Kannada News > India News > ಇದಪ್ಪಾ ಘೋಷಣೆ ಅಂದ್ರೆ; ಮಹಿಳೆಯರಿಗೆ ₹2500 ಹಣ, ಜೊತೆಗೆ ₹500 ರೂ.ಗೆ ಗ್ಯಾಸ್ ಸಿಲಿಂಡರ್

ಇದಪ್ಪಾ ಘೋಷಣೆ ಅಂದ್ರೆ; ಮಹಿಳೆಯರಿಗೆ ₹2500 ಹಣ, ಜೊತೆಗೆ ₹500 ರೂ.ಗೆ ಗ್ಯಾಸ್ ಸಿಲಿಂಡರ್

Story Highlights

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಫಲಾನುಭವಿ ಗೃಹಿಣಿಯರ ಖಾತೆಗೆ (Bank Account) ಪ್ರತಿ ತಿಂಗಳು 2000 ವರ್ಗಾವಣೆ ಮಾಡಲಾಗುತ್ತಿದೆ, ಈಗ ಇದೆ ಟ್ರಿಕ್ಸ್ ಅನ್ನು ಬೇರೆ ರಾಜ್ಯಗಳು ಬಳಸುತ್ತಿವೆ

ಚುನಾವಣೆಗೂ (election) ಮೊದಲು ಅಧಿಕಾರಕ್ಕಾಗಿ ಯಾವುದೇ ಪಕ್ಷ ಘೋಷಣೆ ಮಾಡುವ ಭರವಸೆಗಳು ಎಷ್ಟು ಮುಖ್ಯವಾಗುತ್ತವೆ ಎನ್ನುವುದು ಎಲ್ಲರಿಗೂ ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ಗೊತ್ತಾಗಿದೆ.

ಈ ಬಾರಿ ಕಾಂಗ್ರೆಸ್ (Congress) ಬೇರೆ ಯಾವುದೇ ಟ್ರಿಕ್ಸ್ ಮಾಡಿದ್ದರು ಇಷ್ಟು ಸುಲಭವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿರಲಿಲ್ಲ, ಆದರೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಪರಿಣಾಮ ಸುಲಭವಾಗಿ ಕರ್ನಾಟಕ ರಾಜ್ಯ ಸರ್ಕಾರವಾಗಿ ಕಾಂಗ್ರೆಸ್ ಪಕ್ಷ ಅಧಿಕಾರ ಸ್ಥಾಪಿಸಲು ಸಾಧ್ಯವಾಯಿತು.

ಕೇವಲ ಪ್ರಣಾಳಿಕೆಯಲ್ಲಿಯೇ ಭರವಸೆಗಳು ಉಳಿಯದೆ ಅದನ್ನ ಜಾರಿಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇತರ ರಾಜ್ಯಗಳು ಕೂಡ ಕಾಂಗ್ರೆಸ್ ಸರಕಾರದ ಈ ಟ್ರಿಕ್ಸ್ (election tricks) ಬಳಸಲು ಮುಂದಾಗಿವೆ.

ನವೆಂಬರ್ 17ರಿಂದ ವಿಧಾನಸಭಾ ಚುನಾವಣೆ (vidhansabha election) ಮೀಜೋರಾಂ, ತೆಲಂಗಾಣ ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ನಡೆಯಲಿದೆ ಈ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯವು ಕೂಡ ಹೊಸ ಹೊಸ ಭರವಸೆಗಳನ್ನು ಘೋಷಣೆ ಮಾಡುತ್ತಿದೆ.

ಗೃಹಲಕ್ಷ್ಮಿ ಜೊತೆಗೆ ಮಹಾಲಕ್ಷ್ಮಿಯು ಬರುತ್ತಿದ್ದಾಳೆ!

electionರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಫಲಾನುಭವಿ ಗೃಹಿಣಿಯರ ಖಾತೆಗೆ (Bank Account) ಪ್ರತಿ ತಿಂಗಳು 2000 ವರ್ಗಾವಣೆ ಮಾಡುವುದು. ಯೋಜನೆಯ ಅಡಿಯಲ್ಲಿ ಈಗಾಗಲೇ ಮೊದಲ ಕಂತಿನ ಹಣವನ್ನ ಫಲಾನುಭವಿ ಗೃಹಿಣಿಯರ ಖಾತೆಗೆ ಜಮಾ ಮಾಡಲಾಗಿದೆ.

ಈಗ ತೆಲಂಗಾಣದಲ್ಲಿ (Telangana) ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಒಂದು ಉಪಾಯವನ್ನು ಎರವಲು ಪಡೆದಿದೆ ಎನ್ನಬಹುದು.

ಹೌದು, ಸರ್ಕಾರ ತಾನು ಮತ್ತೆ ಅಧಿಕಾರಕ್ಕೆ ಬರಲು ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದು ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಫಲಾನುಭವಿ ಮಹಿಳೆಯರಿಗೆ ಎರಡುವರೆ ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಉಚಿತವಾಗಿ ನೀಡಲು ಪ್ಲಾನ್ ಮಾಡಿದೆ.

500 ರೂಪಾಯಿಗೆ ಗ್ಯಾಸ್ ಸಿಲೆಂಡರ್ (gas cylinder)

ಈಗಾಗಲೇ ಹಣದುಬ್ಬರದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಬಗ್ಗೆ ಕೇಂದ್ರ ಸರ್ಕಾರ ಕೂಡ ಚಿಂತನೆ ನಡೆಸಿತ್ತು, ಅದೇ ರೀತಿ 200 ರೂಪಾಯಿಗಳನ್ನು ಪ್ರತಿ ಗ್ಯಾಸ್ ಸಿಲೆಂಡರ್ ಮೇಲೆ ಇಳಿಕೆ ಮಾಡಲಾಗಿತ್ತು.

ಆದರೆ ಈಗ ತೆಲಂಗಾಣ ಇದಕ್ಕಿಂತ ಹೆಚ್ಚಿನ ಆಫರ್ ಘೋಷಣೆ ಮಾಡಿದೆ, ತಾವು ಅಧಿಕಾರಕ್ಕೆ ಬಂದರೆ ಸಿಲಿಂಡರ್ ಬೆಲೆ ಕೇವಲ 500 ಆಗಲಿದೆ ಎಂದು ಹೇಳಿದೆ. ಒಂದು ವೇಳೆ ತೆಲಂಗಾಣ ಕೆಸಿ ಆರ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಈ ಘೋಷಣೆ ಜಾರಿಗೆ ಬಂದು ಹಲವು ಜನರಿಗೆ ಸಹಾಯಕವಾಗಲಿದೆ.

ಮದುವೆ ಸಂದರ್ಭದಲ್ಲಿ ಒಂದು ಲಕ್ಷ ಹಣ 10ಗ್ರಾಂ ಚಿನ್ನ! Gold

ಇನ್ನು ಕೆಸಿಆರ್ ಪಕ್ಷ (KCR party) ಅಧಿಕಾರಕ್ಕೆ ಬರಲು ಇನ್ನೂ ಹಲವು ವಿಚಾರಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಿದೆ, ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹೆಣ್ಣು ಮಗಳು ಮದುವೆಯ ವಯಸ್ಸಿಗೆ ಬಂದಾಗ ಆಕೆಗೆ ಒಂದು ಲಕ್ಷ ರೂಪಾಯಿ ಹಾಗೂ 10 ಗ್ರಾಂ ಚಿನ್ನವನ್ನು (Gold) ನೀಡುವುದಾಗಿಯೂ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಇದಕ್ಕಾಗಿ ಸರ್ಕಾರ 250 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಚುನಾವಣೆ ಪ್ರಣಾಳಿಕೆಯನ್ನು ಹೊರಡಿಸುವ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪ್ರಮುಖ ಐದು ರಾಜ್ಯಗಳು ಸಿದ್ಧತೆ ನಡೆಸಿಕೊಂಡಿವೆ. ಇದೀಗ ಕರ್ನಾಟಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮಾಡಿರುವ ಟ್ರಿಕ್ಸ್ ಇತರ ರಾಜ್ಯಗಳಲ್ಲಿ ವರ್ಕ್ ಆಗುತ್ತಾ ಕಾದು ನೋಡಬೇಕು!

Telangana Govt Announce 2500 cash for women, plus a gas cylinder for Rs 500

Related Stories