ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತಕ್ಕೆ ಇಬ್ಬರು ಬಲಿ

ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಪ್ರವಾಸಿ ಪ್ರದೇಶವಾದ ಗುಲ್ಮಾರ್ಗ್ನಲ್ಲಿರುವ ಸ್ಕೀ ರೆಸಾರ್ಟ್ನಲ್ಲಿ ಭಾರಿ ಹಿಮಕುಸಿತ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 19 ಜನರನ್ನು ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಏಕಾಏಕಿ ಹಿಮ ಬಿದ್ದಿದ್ದರಿಂದ ಪ್ರವಾಸಿಗರು ಭಯಭೀತರಾಗಿದ್ದರು. ಇದನ್ನು ಬಾರಾಮುಲ್ಲಾ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾಶ್ಮೀರ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲು. ಜನಪ್ರಿಯ ಗಿರಿಧಾಮ ಸೋನಾಮಾರ್ಗ್ನಲ್ಲಿ ಇತ್ತೀಚೆಗೆ ಕನಿಷ್ಠ ತಾಪಮಾನ ದಾಖಲಾಗಿದ್ದರಿಂದ ಹಿಮಪಾತ ಸಂಭವಿಸಿದೆ.
ಆದರೆ ಆಗ ಯಾರಿಗೂ ಯಾವುದೇ ಅವಘಡ ಸಂಭವಿಸಿಲ್ಲ ಎಂಬುದು ಗಮನಾರ್ಹ. ಕಳೆದ ತಿಂಗಳು ಟಿಬೆಟ್ನ ನೈಋತ್ಯ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿತ್ತು. ಭಾರೀ ಹಿಮಪಾತದಿಂದಾಗಿ 8 ಮಂದಿ ಸಾವನ್ನಪ್ಪಿದ್ದಾರೆ.
Two Killed As Heavy Avalanche Engulfs Ski Resort In Gulmarg Jammu And Kashmir
ನಾಳೆಯ ದಿನ ಭವಿಷ್ಯ: 11-11-2026, ಬುಧವಾರ
Read the story
ಹಾಸನಾಂಬೆ ದರ್ಶನದ ಅವಧಿ ವಿಸ್ತರಣೆ; ಬಿಗ್ ಅಪ್ಡೇಟ್
Read the story
ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮುಕ್ತಾಯ; ಲಕ್ಷಾಂತರ ಕಾರ್ಡುಗಳು ರದ್ದು
Read the story
ಕರ್ನಾಟಕ ಬರ ಪರಿಹಾರ ಹಣದಲ್ಲೂ ಕತ್ತರಿ
Read the story
KSRTC ಲಗೇಜ್ ಶುಲ್ಕ ಹೆಚ್ಚಳ; ಇಂದಿನಿಂದಲೇ ಹೊಸ ದರ ಜಾರಿ
Read the story
ಪಿಎಂ ಕಿಸಾನ್ ಹಣ ಇನ್ನೂ ಬಂದಿಲ್ವ? ತಕ್ಷಣ ಈ ಕೆಲಸ ಮಾಡಿ
Read the story



