ಯುವತಿಯ ತಾಯಿ ಬರುವುದನ್ನು ಕಂಡು ಟೆರೇಸ್ ಮೇಲಿಂದ ಜಿಗಿದ ಪ್ರೇಮಿ ಸಾವು
Law Student Jumps Off Lovers Terrace: ಶನಿವಾರ ಮಧ್ಯರಾತ್ರಿ ಸಂಜಯ್ ತನ್ನ ಗೆಳತಿಯ ಮನೆಗೆ ಹೋಗಿದ್ದ. ಇಬ್ಬರೂ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದರು. ಅಷ್ಟರಲ್ಲಿ ಯುವತಿಯ ತಾಯಿ ಅಲ್ಲಿಗೆ ಬರುವುದನ್ನು ಸಂಜಯ್ ನೋಡಿದ್ದಾನೆ.
Law Student Jumps Off Lovers Terrace: ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಟೆರೇಸ್ ಮೇಲೆ ಮಾತನಾಡುತ್ತಿದ್ದಾಗ ಆಕೆಯ ತಾಯಿ ಬರುತ್ತಿರುವುದನ್ನು ಗಮನಿಸಿ ಆಕೆಯ ಕಣ್ಣಿಗೆ ಬೀಳಬಾರದೆಂದು ಕೆಳಗೆ ಹಾರಿದ್ದಾನೆ. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾನೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಧರ್ಮಪುರಿಯ ಕಾಮರಾಜ್ ನಗರದ 18 ವರ್ಷದ ಸಂಜಯ್ ಸೇಲಂನ ಸೆಂಟ್ರಲ್ ಲಾ ಕಾಲೇಜಿನಲ್ಲಿ ಪ್ರಥಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿ. ಶಾಲೆಯಿಂದ ಪರಿಚಿತ ಯುವತಿಯೂ ಅದೇ ಕಾಲೇಜಿನಲ್ಲಿ ಕಾನೂನು ಓದುತ್ತಿದ್ದಾಳೆ. ಸಹಪಾಠಿಗಳಾಗಿರುವ ಇಬ್ಬರೂ ಪ್ರೀತಿಸುತ್ತಿದ್ದರು. ಯುವತಿಯ ಮನೆಯವರು ಬಾಡಿಗೆಗೆ ಪಡೆದಿದ್ದ ಮನೆಯ ಸಮೀಪವೇ ಬ್ಯಾಚುಲರ್‌ಗಳಿರುವ ಕೊಠಡಿಯಲ್ಲಿ ಆತ ತಂಗಿದ್ದ.
ಇದನ್ನೂ ಓದಿ : ಏರೋ ಇಂಡಿಯಾ 2023
ಈ ನಡುವೆ ಶನಿವಾರ ಮಧ್ಯರಾತ್ರಿ ಸಂಜಯ್ ತನ್ನ ಗೆಳತಿಯ ಮನೆಗೆ ಹೋಗಿದ್ದ. ಇಬ್ಬರೂ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದರು. ಅಷ್ಟರಲ್ಲಿ ಯುವತಿಯ ತಾಯಿ ಅಲ್ಲಿಗೆ ಬರುವುದನ್ನು ಸಂಜಯ್ ನೋಡಿದ್ದಾನೆ. ತಕ್ಷಣ ಟೆರೇಸ್ ಮೇಲಿಂದ ಕೆಳಗೆ ಜಿಗಿದಿದ್ದಾನೆ. ಈ ವೇಳೆ ಆತನ ತಲೆ ನೆಲಕ್ಕೆ ಅಪ್ಪಳಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Tamil Nadu Law Student Jumps Off Lovers Terrace Dies On Spot
Follow us On
Google News |
Advertisement