ಸರ್ಕಾರದ 5 ಬಂಪರ್ ಯೋಜನೆಗಳು! ಸ್ವಂತ ಮನೆ, 5,000 ಪಿಂಚಣಿ ಎಲ್ಲವೂ ಉಚಿತ

ಕೇಂದ್ರ ಸರ್ಕಾರದ 5 ಉಚಿತ ಯೋಜನೆಗಳು! ಆರೋಗ್ಯ ಯೋಜನೆಯಿಂದ ಸ್ವಂತ ಮನೆವರೆಗೆ ಕೇಂದ್ರದ ಈ 5 ಯೋಜನೆಗಳು ಜನಸಾಮಾನ್ಯರ ಜೀವನದ ಭರವಸೆಯಾಗಿದೆ.

  • ಆರೋಗ್ಯ, ಪಿಂಚಣಿ, ಮನೆ ಸೇರಿದಂತೆ ಸರ್ಕಾರದ ಉಚಿತ ಯೋಜನೆಗಳು
  • ಕಡಿಮೆ ಆದಾಯದವರು ಈ ಯೋಜನೆಗಳೊಂದಿಗೆ ಭವಿಷ್ಯವನ್ನು ಸುರಕ್ಷಿತವಾಗಿಸಬಹುದು
  • ಆನ್‌ಲೈನ್ ಅಥವಾ CSC ಮೂಲಕ ಅರ್ಜಿ ಸಲ್ಲಿಸಿ ಯೋಜನೆಗಳ ಲಾಭ ಪಡೆಯಿರಿ

ಕಡಿಮೆ ಆದಾಯದವರು (low income people) ಆರೋಗ್ಯ ಸೇವೆ, ವಸತಿ, ಹಾಗೂ ವೃದ್ಧಾಪ್ಯದಲ್ಲಿ ಪಿಂಚಣಿ ಪಡೆಯುವುದು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವೇ ಕೇಂದ್ರ ಸರ್ಕಾರದ ಈ ಶ್ರೇಷ್ಠ ಯೋಜನೆಗಳು. ಎಲ್ಲಾ ಪೌರರು ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂಬುದೇ ಸರ್ಕಾರದ ಉದ್ದೇಶ.

ಆಯುಷ್ಮಾನ್ ಭಾರತ್ (Ayushman Bharat – PMJAY) ಎಂಬ ಯೋಜನೆಯು ವರ್ಷಕ್ಕೆ 5 ಲಕ್ಷ ರೂಪಾಯಿ ವರೆಗೆ ಆರೋಗ್ಯ ವಿಮೆ ನೀಡುತ್ತದೆ. ಇದು ಗಂಭೀರ ಕಾಯಿಲೆಗಳಿಗೂ ಚಿಕಿತ್ಸೆ ನೀಡುತ್ತದೆ. ಗಂಡು, ಮಹಿಳೆ, ಮಕ್ಕಳಿಗೂ ಪ್ರಯೋಜನವಾಗುವ ಈ ಯೋಜನೆಗೆ ಆಧಾರ್ ಮತ್ತು ರೇಷನ್ ಕಾರ್ಡ್ ಬೇಕಾಗುತ್ತದೆ. ಸಮೀಪದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ pmjay.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಆನ್‌ಲೈನ್‌ನಲ್ಲೇ ವೋಟರ್ ಐಡಿ ಕಾರ್ಡ್ ಡೌನ್‌ಲೋಡ್ ಹೇಗೆ? ಇಲ್ಲಿದೆ ಸಂಪೂರ್ಣ ವಿಧಾನ

ಪ್ರಧಾನಮಂತ್ರಿ ಶ್ರಮ ಯೋಗಿ ಮಂದ್ಹನ್ ಯೋಜನೆ (PM-SYM) ಪ್ರತಿದಿನ ಕೂಲಿ ಕೆಲಸ ಮಾಡುವವರು, ಬೀದಿ ವ್ಯಾಪಾರಿಗಳು, ಆಟೋ ಚಾಲಕರು ಮೊದಲಾದವರಿಗೆ ತಿಂಗಳಿಗೆ 3,000 ರೂ.ಗಳ ಪಿಂಚಣಿ ಸಿಗುತ್ತದೆ. 18 ರಿಂದ 40 ವರ್ಷದೊಳಗಿನವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಬ್ಯಾಂಕ್ ಖಾತೆ, ಆಧಾರ್ ಹೊಂದಿದವರೇ ಇದರಲ್ಲಿ ಸೇರಬಹುದು. ವಯಸ್ಸು ಪ್ರಕಾರ ಪ್ರತಿ ತಿಂಗಳು 55 ರಿಂದ 200 ರೂ.ವರೆಗೆ ಹೂಡಿಕೆ ಮಾಡಬೇಕಾಗುತ್ತದೆ.

ಇದನ್ನೂ ಓದಿ: ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಬೇರೆಯವರು ಸಾಲ ಪಡೆದಿರಬಹುದು! ಚೆಕ್ ಮಾಡಿ

Pension

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS) ಮೂಲಕ 60 ವರ್ಷ ದಾಟಿದ ಬಡವರು ಸರ್ಕಾರದ [Indian Government] ಸಹಾಯದಿಂದ ತಿಂಗಳಿಗೆ ಕನಿಷ್ಟ ₹200-₹500 ಪಿಂಚಣಿ ಪಡೆಯುತ್ತಾರೆ.

ರಾಜ್ಯ ಸರ್ಕಾರ ಈ ಮೊತ್ತವನ್ನು ಹೆಚ್ಚಿಸಬಹುದು. ಗ್ರಾಮ ಪಂಚಾಯತ್ ಅಥವಾ ಮ್ಯುನಿಸಿಪಲ್ ಕಚೇರಿಯಲ್ಲಿ ಈ ಪಿಂಚಣಿಗೆ ಅರ್ಜಿ ಹಾಕಬಹುದು. ಈ ಯೋಜನೆ ಸಂಪೂರ್ಣ ಉಚಿತವಾಗಿದೆ.

ಇದನ್ನೂ ಓದಿ: ಭೂದಾಖಲೆಗಳಲ್ಲಿ ದೋಷ ಇದ್ದರೆ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ! ಬಿಗ್ ಅಲರ್ಟ್

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಮೂಲಕ ನಿಮ್ಮ ಸ್ವಂತ ಮನೆ (Own House) ಕನಸು ನನಸಾಗಿಸಿಕೊಳ್ಳಬಹುದು. ನಗರ ಪ್ರದೇಶದಲ್ಲಿ ಮನೆ ಕಟ್ಟಲು 2.67 ಲಕ್ಷ ರೂ.ವರೆಗೆ ಸಾಲ (Loan) ಬಡ್ಡಿ ರಿಯಾಯಿತಿ ಸಿಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನೇರವಾಗಿ ₹1.2 ರಿಂದ ₹1.3 ಲಕ್ಷವರೆಗೆ ಹಣವನ್ನು ಸರ್ಕಾರ ನೀಡುತ್ತದೆ.

ಪಿಎಂ ಆವಾಸ್ ಯೋಜನೆ

ನಿಮ್ಮ ವರ್ಷಿಕ ಆದಾಯವನ್ನು ಆಧರಿಸಿ EWS, LIG ಅಥವಾ MIG (Middle Income Group) ವರ್ಗವಾಗಿ ಅಪ್ಲೈ ಮಾಡಬಹುದು. pmaymis.gov.in ನಲ್ಲಿ ಅಥವಾ ಸ್ಥಳೀಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

ಅಟಲ್ ಪಿಂಚಣಿ ಯೋಜನೆ (APY) ಮೂಲಕ 60 ವರ್ಷ ನಂತರ ನೀವು ಆಯ್ದ ಪ್ಲಾನ್‌ಗೆ ಅನುಗುಣವಾಗಿ ₹1,000 ರಿಂದ ₹5,000 ವರೆಗೆ ಗ್ಯಾರಂಟೀ ಪಿಂಚಣಿ ಸಿಗುತ್ತದೆ. 18-40 ವಯಸ್ಸಿನವರು, ಬ್ಯಾಂಕ್ ಖಾತೆ ಇರುವವರು ಸೇರಬಹುದು. ಆದರೆ ಇನ್‌ಕಮ್ ಟ್ಯಾಕ್ಸ್ (Income Tax) ಕಟ್ಟದವರೇ ಇದರಲ್ಲಿ ಸೇರಬಹುದಾಗಿದೆ. ಇದರ ಮಾಸಿಕ ಹೂಡಿಕೆ ಕಡಿಮೆಯಾಗಿರುತ್ತದೆ. ಬ್ಯಾಂಕ್‌ನಲ್ಲಿ ನೇರವಾಗಿ ಈ ಯೋಜನೆಗೆ ಸೇರಬಹುದಾಗಿದೆ.

ಇದನ್ನೂ ಓದಿ: ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಪಶುಪಾಲನಾ ಯೋಜನೆ 2025ಕ್ಕೆ ಅರ್ಜಿ ಸಲ್ಲಿಸಿ

ಈ ಎಲ್ಲಾ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಭದ್ರತೆಯ ಜೊತೆಗೆ ಭರವಸೆ ನೀಡುತ್ತಿದೆ. ಕೇವಲ ನಿಮ್ಮ ದಾಖಲೆಗಳನ್ನು ತಯಾರಾಗಿ ಇಟ್ಟುಕೊಂಡರೆ ಸಾಕು, ಸರಳ ಪ್ರಕ್ರಿಯೆಯಿಂದ ಯೋಜನೆಗಳಲ್ಲಿ ಸೇರಬಹುದು.

Top 5 Free Govt Schemes, Health, Housing and Monthly Pension for All

Related Stories