ಹರಿಯಾಣ ರಸ್ತೆ ಅಪಘಾತ, ಹಬ್ಬದ ದಿನವೇ ಭಾರೀ ದುರಂತ; ಕಾರು ಕಾಲುವೆಗೆ ಉರುಳಿ 7 ಮಂದಿ ಸಾವು

Story Highlights

ಕೈತಾಲ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ. ಈ ಘಟನೆಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಜಯದಶಮಿ ದಿನದಂದು ಹರಿಯಾಣ ರಾಜ್ಯದಲ್ಲಿ (Haryana) ದುರಂತವೊಂದು ನಡೆದಿದೆ. ಕೈತಾಲ್ ಜಿಲ್ಲೆಯಲ್ಲಿ (Kaithal) ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಕಾರೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ. ಈ ಘಟನೆಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಜಿಲ್ಲೆಯ ಮುಂಡ್ರೈ ಗ್ರಾಮದ ಬಳಿ ಶನಿವಾರ ಈ ಘಟನೆ ನಡೆದಿದೆ. ದಸರಾ ನಿಮಿತ್ತ ಆಯೋಜಿಸಿದ್ದ ಬಾಬಾ ರಾಜಪುರಿ ಮೇಳದಲ್ಲಿ ಪಾಲ್ಗೊಳ್ಳಲು ದೀಗ್ ಗ್ರಾಮದ ಕೆಲವರು ಕಾರಿನಲ್ಲಿ ತೆರಳಿದ್ದರು.

ಗುಜರಾತ್‌ನಲ್ಲಿ ಭಾರೀ ಅವಘಡ, ಗೋಡೆ ಕುಸಿದು 9 ಕಾರ್ಮಿಕರು ಸಾವು; ಪ್ರಧಾನಿ ಮೋದಿ ಸಂತಾಪ

ವಾಪಸು ಬರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಅಪಘಾತದ ಸಮಯದಲ್ಲಿ ಒಂದೇ ಕುಟುಂಬದ ಎಂಟು ಸದಸ್ಯರು ಸೇರಿದಂತೆ ಒಟ್ಟು ಒಂಬತ್ತು ಜನರು ಕಾರಿನಲ್ಲಿದ್ದರು.

ಅಪಘಾತದ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇಲ್ಲಿಯವರೆಗೆ, ಏಳು ಮೃತ ದೇಹಗಳನ್ನು ಕಾಲುವೆಯಿಂದ ಹೊರತೆಗೆಯಲಾಗಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ. 12 ವರ್ಷದ ಬಾಲಕಿಗಾಗಿ ಹುಡುಕಾಟ ನಡೆಯುತ್ತಿದೆ.

Seven Of Family Killed After Car Falls Into Canal Near Mundri Village in the state of Haryana

Related Stories