ದೇಶದ ಜನರಿಗೆ ಆರ್.ಬಿ.ಐ (RBI) ಆಗಾಗ ಶಾಕ್ ಕೊಡುತ್ತಿರುತ್ತದೆ. ಇತ್ತೀಚಿಗೆ 2000 ರೂಪಾಯಿ ನೋಟ್ ಗಳನ್ನು ಹಿಂಪಡೆಯುವುದಾಗಿ ತೆಗೆದುಕೊಂಡ ನಿರ್ಧಾರ ಕೇಳಿ ಜನರು ಗೊಂದಲಗೊಂಡಿದ್ದರು. ಹಣಕಾಸಿನ ವಿಚಾರದಲ್ಲಿ ಯಾವುದೇ ವಂಚನೆ ನಡೆಯಬಾರದು ಎಂದು ಆಗಾಗ ಈ ಥರದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.
ಈಗ ಆರ್.ಬಿ.ಐ 1000 ರೂಪಾಯಿ ನೋಟ್ ವಿಚಾರಕ್ಕೆ ಇದೇ ರೀತಿಯ ನಿರ್ಧಾರ ಒಂದನ್ನು ತೆಗೆದುಕೊಂಡಿದೆ . ಕೆಲ ವರ್ಷಗಳ ಹಿಂದೆ ಅಂದರೆ 2016ರಲ್ಲಿ ಕೇಂದ್ರ ಸರ್ಕಾರವು 500 ರೂಪಾಯಿ ಮತ್ತು 1000 ರೂಪಾಯಿ ನೋಟ್ ಗಳನ್ನು ಅಮನ್ಯೀಕರಣ (Demonetization) ಮಾಡಿ, ಅವುಗಳನ್ನೆಲ್ಲ ಹಿಂಪಡೆದು, 500 ರೂಪಾಯಿ ಮತ್ತು 2000ರೂಪಾಯಿಯ ಹೊಸ ನೋಟ್ (New Currency Note) ಗಳನ್ನು ಪರಿಚಯಿಸಿತು.
ಇಷ್ಟು ವರ್ಷಗಳು ಈ ನೋಟ್ ಗಳನ್ನು ಬಳಕೆ ಮಾಡಿದ ನಂತರ ಈಗ 2000 ರೂಪಾಯಿ ನೋಟ್ ಗಳನ್ನು ಮತ್ತೆ ಹಿಂಪಡೆಯುವುದಾಗಿ ತಿಳಿಸಿದೆ. ಜನರ ಹತ್ತಿರ ಇರುವ ಎಲ್ಲಾ 2000 ನೋಟ್ ಗಳನ್ನು ಬ್ಯಾಂಕ್ ಗೆ ವಾಪಸ್ ನೀಡಲು ಸೆಪ್ಟೆಂಬರ್ 30 ವರೆಗು ಸಮಯ ನೀಡಲಾಗಿದೆ.. 2000 ರೂಪಾಯಿ ನೋಟ್ ಗಳ ಮುದ್ರಣ (Currency Printing) ಕೂಡ ಈಗಾಗಲೇ ನಿಂತಿದೆ.
2000 ರೂಪಾಯಿಯ ನೋಟ್ ಹಿಂಪಡೆಯುವ ನಿರ್ಧಾರದಿಂದಲೇ ಜನರು ಶಾಕ್ ಆಗಿರುವಾಗ, ಇದೀಗ ಆರ್.ಬಿ.ಐ 500 ಮತ್ತು 1000 ರೂಪಾಯಿ ನೋಟ್ ಗಳ ಬಗ್ಗೆ ಹೊಸ ವಿಚಾರವನ್ನು ತಿಳಿಸಿದೆ. ಗವರ್ನರ್ ಶಶಿಕಾಂತ್ ದಾಸ್ (Shashikant Das) ಅವರು ಈಗಾಗಲೇ 1000 ರೂಪಾಯಿಯ ಹೊಸ ನೋಟ್ ಅನ್ನು ಬಿಡುಗಡೆ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.
ಈಗ ಜನರಲ್ಲಿ ಈ ವಿಚಾರಗಳ ಬಗ್ಗೆ ಕುತೂಹಲ, ಗೊಂದಲ ಮತ್ತು ಪ್ರಶ್ನೆಗಳು ಎಲ್ಲವೂ ಶುರುವಾಗಿದ್ದು, 2000 ರೂಪಾಯಿ ನೋಟ್ ಬ್ಯಾನ್ ಆದರೆ ಮುಂದಿನ ಕಥೆ ಏನು? ಹೊಸದಾಗಿ ಯಾವ ನೋಟ್ ಬಿಡುಗಡೆ ಮಾಡುತ್ತಾರೆ? 1000 ರೂಪಾಯಿಯ ನೋಟ್ ಮತ್ತೆ ಚಾಲ್ತಿಗೆ ಬರುತ್ತಾ? ಈ ಎಲ್ಲಾ ಪ್ರಶ್ನೆಗಳು ಜನರಲ್ಲಿದೆ.
ಒಂದು ವೇಳೆ 2000 ರೂಪಾಯಿಯ ಹಿಂಪಡೆದ ನಂತರ 1000 ರೂಪಾಯಿಯ ನೋಟ್ ಚಾಲ್ತಿಗೆ ಬರದೆ ಹೋದರೆ, 500 ರೂಪಾಯಿಯ ನೋಟ್ ಅತಿಹೆಚ್ಚು ಬೆಲೆಯ ನೋಟ್ ಆಗಿರುತ್ತದೆ. 2000 ರೂಪಾಯಿಯ ನೋಟ್ ಗಳನ್ನು ಹಿಂಪಡೆದ ನಂತರ ಸರ್ಕಾರದ ನಿರ್ಧಾರ ಏನಿರಬಹುದು ಎನ್ನುವ ಬಗ್ಗೆ ಜನರು ಯೋಚಿಸುತ್ತಿದ್ದು, 2000 ರೂಪಾಯಿ ನೋಟ್ ಗಳನ್ನು ಹಿಂಪಡೆದ ನಂತರ..
500 ರೂಪಾಯಿಯ ನೋಟ್ ಗಳನ್ನು ಸಹ ಹಿಂಪಡೆಯಬಹುದು, ಸರ್ಕಾರದ ನಿರ್ಧಾರ ಇದೇ ಆಗಿರಬಹುದು ಎನ್ನುವುದು ಜನರ ಅಭಿಪ್ರಾಯ. ಇನ್ನು ಕೆಲವರು 1000 ರೂಪಾಯಿ ನೋಟ್ ಗಳನ್ನು ಮತ್ತೆ ಚಾಲ್ತಿಗೆ ತರಬಹುದು ಎನ್ನುತ್ತಿದ್ದಾರೆ. ಈ ಎಲ್ಲಾ ಚಿಂತನೆಗಳು ಒಂದು ಕಡೆಯಾದರೆ, ಮತ್ತೊಂದು ಕಡೆ 500 ರೂಪಾಯಿಯ ನೋಟ್ ಗಳನ್ನು ಹಿಂಪಡೆಯುವುದು ಬಹುತೇಕ ಖಚಿತ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ಆದರೆ ಈ ವಿಚಾರದ ಗವರ್ನರ್ ಶಶಿಕಾಂತ್ ದಾಸ್ ಅವರೇ ಮಾತನಾಡಿದ್ದು, “1000 ರೂಪಾಯಿ ಮತ್ತೆ ಚಾಲ್ತಿಗೆ ತರುವ ಬಗ್ಗೆ ಸರ್ಕಾರ ಇನ್ನು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಕರೆನ್ಸಿ ನೋಟ್ ಗಳ ಬಗ್ಗೆ ಮುಂದುವರೆದು ಮಾತನಾಡಿರುವ ಶಶಿಕಾಂತ್ ದಾಸ್ ಅವರು.. “ಈಗ ದೇಶದಲ್ಲಿ ವಿವಿಧ ಮುಖಬೆಲೆಯ (Currency Notes) ಸಾಕಷ್ಟು ನೋಟ್ ಗಳಿವೆ.
ಹಾಗಾಗಿ ಹೊಸ ನೋಟ್ ಗಳನ್ನು ಪರಿಚಯ ಮಾಡುವ ಬಗ್ಗೆ ಸರ್ಕಾರ ಯೋಚನೆ ಮಾಡಿಲ್ಲ. ಈಗ ಹೊಸ ನೋಟ್ ಮಾರುಕಟ್ಟೆಗೆ ಬರುವ ಅವಶ್ಯಕತೆ ಕೂಡ ಇಲ್ಲ.. ಮುಖ್ಯವಾಗಿ ಒಂದು ನೋಟ್ ಹಿಂಪಡೆಯುತ್ತಿದ್ದೇವೆ ಎನ್ನುವುದರ ಅರ್ಥ ಮತ್ತೊಂದು ನೋಟ್ ಪರಿಚಯಿಸುತ್ತೇವೆ ಎಂದು ಅರ್ಥವಲ್ಲ..” ಎಂದು ಎಲ್ಲದಕ್ಕೂ ಸ್ಪಷ್ಟನೆ ನೀಡಲಾಗಿದೆ.
RBI shares new update about 500 1000 rupee note
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.