ವಾಷಿಂಗ್ ಮೆಷಿನ್ ಆನ್ ಮಾಡಲು ಹೋದ 16 ವರ್ಷದ ಯುವತಿ ಸಾವು
ಹೈದರಾಬಾದ್‌ನ ಬಾಲಾಪುರದಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ವಾಷಿಂಗ್ ಮೆಷಿನ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶದಿಂದ 16 ವರ್ಷದ ಯುವತಿ ಮೃತಪಟ್ಟಿದ್ದಾಳೆ.
- ವಾಷಿಂಗ್ ಮೆಷಿನ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶದಿಂದ ಸಾವು
- ವಿದ್ಯುತ್ ಸ್ಪರ್ಶದಿಂದ 16 ವರ್ಷದ ಯುವತಿ ದುರ್ಮರಣ
- ಪೊಲೀಸರಿಂದ ಪ್ರಕರಣ ದಾಖಲು, ಹೈದರಾಬಾದ್‌ನಲ್ಲಿ ಘಟನೆ
ಬಟ್ಟೆ ತೊಳೆಯಲು ವಾಷಿಂಗ್ ಮೆಷಿನ್ ಆನ್ ಮಾಡಲು ಹೋದ ಯುವತಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನೆರೆ ರಾಜ್ಯ ಹೈದರಾಬಾದ್‌ನಲ್ಲಿ ನಡೆದಿದೆ, ಹೌದು, ವಿದ್ಯುತ್ ಸ್ಪರ್ಶಿಸಿ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ದುರಂತ ಘಟನೆ ಅಲ್ಲಿನ ಬಾಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಹಿ ನಗರದ ಫಾತಿಮಾ (16) ಮಂಗಳವಾರ ಮಧ್ಯಾಹ್ನ ವಾಷಿಂಗ್ ಮೆಷಿನ್ ಆನ್ ಮಾಡಲು ಹೋಗಿದ್ದ ಯುವತಿ. ಮೊದಲು ಆಕೆ ಅದಕ್ಕೆ ನೀರು ತುಂಬಿಸಿದ್ದಾಳೆ, ಬಳಿಕ ವಾಷಿಂಗ್ ಮೆಷಿನ್ ಆನ್ ಮಾಡಲು ಸ್ವಿಚ್‌ಬೋರ್ಡ್ ಬಳಿಗೆ ಹೋಗಿ ಆನ್ ಕೂಡ ಮಾಡಿದ್ದಾಳೆ.

2 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಮಹಿಳೆ ಚಿನ್ನಾಭರಣಗಳೊಂದಿಗೆ ನಾಪತ್ತೆ
ಆದರೆ, ಜೋತು ಬಿದ್ದಿದ್ದ ವಿದ್ಯುತ್ ತಂತಿಗಳು ಆಕೆಯ ಗಮನಕ್ಕೆ ಬಂದಿರಲಿಲ್ಲ. ಅಲ್ಲಿನ ನೀರಿನ ಮೇಲೆ ವಿದ್ಯುತ್ ತಂತಿಗಳು ತಾಗಿದಾಗ ಆಕೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾಳೆ. ಇದರಿಂದ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ವಿಷಯ ತಿಳಿದ ಕುಟುಂಬ ಸದಸ್ಯರು ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.
ಅನಾಥಾಶ್ರಮದಲ್ಲಿ ಅಗ್ನಿ ಅವಘಡ, ಬೆಂಕಿಯಲ್ಲಿ ಸಿಲುಕಿದ ಆರು ಮಕ್ಕಳು
ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Teen Girl Dies of Electrocution While Using Washing Machine