ಶಾಲೆಯಲ್ಲಿ ಶಿಕ್ಷಕನ ಅಸಭ್ಯ ವರ್ತನೆ, ವಿದ್ಯಾರ್ಥಿನಿಗೆ ಲವ್ ಪ್ರಪೋಸ್! ಆಮೇಲೆ ಆಗಿದ್ದೇನು?
12ನೇ ತರಗತಿಯ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ಲವ್ ಪ್ರಪೋಸ್ ಮಾಡಿದ್ದಾನೆ, ಈ ಬಗ್ಗೆ ಗ್ರಾಮದವರ ಆಕ್ರೋಶ ವ್ಯಕ್ತವಾಗಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ
- 12ನೇ ತರಗತಿಯ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಇಟ್ಟ ಶಿಕ್ಷಕ
- ಘಟನೆ ಬಳಿಕ ಗ್ರಾಮಸ್ಥರಿಂದ ತೀವ್ರ ಆಕ್ರೋಶ
- ವಿದ್ಯಾರ್ಥಿನಿ ದೂರು ನೀಡಿದರೂ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳು
ಬಿಹಾರದ ಕಿಸಾನ್‌ಗಂಜ್ ಜಿಲ್ಲೆಯಲ್ಲಿರುವ ಕಿಸಾನ್ ಹೈಸ್ಕೂಲ್‌ನಲ್ಲಿ ಓದುತ್ತಿರುವ 12ನೇ ತರಗತಿಯ ವಿದ್ಯಾರ್ಥಿನಿಗೆ, ಅಲ್ಲಿಯೇ ಶಿಕ್ಷಕಕನಾಗಿದ್ದ ವಿಕಾಸ್ ಕುಮಾರ್ ಲವ್ ಪ್ರಪೋಸ್ ಮಾಡಿದ್ದಾನೆ, ಈ ವಿಚಾರ ಸ್ಥಳೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿದ್ಯಾರ್ಥಿನಿಯ ಪ್ರಕಾರ, ವಿಕಾಸ್ ಕುಮಾರ್ ಅನೇಕ ಬಾರಿ ಕರೆ ಮಾಡಿ, ತನ್ನೊಂದಿಗೆ ಸಂಬಂಧ ಹೊಂದಲು ಒತ್ತಾಯಿಸಿದ್ದನು. ಈ ಬಗ್ಗೆ ಆಕೆ ತಾನು ಕಲಿಯುತ್ತಿರುವ ಶಾಲೆಯ ಕೆಲವು ಶಿಕ್ಷಕರಿಗೆ ತಿಳಿಸಿ, ನಂತರ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದಳು. ಆದರೆ ಈ ದೂರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಿವಿಗೆ ಬೀಳದಂತಾಗಿದೆ.
ತಾಯಿ ಕಣ್ಣಿಗೆ ಖಾರದ ಪುಡಿ ಎರಚಿ ಬಾಲಕನ ಅಪಹರಣ! ಸುಳಿವು ಕೊಟ್ರೆ ₹30,000 ಬಹುಮಾನ
ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಗುರುವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪೊಲೀಸರ ಬರುವಿಕೆಯೊಂದಿಗೆ ಪರಿಸ್ಥಿತಿ ಹತೋಟಿಗೆ ಬಂದಿದೆ. ವಿದ್ಯಾಥಿನಿಯ ದೂರಿನ ನಂತರವೂ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಆ ಗ್ರಾಮದ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಈ ಬಗ್ಗೆ ಪ್ರತಿಕ್ರಿಯಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ವಿಕಾಸ್ ಕುಮಾರ್ ಈ ಹಿಂದೆ ಕೂಡಾ ತನ್ನ ಸಹಪಾಠಿ ಶಿಕ್ಷಕಿಯೊಬ್ಬಳಿಗೆ ಪ್ರೇಮ ಪ್ರಸ್ತಾಪ ಇಟ್ಟು, ನಂತರ ಅವಳನ್ನು ಮದುವೆಯಾಗಿದ್ದಾನೆ ಎಂಬ ಮಾಹಿತಿ ಸ್ಥಳೀಯರಿಂದ ಬಹಿರಂಗವಾಗಿದೆ.
Teacher proposes student, villagers protest
Our Whatsapp Channel is Live Now 👇