ಸ್ಮೃತಿ ಇರಾನಿ ಅವರನ್ನು ವಜಾಗೊಳಿಸಬೇಕು

ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೊರಳಿಗೆ ಕುಣಿಕೆ ಬಿಗಿಯಾಗುತ್ತಿದೆ. ಆಕೆಯ ಪುತ್ರಿ ಜೋಶ್ ಇರಾನಿ ಗೋವಾದಲ್ಲಿ ಅಕ್ರಮ ರೆಸ್ಟೋರೆಂಟ್..

ನವದೆಹಲಿ/ಪಣಜಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೊರಳಿಗೆ ಕುಣಿಕೆ ಬಿಗಿಯಾಗುತ್ತಿದೆ. ಆಕೆಯ ಪುತ್ರಿ ಜೋಶ್ ಇರಾನಿ ಗೋವಾದಲ್ಲಿ ಅಕ್ರಮ ರೆಸ್ಟೋರೆಂಟ್ ನಡೆಸುತ್ತಿದ್ದು, ಅದರ ಬಾರ್ ಲೈಸೆನ್ಸ್ ನಕಲಿ ಎಂದು ಕಾಂಗ್ರೆಸ್ ಆರೋಪಿಸಿದೆ.

ಸ್ಮೃತಿ ಇರಾನಿ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಅವರನ್ನು ಕೂಡಲೇ ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಸ್ಮೃತಿ ಇರಾನಿ ಅವರನ್ನು ವಜಾಗೊಳಿಸಬೇಕು

2021ರ ಮೇ ತಿಂಗಳಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ 2022ರ ಜೂನ್‌ನಲ್ಲಿ ಪರವಾನಗಿ ಪಡೆದಿರುವ ಬಗ್ಗೆ ಪ್ರಶ್ನಿಸಲಾಗಿದ್ದು, ಇದು ಅಕ್ರಮವಲ್ಲದಿದ್ದರೆ ಮತ್ತೇನು? ಎಂಬ ಪ್ರಶ್ನೆ ಎದ್ದಿದೆ.

ಆದರೆ ಇದೆಲ್ಲವನ್ನೂ ತಳ್ಳಿ ಹಾಕಿರುವ ಅವರು, ಇವೆಲ್ಲ ಆಧಾರ ರಹಿತ ಆರೋಪಗಳು. ರಾಹುಲ್ ಗಾಂಧಿ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವುದರಿಂದ ಮಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ, ತಪ್ಪು ಮಾಡಿರುವ ಬಗ್ಗೆ ಸಾಕ್ಷ್ಯವಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

smriti iranis daughter running illegal bar in goa