ಬೆಳ್ಳಂಬೆಳಿಗ್ಗೆ ರೈತರಿಗಾಗಿ ಹೊಸ ಸಬ್ಸಿಡಿ ಯೋಜನೆ ಘೋಷಿಸಿದ ಸರ್ಕಾರ! ಕೂಡಲೇ ಅರ್ಜಿ ಸಲ್ಲಿಸಿ

Story Highlights

ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ರೈತರ (farmer) ಬೆಳೆ ನಾಶವನ್ನು ಗಮನಿಸಿ ರೈತರಿಗೆ ಅನುಕೂಲವಾಗುವಂತಹ ಉತ್ತಮ ಯೋಜನೆ ಒಂದನ್ನು ಜಾರಿಗೆ ತಂದಿದೆ. ಇದಕ್ಕೆ 90% ವರೆಗೆ ಸಬ್ಸಿಡಿ (subsidy) ಪಡೆದುಕೊಳ್ಳಬಹುದು.

ಕೇಂದ್ರ ಸರ್ಕಾರವಿರಲಿ (central government) ಅಥವಾ ರಾಜ್ಯ ಸರ್ಕಾರವಿರಲಿ (State government) ಪ್ರತಿವರ್ಷ ತಾವು ಮಂಡಿಸುವ ಬಜೆಟ್ (budget) ನಲ್ಲಿ ಪ್ರಮುಖ ಸ್ಥಾನವನ್ನು ರೈತರಿಗೆ ಮೀಸಲಿಡುತ್ತಾರೆ.

ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದು ಹಾಗೂ ಈ ಯೋಜನೆಗಳ ಅನುಷ್ಠಾನಕ್ಕೆ ಕೋಟ್ಯಂತರ ರೂಪಾಯಿಗಳನ್ನು ಮೀಸಲಿಡುವುದು ಸಾಮಾನ್ಯ.

ಹೀಗೇ ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ರೈತರ (farmer) ಬೆಳೆ ನಾಶವನ್ನು ಗಮನಿಸಿ ರೈತರಿಗೆ ಅನುಕೂಲವಾಗುವಂತಹ ಉತ್ತಮ ಯೋಜನೆ ಒಂದನ್ನು ಜಾರಿಗೆ ತಂದಿದೆ. ಇದಕ್ಕೆ 90% ವರೆಗೆ ಸಬ್ಸಿಡಿ (subsidy) ಪಡೆದುಕೊಳ್ಳಬಹುದು.

ಕೃಷಿ ಸಿಂಚಾಯಿ ಯೋಜನಾ! (Pradhanmantri krishi sinchai Yojana)

ರೈತರು ತಮ್ಮ ಜಮೀನಿನಲ್ಲಿ ಉತ್ತಮವಾದ ಫಸಲು ಪಡೆದುಕೊಳ್ಳಬೇಕು ಅಂದ್ರೆ ಆ ಕೃಷಿ ಜಮೀನಿಗೆ (agriculture land) ನೀರು ಒದಗಿಸುವುದು ಬಹಳ ಮುಖ್ಯ. ಈ ವರ್ಷ ಮಳೆಯ ಅಭಾವದಿಂದಾಗಿ ಸಾಕಷ್ಟು ಪ್ರದೇಶಗಳಲ್ಲಿ ಬೆಳೆ ಬೆಳೆಯಲು ಅಗತ್ಯವಿರುವ ನೀರನ್ನು ಒದಗಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ರೈತ ಸಿಂಚಾಯಿ ಯೋಜನೆ ನಿಟ್ಟಿನಲ್ಲಿ ರೈತರಿಗೆ ಹೆಚ್ಚಿನ ಪ್ರಯೋಜನ ನೀಡಬಹುದು.

ಏನಿದು ಕೃಷಿ ಸಿಂಚಾಯಿ ಯೋಜನೆ!

Pradhanmantri krishi sinchai Yojanaಅಡಿಕೆ ಕೃಷಿ ಹೊರತುಪಡಿಸಿ ಇತರ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತಹ ಯೋಜನೆ ಇದು. ರೈತರ ಬೆಳಗೆ ಅಗತ್ಯವಿರುವ ಹನಿ ನೀರಾವರಿ ಮಾಡಲು ಬೇಕಾಗಿರುವ ಉಪಕರಣಗಳನ್ನು ಒದಗಿಸುವ ಯೋಜನೆ ಕೃಷಿ ಸಿಂಚಾಯಿ ಯೋಜನೆಯಾಗಿದೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು 2018 16ರ ಸಾಲಿನಲ್ಲಿ ಜಾರಿಗೆ ತರಲಾಗಿದ್ದು ಆ ಸಮಯದಲ್ಲಿ ಯೋಜನೆಗೆ 533 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಈಗ “ಹರ್ ಖೆತ್ ಕೊ ಪಾನಿ” ಎನ್ನುವ ಟ್ಯಾಗ್ ಲೈನ್ ಅಡಿಯಲ್ಲಿ ಕೃಷಿ ಸಿಂಚಾಯಿ ಯೋಜನೆಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ರೈತರಿಗೆ ಸಿಗುವಂತೆ ಇಂದಿನ ಕೇಂದ್ರ ಸರ್ಕಾರ ಮಾಡಿದೆ.

ಯಾರಿಗೆ ಸಿಗಲಿದೆ ಪ್ರಯೋಜನ?

2023 24ನೇ ಸಾಲಿನ ಕೃಷಿ ಸಿಂಚಾಯಿ ಯೋಜನೆಗೆ ಅರ್ಜಿಯನ್ನು ಸರ್ಕಾರ ಆಹ್ವಾನಿಸಿದೆ. ಯೋಜನೆ ಅಡಿಯಲ್ಲಿ ಕನಿಷ್ಠ ಎರಡು ಹೆಕ್ಟೇರ್ ಜಮೀನಿಗೆ ಹನಿ ನೀರಾವರಿ ಒದಗಿಸಲು ಸಾಮಾನ್ಯ ಕೃಷಿಕರಿಗೆ 75% ನಷ್ಟು ಸರ್ಕಾರ ಸಬ್ಸಿಡಿ ನೀಡುತ್ತದೆ.

ಅದೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ (SC/ST) ಎರಡು ಹೆಕ್ಟೇರ್ ಜಮೀನಿಗೆ 90% ವರೆಗೆ ಸಬ್ಸಿಡಿ ಪಡೆಯಬಹುದು. ಇನ್ನು ದೇಶದ ಎಲ್ಲಾ ವರ್ಗದ ರೈತರಿಗೆ ಕನಿಷ್ಠ ಎರಡು ಹೆಕ್ಟೇರ್ ನಿಂದ ಗರಿಷ್ಠ ಐದು ಹೆಕ್ಟೇರ್ ವರೆಗೆ 40% ಸಬ್ಸಿಡಿ ನೀಡಲಾಗುವುದು.

ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಒದಗಿಸಲು ಬೇಕಾಗಿರುವ ಉಪಕರಣವನ್ನು ನೀಡುವಂತಹ ಯೋಜನೆ ಇದಾಗಿದ್ದು ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಯೋಜನೆಯ ಪ್ರಯೋಜನ ಪಡೆಯುವುದಾದರೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಹತ್ತಿರದ ತೋಟಗಾರಿಕಾ ಇಲಾಖೆ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

The government has announced a new subsidy scheme for farmers