ದೆಹಲಿಯಲ್ಲಿ ಹಿಟ್ ಅಂಡ್ ರನ್, ಆಘಾತಕಾರಿ ವಿಡಿಯೋ ತುಣುಕು

ದೆಹಲಿಯಲ್ಲಿ ಹಿಟ್ ಅಂಡ್ ರನ್ ನ ಆಘಾತಕಾರಿ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ನವದೆಹಲಿ: ದೆಹಲಿಯಲ್ಲಿ ಹಿಟ್ ಅಂಡ್ ರನ್ ನ ಆಘಾತಕಾರಿ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಗರದ ರಸ್ತೆಯೊಂದರಲ್ಲಿ ಬೈಕ್ ಸವಾರರ ಗುಂಪು ಹಾಗೂ ಸ್ಕಾರ್ಪಿಯೋ ವಾಹನ ಚಾಲಕನ ನಡುವೆ ವಾಗ್ವಾದ ನಡೆದಿದೆ.

ಒಂದು ಹಂತದಲ್ಲಿ ಸ್ಕಾರ್ಪಿಯೋ ಚಾಲಕ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ನಂತರ ಸ್ಕಾರ್ಪಿಯೋ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದಾನೆ. ಮತ್ತೊಬ್ಬ ಬೈಕ್ ಸವಾರ ಹೆಡ್ಜರ್ ಕ್ಯಾಮರಾದಲ್ಲಿ ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾನೆ.

ದೆಹಲಿಯ ಅರ್ಜಾಂಘಿರ್ ಮೆಟ್ರೋ ನಿಲ್ದಾಣದ ಅಡಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು 20 ವರ್ಷದ ಶ್ರೇಯಾಂಶ್ ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಬೈಕ್ ಟ್ರಿಪ್ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Kannada News

Scorpio Driver Hits Biker In Delhi After Argument And Speeds Away Watch Video

Follow us On

FaceBook Google News