ಜರ್ಮನಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್‌ ಬೆದರಿಕೆ

Story Highlights

Vistara flight : ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್‌ ಬೆದರಿಕೆ ಬಂದಿದೆ.

Vistara flight : ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ (Frankfurt) ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್‌ ಬೆದರಿಕೆ (bomb threat) ಬಂದಿದೆ. ವಿಸ್ತಾರಾ ಏರ್ಲೈನ್ಸ್ ಬೋಯಿಂಗ್ 787 ವಿಮಾನವು 134 ಪ್ರಯಾಣಿಕರು ಮತ್ತು 13 ಸಿಬ್ಬಂದಿಗಳೊಂದಿಗೆ ಮಂಗಳವಾರ ರಾತ್ರಿ 8:20 ಕ್ಕೆ (ಸ್ಥಳೀಯ ಕಾಲಮಾನ) ಫ್ರಾಂಕ್‌ಫರ್ಟ್‌ನಿಂದ ಮುಂಬೈಗೆ ಹೊರಟಿತು.

ವಿಮಾನ ಟೇಕ್ ಆಫ್ ಆದ ನಂತರ, ಭದ್ರತಾ ಎಚ್ಚರಿಕೆ ಬಂದಿದೆ, ಎಚ್ಚೆತ್ತ ಸಿಬ್ಬಂದಿ ವಿಮಾನದ ಸಂಪೂರ್ಣ ತಪಾಸಣೆ ನಡೆಸಿದರು.

ಬುಧವಾರ ಬೆಳಗ್ಗೆ 7.45ಕ್ಕೆ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ವಿಸ್ತಾರಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ, ಸುರಕ್ಷತೆ ತಪಾಸಣೆಗಾಗಿ ವಿಮಾನವನ್ನು ಪ್ರತ್ಯೇಕ ರನ್‌ವೇಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಏತನ್ಮಧ್ಯೆ, ದೇಶದಲ್ಲಿ ವಿಮಾನಗಳಿಗೆ ಸತತ ಬೆದರಿಕೆಗಳು ಕೋಲಾಹಲಕ್ಕೆ ಕಾರಣವಾಗಿವೆ. ಕಳೆದ ಮೂರು ದಿನಗಳಲ್ಲಿ 19 ವಿಮಾನಗಳಿಗೆ ಬೆದರಿಕೆ ಬಂದಿರುವುದು ಗೊತ್ತಾಗಿದೆ.

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 24 ಮಂದಿ ಸಾವು, ಸುಮಾರು 15 ಮಂದಿ ಅಸ್ವಸ್ಥ

3 ದಿನಗಳಲ್ಲಿ 19 ವಿಮಾನಗಳಿಗೆ ಬಾಂಬ್ ಬೆದರಿಕೆ

ದೇಶದಲ್ಲಿ ವಿಮಾನಗಳಿಗೆ ಸತತ ಬೆದರಿಕೆಗಳು ಸಂಚಲನ ಮೂಡಿಸುತ್ತಿವೆ. ಕಳೆದ ಮೂರು ದಿನಗಳಲ್ಲಿ 19 ವಿಮಾನಗಳಿಗೆ ಬೆದರಿಕೆಗಳು ಬಂದಿವೆ. ರಿಯಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಬೆದರಿಕೆಯ ಕಾರಣ ಬುಧವಾರ ಮಸ್ಕತ್‌ಗೆ ತಿರುಗಿಸಲಾಯಿತು.

177 ಪ್ರಯಾಣಿಕರನ್ನು ಹೊತ್ತೊಯ್ದು ಬೆಂಗಳೂರಿಗೆ ತೆರಳುತ್ತಿದ್ದ ಆಕಾಶ ಏರ್‌ಲೈನ್ಸ್ ವಿಮಾನ ದೆಹಲಿಯಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬಾಂಬ್ ಬೆದರಿಕೆ ಬಂದಿದ್ದರಿಂದ ದೆಹಲಿಗೆ ವಾಪಸ್ ಕಳುಹಿಸಲಾಗಿದೆ.

ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಮತೊಬ್ಬ ವ್ಯಕ್ತಿ ಪಾಣಿಪತ್ ನಲ್ಲಿ ಬಂಧನ

ಅದೇ ರೀತಿ ಇಂಡಿಗೋದ ಮುಂಬೈ-ದೆಹಲಿ ವಿಮಾನವನ್ನು ಇದೇ ರೀತಿಯ ಬೆದರಿಕೆಯಿಂದಾಗಿ ಅಹಮದಾಬಾದ್‌ಗೆ ತಿರುಗಿಸಲಾಯಿತು ಮತ್ತು ಲ್ಯಾಂಡ್ ಮಾಡಲಾಗಿದೆ. ಅದೇ ರೀತಿ ಮಂಗಳವಾರ ಏಳು ವಿಮಾನಗಳು ಮತ್ತು ಸೋಮವಾರ ಮೂರು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಪೊಲೀಸರು 17 ವರ್ಷದ ಬಾಲಕ ಮತ್ತು ಇತರ ಕೆಲವರನ್ನು ಬಂಧಿಸಿದ್ದಾರೆ.

Vistara Flight From Frankfurt Lands Safely In Mumbai After Bomb Threat

Related Stories