ತಾಯಿ ಮಗನ ನಡುವೆ ಆಸ್ತಿ ಹಂಚಿಕೆ ಬಗ್ಗೆ ಕೋರ್ಟ್ ಹೊಸ ತೀರ್ಪು, ನಿಯಮ ಬದಲಾವಣೆ

ತಾಯಿ ಮಗನ ನಡುವೆ ಆಸ್ತಿ ಹಂಚಿಕೆ ಬಗ್ಗೆ ಇದೀಗ ಕೋರ್ಟ್ ದೊಡ್ಡ ಆದೇಶ (Court Order)ನೀಡಿದೆ. ವಿಧವೆ ತಾಯಿಗೆ ಮಗನ ಆಸ್ತಿಯ ಮೇಲಿನ ಹಕ್ಕಿನ ಬಗ್ಗೆ ಹೊಸ ನಿಯಮ ಜಾರಿ ಮಾಡಿದೆ

ನಮ್ಮ ಭಾರತ ದೇಶದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಗೊಂದಲಗಳು ಜನರ ನಡುವೆ ಇರುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವುದು ಆಸ್ತಿಯ ಹಂಚಿಕೆ ಕೂಡ ಒಂದಾಗಿದೆ. ಇನ್ನು ಈ ವಿಭಾಗದ ನಿಯಮಗಳ ಬಗ್ಗೆ ಸಾಕಷ್ಟು ಜನರಿಗೆ ಪರಿಚಯ ಕೂಡ ಇರುವುದಿಲ್ಲ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ಇದೇ ರೀತಿಯ ವಿಚಾರವನ್ನು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಇರಲು ವಿಶೇಷವಾಗಿ ವಿಧವೆ ತಾಯಿಗೆ ಮೃತ ಮಗನ ಆಸ್ತಿಯಲ್ಲಿ ಆಸ್ತಿ ಸಿಗುವ ಬಗ್ಗೆ ಹೇಳಲು ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಹಿಂದೂ ಉತ್ತರಾಧಿಕಾರತ್ವ ಕಾಯ್ದೆ(The Hindu Succession Act)  ಈ ಬಗ್ಗೆ ಏನು ಹೇಳುತ್ತೆ
ಹೈಕೋರ್ಟ್ ಇತ್ತೀಚಿಗಷ್ಟೇ ವಿಧವೆ ತಾಯಿಯರಿಗೆ ನೀಡಿರುವಂತಹ ತೀರ್ಪು ಐತಿಹಾಸಿಕ(Court Order)  ತೀರ್ಪುಗಳ ಪಟ್ಟಿಯಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಯಾವುದೇ ಅನುಮಾನವಿಲ್ಲ. ಪ್ರೀತಿ ಅಮೃತ ಆಗಿರುವಂತಹ ಮಗನ ಆಸ್ತಿಯಲ್ಲಿ ಆತನ ಹೆಂಡತಿ ಹಾಗೂ ಮಕ್ಕಳಿಗೆ ಸಮಾನವಾದ ಪಾಲು ಹೋಗುತ್ತದೆಯೋ ಅದೇ ರೀತಿ ಆತನ ವಿಧವೆ ತಾಯಿಯೂ ಕೂಡ ಸಮಾನವಾದ ಆಸ್ತಿಯ ಪಾಲಿನ ಹಂಚಿಕೆಯನ್ನು ಮಾಡಬೇಕು ಎಂಬುದಾಗಿ ಹೈಕೋರ್ಟ್(High Court) ತೀರ್ಮಾನ ನೀಡಿದೆ. ಇತ್ತೀಚಿಗಷ್ಟೇ ಕಂಡುಬಂದಿರುವಂತಹ ಪ್ರಕರಣ ಒಂದರಲ್ಲಿ ಹೈಕೋರ್ಟ್ ಈ ರೀತಿಯ ನಿಯಮಗಳನ್ನು ಜಾರಿಗೆ ತಂದಿದೆ.

ಈ ನಿಯಮದ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
ಉತ್ತರ ಕರ್ನಾಟಕದಲ್ಲಿರುವಂತಹ ವಿಧವೆ ತಾಯಿಗೆ ಆಸ್ತಿಯನ್ನು ನೀಡಬಾರದು ಎನ್ನುವಂತಹ ಆಚರಣೆ ಅಥವಾ ಕ್ರಮಗಳನ್ನು ಹೈಕೋರ್ಟ್ ಗಾಳಿಗೆ ತೂರಿದೆ ಎಂದು ಹೇಳಬಹುದು. ಇನ್ಮುಂದೆ ಮಕ್ಕಳು ಹಾಗು ಹೆಂಡತಿಗೆ ಸಿಗುವ ರೀತಿಯಲ್ಲಿ ಮೃತ ಮಗನ ಆಸ್ತಿಯಲ್ಲಿ ಸಮಾನವಾದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ತಾಯಿ ಮಗನ ನಡುವೆ ಆಸ್ತಿ ಹಂಚಿಕೆ ಬಗ್ಗೆ ಕೋರ್ಟ್ ಹೊಸ ತೀರ್ಪು, ನಿಯಮ ಬದಲಾವಣೆ - Kannada News

ಈ ತೀರ್ಪು ಬರಲು ಕಾರಣ ಆಗಿರುವಂತಹ ಪ್ರಕರಣದಲ್ಲಿ ನೋಡುವುದಾದರೆ ಇಲ್ಲಿ ಆಸ್ತಿಯನ್ನು ಐದು ಪಾಲು  ಮಾಡಲಾಗಿದ್ದು ಅದರಲ್ಲಿ ಬರುವಂತಹ ಒಂದು ಪಾಲು ಅಂದರೆ ಮರಣ ಹೊಂದಿರುವಂತಹ ಗಂಡನ ಪಾಲನ್ನು ಆ ತಾಯಿ ಅಂದರೆ ಅವರ ಹೆಂಡತಿ ಇಟ್ಟುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಕ್ಕಳು ತಮಗೆ ಬಂದಿರುವ ಹಾಗೂ ತಮ್ಮ ತಂದೆಯಿಂದ ಬಂದಿರುವಂತಹ ಆಸ್ತಿಯ ಪಾಲನ್ನು ಸೇರಿಸಿ 6/25 ಪಾಲನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಇದರಲ್ಲಿ ಮರಣ ಹೊಂದಿರುವಂತಹ ಮಗನ ಆಸ್ತಿಯ ವಿವರವನ್ನು ನೋಡುವುದಾದರೆ ಆತನಿಗೆ ಸಿಕ್ಕಿರುವ ಅಂತಹ ಆಸ್ತಿಯಲ್ಲಿ ಕೂಡ ಆತನ ಹೆಂಡತಿ ಮತ್ತು ಮಗಳಿಗೆ ನೀಡಿ ಉಳಿದ ಸಮಾನ ಪ್ರಮಾಣವನ್ನು ತಾಯಿಗೂ ಕೂಡ ನೀಡಬೇಕಾಗುತ್ತದೆ.

ತಾಯಿ ಮಗನ ನಡುವೆ ಆಸ್ತಿ ಹಂಚಿಕೆ ಬಗ್ಗೆ ಕೋರ್ಟ್ ಹೊಸ ತೀರ್ಪು, ನಿಯಮ ಬದಲಾವಣೆ - Kannada News
Image source: Zee News

ಭಾರತೀಯ ಕಾನೂನು ಏನು ಹೇಳುತ್ತೆ
ಭಾರತದ ಕಾನೂನು(Indian Law)  ಹೇಳುವ ಪ್ರಕಾರ ಯಾವುದೇ ರೀತಿಯ ಸಂದರ್ಭದಲ್ಲಿ ಕೂಡ ಒಬ್ಬ ಮಗ ಮರಣ ಹೊಂದಿದ್ರೆ ಮೊದಲ ಹಕ್ಕುದಾರರಾಗಿ ಆತನ ತಾಯಿ ಆತನ ಹೆಂಡತಿ ಮತ್ತು ಮಕ್ಕಳು ಬರುತ್ತಾರೆ ಹಾಗೂ ಆಸ್ತಿಯನ್ನು ಸಮಾನವಾಗಿ ಎಲ್ಲರಿಗೂ ಕೂಡ ಹಂಚಬೇಕಾಗಿರುತ್ತದೆ.

Court’s new ruling on property division between mother and son, rule change

Follow us On

FaceBook Google News

Court's new ruling on property division between mother and son, rule change