ಆಂಧ್ರಪ್ರದೇಶ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ

Stone Pelting Vande Bharat Train: ಎಪಿಯಲ್ಲಿ ಆವೃತ್ತಿ-2 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ. ವಿಶಾಖಪಟ್ಟಣಂನ ಕಂಚರಪಾಲೆಂನ ರಾಮಮೂರ್ತಿದಂಪತುಲ್‌ಪೇಟೆಯಲ್ಲಿ ನಿಂತಿದ್ದ ರೈಲಿನ ಮೇಲೆ ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ.

Stone Pelting Vande Bharat Train: ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ, ಎಪಿಯಲ್ಲಿ ಆವೃತ್ತಿ-2 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ. ವಿಶಾಖಪಟ್ಟಣಂನ ಕಂಚರಪಾಲೆಂನ ರಾಮಮೂರ್ತಿದಂಪತುಲ್‌ಪೇಟೆಯಲ್ಲಿ ನಿಂತಿದ್ದ ರೈಲಿನ ಮೇಲೆ ಪುಂಡ ಪೋಕರಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಎಕ್ಸ್‌ಪ್ರೆಸ್ ಕೋಚ್ ವಿಂಡ್‌ಶೀಲ್ಡ್ ಹಾನಿಯಾಗಿದೆ. ಎರಡು ಕೋಚ್‌ಗಳ ಕನ್ನಡಿಗಳಿಗೆ ಹಾನಿಯಾಗಿದೆ.

ಇದನ್ನು ಗಮನಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ರೈಲಿಗೆ ಕಲ್ಲು ತೂರಾಟ ನಡೆಸಿದ ಪುಂಡರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಕಲ್ಲು ತೂರಾಟವನ್ನು ವಾಲ್ತೇರ್ ವಿಭಾಗದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

News Live Today ಇಂದಿನ ಕನ್ನಡ ಸುದ್ದಿ ನವೀಕರಣಗಳು, ಲೈವ್ ನ್ಯೂಸ್ ಪ್ರಸಾರ 12 January 2023

ಪ್ರಾಯೋಗಿಕ ಸಂಚಾರದ ಭಾಗವಾಗಿ ವಂದೇ ಭಾರತ್ ರೈಲು ವಿಶಾಖಪಟ್ಟಣಂ ತಲುಪಿದೆ. ರೈಲು ಚೆನ್ನೈನಿಂದ ವಿಶಾಖಪಟ್ಟಣಂಗೆ ಬಂದಿತ್ತು. ಈ ತಿಂಗಳ 19 ರಂದು ಪ್ರಧಾನಿ ಮೋದಿ ಅವರು ಆವೃತ್ತಿ-2 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಸಿಕಂದರಾಬಾದ್-ವಿಶಾಖ ನಡುವೆ ಸಂಚರಿಸಲಿದೆ.

Stone Pelting On Version 2 Vande Bharat Express Train In Visakhapatnam Ap