ಈ ಒಂದು ಕೆಲಸ ಮಾಡದೆ ಇದ್ದರೆ ನಿಮ್ಮ ಗಾಡಿ ಸೀಜ್! RTO ಹೊಸ ನಿಯಮವನ್ನ ತಪ್ಪದೇ ಪಾಲಿಸಿ

RTO ಕಡೆಯಿಂದ ವಾಹನ ಸವಾರರಿಗೆ ಮತ್ತೊಂದು ಹೊಸ ನಿಯಮವನ್ನು  ಜಾರಿಗೆ ತರಲಾಗಿದ್ದು. ಇದನ್ನು ಪ್ರತಿಯೊಬ್ಬ ವಾಹನ ಸವಾರರು ಕೂಡ ತಿಳಿದುಕೊಳ್ಳಬೇಕು.

ರಾಜ್ಯದಲ್ಲಿ ವಾಹನ ಸವಾರರ ಸುರಕ್ಷತೆಗಾಗಿ (Drivers Safety) ಆರ್.ಟಿ.ಓ ಹೊಸ ನಿಯಮಗಳು (RTO New Rules) ಮತ್ತು ಕಾನೂನನ್ನು ಜಾರಿಗೆ ತರುತ್ತಿರುತ್ತದೆ. ಜನರಿಗೆ ಇದು ಕಷ್ಟ ಅನ್ನಿಸಿದರು ಸಹ, RTO ಈ ನಿಯಮಗಳನ್ನು ತರುವುದು ಜನರ ಸುರಕ್ಷತೆಗಾಗಿ ಎನ್ನುವುದುನ್ನು ನಾವು ನೆನಪಿಡಬೇಕು. ಇದೀಗ RTO ಕಡೆಯಿಂದ ವಾಹನ ಸವಾರರಿಗೆ ಮತ್ತೊಂದು ಹೊಸ ನಿಯಮವನ್ನು  ಜಾರಿಗೆ ತರಲಾಗಿದ್ದು.

ಇದನ್ನು ಪ್ರತಿಯೊಬ್ಬ ವಾಹನ ಸವಾರರು ಕೂಡ ತಿಳಿದುಕೊಳ್ಳಬೇಕು. ಸಂಚಾರದ ನಿಯಮದಲ್ಲಿ (Traffic Rules) ಈಗ ಹೊಸದೊಂದು ಬದಲಾವಣೆ ತಂದಿದೆ. ಈ ನಿಯಮದ ಬಗ್ಗೆ ವಾಹನ ಸವಾರರು ಗಮನ ಹರಿಸಬೇಕಾಗುತ್ತದೆ. ಈಗ ತಂದಿರುವ ಹೊಸನಿಯಮಗಳನ್ನು ಪಾಲಿಸದೆ ಹೋದರೆ, ಪೊಲೀಸರು ನಿಮಗೆ ದಂಡ ಹಾಕುವುದು ಮಾತ್ರವಲ್ಲ..

ದಂಡದ ಜೊತೆಗೆ ಶಿಕ್ಷೆಯನ್ನು ಕೂಡ ವಿಧಿಸುತ್ತಾರೆ. ಹಾಗಾಗಿ ಗಮನವಿಟ್ಟು ಈ ಹೊಸ ಆರ್.ಟಿ.ಓ ನಿಯಮವನ್ನು (RTO Rules) ತಿಳಿದುಕೊಳ್ಳಿ. ಇನ್ನುಮುಂದೆ ನೀವು ನಿಮ್ಮ ವಾಹನ ಓಡಿಸಿಕೊಂಡು ಮನೆಯಿಂದ ಹೊರಗೆ ಬರುವುದಕ್ಕಿಂತ ಮೊದಲು ನಿಮ್ಮ ಹತ್ತಿರ ಇರುವ ಎಲ್ಲಾ ಡಾಕ್ಯುಮೆಂಟ್ (Vehicle Document) ಗಳು ಸರಿಯಾಗಿದೆಯಾ ಎನ್ನುವುದನ್ನು ತಪ್ಪದೇ ಚೆಕ್ ಮಾಡಿಕೊಳ್ಳಿ.

ಈ ಒಂದು ಕೆಲಸ ಮಾಡದೆ ಇದ್ದರೆ ನಿಮ್ಮ ಗಾಡಿ ಸೀಜ್! RTO ಹೊಸ ನಿಯಮವನ್ನ ತಪ್ಪದೇ ಪಾಲಿಸಿ - Kannada News

ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿಸ ಹಾಗೆ ಇರುವ ಎಲ್ಲಾ ಡಾಕ್ಯುಮೆಂಟ್ ಗಳು ಸರಿಯಾಗಿದ್ದರೆ ಮಾತ್ರ ಧೈರ್ಯವಾಗಿ ಗಾಡಿ ಓದಿಸಿಕೊಂಡು ಹೊರಬನ್ನಿ, ಒಂದು ವೇಳೆ ನಿಮ್ಮ ಡಾಕ್ಯುಮೆಂಟ್ ಸರಿಇಲ್ಲದೆ ಇದ್ದರು ನೀವು ನಿಮ್ಮ ವಾಹನವನ್ನು ಹೊರತಂದರೆ ಹಿಂದೆ ಮುಂದೆ ನೋಡದೆ ನಿಮ್ಮ ಗಾಡಿಯನ್ನು ಸೀಜ್ (Vehicle Seize) ಮಾಡಲಾಗುತ್ತದೆ.

ರಾಜ್ಯದಲ್ಲಿ ಈಗಷ್ಟೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಜಾರಿಗೆ ಬಂದಿದ್ದು, 5 ಉಚಿತ ಗ್ಯಾರಂಟಿ ಯೋಜನೆಗಳನ್ನು ಜನರಿಗಾಗಿ ತಂದಿದೆ, ಆ ಎಲ್ಲಾ ಯೋಜನೆಗಳನ್ನು ಉಚಿತವಾಗಿ ಜಾರಿಗೆ ತರಲು ಸರ್ಕಾರಕ್ಕೆ ಎಷ್ಟೆಲ್ಲಾ ಹಣ ಖರ್ಚಾಗುತ್ತದೆ ಎಂದು ಈಗ ಜನರಿಗು ಅಂದಾಜು ಬಂದಿದೆ. ಹಾಗಾಗಿ ಈಗ ಸರ್ಕಾರಕ್ಕೆ ಹೆಚ್ಚು ಆದಾಯ ಬೇಕಿರುವುದರಿಂದ ಅದರ ಬಿಸಿ ಜನರ ಮೇಲು ತಟ್ಟುತ್ತಿದ್ದೆ..

ಇದೇ ಕಾರಣಕ್ಕೆ ಟ್ರಾಫಿಕ್ ರೂಲ್ಸ್ ಗಳನ್ನು ಸಹ ಸ್ಟ್ರಿಕ್ ಮಾಡಲಾಗಿದೆ. ಸರ್ಕಾರ ಈಗ ದಯೆ ದಾಕ್ಷಿಣ್ಯ ತೋರದೆ ದಂಡ (Fine) ವಿಧಿಸುವುದಕ್ಕೆ ಮುಂದಾಗಿದೆ. ಹಾಗಾಗಿ ನೀವು ಸರಿಯಾದ ದಾಖಲೆ ಇಲ್ಲದೆ ಗಾಡಿಯ ಜೊತೆಗೆ ಬಂದರೆ, ನಿಮ್ಮ ವಾಹನವನ್ನು ಕೂಡ ಸೀಜ್ ಮಾಡಬಹುದು ಎಚ್ಚರಿಕೆಯಿಂದ ಇರಿ. ನಿಮ್ಮ ಹತ್ತಿರ ಒಂದು ಸಣ್ಣ ಡಾಕ್ಯುಮೆಂಟ್ ಸರಿ ಇಲ್ಲದೆ ಹೋದರು ಸಹ..

ಟ್ರಾಫಿಕ್ ಪೊಲೀಸರು (Traffic Police) ನಿಮ್ಮ ಮೇಲೆ ಸಾವಿರಗಟ್ಟಲೇ ದಂಡ ಹಾಕುವುದ ಗ್ಯಾರಂಟಿ. ಸರ್ಕಾರ ಈಗ ಮೊದಲಿನಂತಿಲ್ಲ, ಈ ಇಲಾಖೆಯಿಂದ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡುತ್ತಿದೆ.. ಇಷ್ಟು ವರ್ಷಗಳ ಕಾಲ ಟ್ರಾಫಿಕ್ ಇಲಾಖೆಯಿಂದ ₹10,500 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಮಾಡಲಾಗುತ್ತಿತ್ತು, ಆದರೆ ಈಗ ದಿಢೀರ್ ಎಂದು ₹1000 ಕೋಟಿ ಹೆಚ್ಚು ನಿರೀಕ್ಷೆ ಮಾಡಲಾಗುತ್ತಿದೆ..

RTO brings Strict New Rules
RTO brings Strict New Rules

ಈ ವರ್ಷ ₹11,500 ಕೋಟಿ ಆದಾಯ ಬರಬೇಕು ಎಂದು ಸರ್ಕಾರ ನಿರೀಕ್ಷೆ ಇಟ್ಟುಕೊಂಡಿದೆ. ಹಾಗಾಗಿ ಒಂದು ಸಣ್ಣ ತಪ್ಪು ಅಥವಾ ಒಂದು ಸಣ್ಣ ಅಜಾಗರೂಕತೆಯಿಂದ ನಿಮ್ಮ ಪರ್ಸ್ ಖಾಲಿ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು.  ಇಷ್ಟು ಆದಾಯ ತರುವ ಜವಾಬ್ದಾರಿ RTO ಇಲಾಖೆ ಮೇಲೆ ಇರುವುದರಿಂದ ಅಧಿಕಾರಿಗಳು (RTO Officers) ಬಹಳ ಸ್ಟ್ರಿಕ್ಟ್ ಆಗಿ ಕೆಲಸ ಮಾಡಲಿದ್ದಾರೆ.

RTO ಅಧಿಕಾರಿಗಳ ಮೇಲು ವಿಪರೀತ ಒತ್ತಡ ಶುರುವಾಗಿದೆ. ಆದಾಯ ತರಲು ದೊಡ್ಡ ಪ್ಲಾನ್ ಗಳನ್ನೇ ಹಾಕಿಕೊಳ್ಳಲಾಗಿದ್ದು, ಈ ವರ್ಷ 4.35ಲಕ್ಷ ವಾಹನಗಳನ್ನು ಚೆಕ್ ಮಾಡುವ ಪ್ಲಾನ್ ಮಾಡಿಕೊಳ್ಳಲಾಗಿದೆ. ಇಷ್ಟು ದಿವಸ ಪ್ರತಿವರ್ಷ 2.50 ಲಕ್ಷ ವಾಹನಗಳನ್ನು ಚೆಕ್ ಮಾಡಲಾಗುತ್ತಿದೆ. ಇಷ್ಟು ಕಟ್ಟುನಿಟ್ಟು ಇಲಾಖೆಯಲ್ಲಿ ಇರುವಾಗ, ನೀವು ಕೂಡ ಅಷ್ಟೇ ಹುಷಾರಾಗಿ ಇರುವುದು ಒಳ್ಳೆಯದು.

RTO brings Strict New Traffic Rules

Follow us On

FaceBook Google News

RTO brings Strict New Traffic Rules