ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ! ಮನಸ್ಸಿಗೆ ಘಾಸಿಗೊಳಿಸುವ ಸುದ್ದಿ

ಮಗನೇ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹೃದಯವಿದ್ರಾವಕ ಘಟನೆ ನಡೆದಿದೆ. ಮಹಿಳಾ ದಿನದಂದೇ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಮದ್ಯ ವ್ಯಸನಿ ಮಗನಿಂದ ಹ್ಯೇಯ ಕೃತ್ಯ
  • ತಾಯಿಗೆ ನಿರಂತರ ಕಿರುಕುಳ ನೀಡಿದ್ದ ಮಗ
  • ತಾಯಿಯ ದೂರಿನ ನಂತರ ಆರೋಪಿಯ ಬಂಧನ

ಈ ಘಟನೆ ಸಮಾಜಕ್ಕೆ ನಾಚಿಕೆ ತರಿಸುವಂಥದ್ದಾಗಿದೆ. ಮಾದಕ ವ್ಯಸನಿ ಮಗ ತನ್ನ ತಾಯಿಯ ಮೇಲೆಯೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಡೆದಿರುವುದು ಇನ್ನಷ್ಟು ದುರಂತ!

ಹೈದರಾಬಾದ್‌ನ ಮಾದನ್ನಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಆರೋಪಿಯು ಆಲ್ಕೋಹೋಲ್ (Alcohol) ಸೇವಿಸಿ ಬೀದಿಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ, ಕುಡಿಯುವುದು ಅಡ್ಡಾಡುವುದೇ ಅವನ ಕಾಯಕ.

ಇದನ್ನೂ ಓದಿ: ಕಾಣೆಯಾಗಿದ್ದ 15 ವರ್ಷದ ಬಾಲಕಿ ನೆರೆಮನೆಯ ವ್ಯಕ್ತಿಯೊಂದಿಗೆ ಶವವಾಗಿ ಪತ್ತೆ

ಈ ಮಧ್ಯೆ ಅವನು ತನ್ನ ತಾಯಿಯನ್ನೇ ಲೈಂಗಿಕ ತೃಷೆಗೆ ಬಳಸಿಕೊಳ್ಳಲು ಹೊಂಚು ಹಾಕಿದ್ದ, ಅಂತೆಯೇ ಒತ್ತಾಯಪೂರ್ವಕವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಶನಿವಾರ (Saturday) ರಾತ್ರಿ ಒಂದು ಗಂಟೆ ಸುಮಾರಿಗೆ ತಾಯಿ ಮತ್ತೊಮ್ಮೆ ಈ ಹೀನ ಕೃತ್ಯಕ್ಕೆ ಬಲಿಯಾದರು. ಆತಂಕಗೊಂಡ ತಾಯಿ ಕೊನೆಗೂ ಧೈರ್ಯ ತಾಳಿ ಪೊಲೀಸರ ಬಳಿ ದೂರು ನೀಡಿದರು.

ಇದನ್ನೂ ಓದಿ: ಬೈಕ್‌ನಲ್ಲಿ ಹೋಗುತ್ತಿದ್ದ ಪತ್ರಕರ್ತನ ಗುಂಡಿಕ್ಕಿ ಹತ್ಯೆ! ಭೀಕರ ಘಟನೆ

ಪೊಲೀಸರು ಶೀಘ್ರವಾಗಿ ಕೇಸು ದಾಖಲಿಸಿ, ಆರೋಪಿಯನ್ನು ಬಂಧಿಸಿ ರಿಮಾಂಡ್‌ಗೆ ಕಳಿಸಿದ್ದಾರೆ. ಈ ಘಟನೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ತಾಯಿ, ಹೆಣ್ಣುಮಕ್ಕಳ ಸುರಕ್ಷತೆಗಾಗಿ ಕಾನೂನು ವ್ಯವಸ್ಥೆ ಇನ್ನಷ್ಟು ಬಲಪಡಿಸಬೇಕಾಗಿದೆ.

Son Inhuman Act Against Mother

English Summary▼

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories