India NewsCrime News

ಪತ್ನಿ ಕೊಂದು ಶವದೊಂದಿಗೆ ರಾತ್ರಿ ಕಳೆದ ಗಂಡ ಬೆಳಿಗ್ಗೆ ಪೊಲೀಸರಿಗೆ ಶರಣು

ತ್ರಿಪುರದಲ್ಲಿ ಗಂಡನ ಕ್ಷಣಿಕ ಕೋಪ ಪತ್ನಿಯ ಪ್ರಾಣ ತೆಗೆದ ಭೀಕರ ಘಟನೆ. ಪತ್ನಿಯನ್ನು ಹತ್ಯೆ ಮಾಡಿದ ಗಂಡ, ರಾತ್ರಿ ಮನೆಯಲ್ಲೇ ಉಳಿದು ಬೆಳಿಗ್ಗೆ ಪೊಲೀಸರ ಮುಂದೆ ಶರಣು

  • ಕ್ಷಣಿಕ ಕೋಪ ಗಂಭೀರ ರೂಪ ಪಡೆದು ಪತ್ನಿಯ ಹತ್ಯೆಗೆ ಕಾರಣ.
  • ಹತ್ಯೆ ಮಾಡಿದ ನಂತರ ಇಡೀ ರಾತ್ರಿ ಪತ್ನಿಯ ಶವದೊಂದಿಗೆ ಕಳೆದ ಗಂಡ
  • ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿ ಶರಣಾದ ಆರೋಪಿ.

ತ್ರಿಪುರದ ಪಶ್ಚಿಮ ಭಾಗದ ಅಮ್ತಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯನ್ನು ಗಂಡನೇ ಹತ್ಯೆ ಮಾಡಿದ ಭಯಾನಕ ಘಟನೆ ನಡೆದಿದೆ. ಕೋಪದಲ್ಲಿ ಈ ಕ್ರೂರ ಕೃತ್ಯ ಎಸಗಿದ ಆರೋಪಿ, ತಡರಾತ್ರಿ ಪತ್ನಿಯ ಶವದೊಂದಿಗೆ ಮನೆಯಲ್ಲಿಯೇ ಉಳಿದುಕೊಂಡು, ಬೆಳಿಗ್ಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ

ಸಂಸಾರದಲ್ಲಿ ಕಲಹ, ಪ್ರಾಣವನ್ನೇ ತೆಗೆದ ಗಂಡ

ಮಂಗಳವಾರ ರಾತ್ರಿ ಶ್ಯಾಮ್‌ಲಾಲ್ ದಾಸ್ ಹಾಗೂ ಪತ್ನಿ ಸ್ವಪ್ನಾ ನಡುವೆ ಗಂಭೀರ ವಾಗ್ವಾದ ಸಂಭವಿಸಿದೆ. ಮಾತಿನ ಚಕಮಕಿ ಕೋಪಕ್ಕೆ ತಿರುಗಿ, ಕ್ಷಣಿಕ ಆಕ್ರೋಶದಲ್ಲಿ ಶ್ಯಾಮ್‌ಲಾಲ್ ಭಾರೀ ವಸ್ತುವಿನಿಂದ ಪತ್ನಿಗೆ ತೀವ್ರವಾಗಿ ಹೊಡೆದಿದ್ದಾನೆ. ಪತ್ನಿ ತಕ್ಷಣವೇ ನೆಲಕ್ಕುರುಳಿದ್ದು, ಜೀವ ಕಳೆದುಕೊಂಡಿದ್ದಾಳೆ.

ಪತ್ನಿ ಕೊಂದು ಶವದೊಂದಿಗೆ ರಾತ್ರಿ ಕಳೆದ ಗಂಡ ಬೆಳಿಗ್ಗೆ ಪೊಲೀಸರಿಗೆ ಶರಣು

ಕುಡುಕ ಗಂಡನಿಂದ ಬೇಸತ್ತು ಸಾಲ ವಸೂಲಾತಿ ಏಜೆಂಟ್‌ ಜೊತೆ ಮಹಿಳೆ ಪರಾರಿ

ರಾತ್ರಿ ಪತ್ನಿಯ ಮೃತದೇಹದ ಜೊತೆಗೆ ಉಳಿದ ಗಂಡ

ಹತ್ಯೆ ಮಾಡಿದ ನಂತರ ಆತ ಹೆದರುತ್ತಾ ಮನೆಯಲ್ಲಿ ಉಳಿದುಕೊಂಡು, ಈಗ ಏನು ಮಾಡಬೇಕು ಎಂಬ ಗೊಂದಲದಲ್ಲಿ ಕಳೆದಿದ್ದಾನೆ. ಬೆಳಿಗ್ಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಆತ, ಸಂಪೂರ್ಣ ಘಟನೆ ವಿವರಿಸಿ ಶರಣಾಗಿದ್ದಾನೆ.

ಪೊಲೀಸರ ತನಿಖೆ ಮುಂದುವರಿಯುತ್ತಿದೆ

ಆರೋಪಿ ನೀಡಿದ ಮಾಹಿತಿಯು ಪೊಲೀಸರನ್ನು ಬೆಚ್ಚಿಬೀಳಿಸಿದೆ. ತಕ್ಷಣವೇ ಶ್ಯಾಮ್‌ಲಾಲ್ ದಾಸನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯು ಮುಂದುವರೆದಿದೆ.

ಏನೇ ಆಗಲಿ ಕೇವಲ ಒಂದು ಕ್ಷಣದ ಕೋಪ, ಒಬ್ಬರ ಜೀವ ಹಾಗೂ ಇನ್ನೊಬ್ಬರ ಜೀವನವನ್ನೇ ಹಾಳುಮಾಡುವಂತೆ ಮಾಡಿರುವುದು ದುರದೃಷ್ಟಕರ.

Tripura Man Kills Wife in Rage, Surrenders Next Morning

English Summary

Our Whatsapp Channel is Live Now 👇

Whatsapp Channel

Related Stories