವಿಲ್ಲ. RBI ಸ್ಪಷ್ಟೀಕರಣ ನೀಡಿದ್ದು, ಈ ನೋಟಿನ ಕುರಿತು ಜನರಲ್ಲಿ ಹಲವು ಗೊಂದಲಗಳಿದ್ದವು
- 500 ರೂಪಾಯಿ ನೋಟಿನಲ್ಲಿನ ನಕ್ಷತ್ರ ಚಿಹ್ನೆ ವಿಶೇಷವೆನಿಸಬಹುದು
- RBI ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ
- 2006 ರಿಂದ ಈ ಮಾದರಿಯ ನೋಟು ಮುದ್ರಣ ಪ್ರಕ್ರಿಯೆಯಲ್ಲಿದೆ
500 Rupees Note : ಭಾರತದಲ್ಲಿ ₹2,000 ನೋಟಿನ ಬಳಕೆಯು ಕಡಿಮೆಯಾದ ನಂತರ, ₹500 ನೋಟು ಅತಿ ಹೆಚ್ಚಿನ ಮೌಲ್ಯದ ನೋಟಾಗಿ ಉಳಿದಿದೆ. ಈ ನೋಟಿನ ಕುರಿತು ಜನರಲ್ಲಿ ಹಲವು ಅನುಮಾನಗಳಿವೆ, ವಿಶೇಷವಾಗಿ ನಕ್ಷತ್ರ ಗುರುತು (*) ಹೊಂದಿರುವ ನೋಟುಗಳ ಬಗ್ಗೆ ಸಂದೇಹಗಳು ಗೊಂದಲಗಳಿವೆ.
ನಕ್ಷತ್ರ ಗುರುತು ಅರ್ಥವೇನು?
₹500 ನೋಟಿನ ಮೇಲೆ ಕೆಲವೊಮ್ಮೆ ನಕ್ಷತ್ರ ಗುರುತು ಕಾಣಬಹುದು. ಈ ಬಗ್ಗೆ ಹಲವು ಮಂದಿ ಸಂಶಯ ವ್ಯಕ್ತಪಡಿಸುತ್ತಿದ್ದು, ಅದು ನಕಲಿಯೇ ಅಥವಾ ಅಸಲಿಯೇ ಎಂಬ ಗೊಂದಲ ಉಂಟಾಗಿತ್ತು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇದರ ಕುರಿತು ಸ್ಪಷ್ಟನೆ ನೀಡಿದ್ದು, ಈ ಗುರುತು ಹೊಂದಿರುವ ನೋಟುಗಳು ನಕಲಿ ಅಲ್ಲ ಎಂದು ಹೇಳಿದೆ.

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೇಂದ್ರದ ಬಂಪರ್ ಸೌಲಭ್ಯ! ಬಿಗ್ ಅನೌನ್ಸ್‌ಮೆಂಟ್
ಮುದ್ರಣ, 2006 ರಿಂದ ಪ್ರಾರಂಭ
RBI 2006ರಿಂದ ಈ ಪ್ರಕ್ರಿಯೆಯನ್ನು ಅನುಸರಿಸುತ್ತಿದೆ. ಕೆಲವೊಮ್ಮೆ ಮುದ್ರಣದ ಸಮಸ್ಯೆಯಿಂದಾಗಿ ಕೆಲವು ನೋಟುಗಳು ಅಪೂರ್ಣವಾಗುತ್ತವೆ. ಅಂತಹ ಸಂದರ್ಭಗಳಲ್ಲಿ, ಆ ಬ್ಯಾಚ್‌ನಲ್ಲಿ ಕೆಲವನ್ನು ವಿಶೇಷವಾಗಿ ಗುರುತು ಹಾಕಲಾಗುತ್ತದೆ, ಮತ್ತು ಆ ನೋಟುಗಳ ಮೇಲೆ ನಕ್ಷತ್ರ ಗುರುತು ನೀಡಲಾಗುತ್ತದೆ. ಇದು ಮುದ್ರಣ ನಿಯಂತ್ರಣದ ಒಂದು ಭಾಗವಾಗಿದೆ.
ಬಂಪರ್ ಸುದ್ದಿ: ಮಹಿಳೆಯರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಹೀಗೆ ಅರ್ಜಿ ಸಲ್ಲಿಸಿ
ನಗದು ಬಳಕೆದಾರರಿಗೆ RBI ಸೂಚನೆ
RBI ಸ್ಪಷ್ಟಪಡಿಸಿರುವಂತೆ, ಈ ನಕ್ಷತ್ರ ಗುರುತು ನೋಟು ನಕಲಿಯಲ್ಲ, ಆದರೆ ಇದು ಮುದ್ರಣ ಪ್ರಕ್ರಿಯೆಯ ಒಂದು ಭಾಗ. ಈ ಕಾರಣದಿಂದ, ಜನರು ಇದರ ಬಗ್ಗೆ ಅನಗತ್ಯ ಆತಂಕ ಪಡಬೇಕಾಗಿಲ್ಲ. ಇದು ನಕಲಿ ನೋಟು ಎಂದು ತಪ್ಪಾಗಿ ಅರ್ಥೈಸಬಾರದು ಎಂಬ ಸ್ಪಷ್ಟನೆ ನೀಡಿದೆ
RBI Clarifies About 500 Rupees Note Marking
Our Whatsapp Channel is Live Now 👇